ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆಯೇ ಟಾಪ್: ಬಿಗ್ ಬಾಸ್ ಅನ್ನು ಮತ್ತಷ್ಟು ರಂಗೇರಿಸಲು 2 ದಿನಗಳಿಗೆ ಟಾಪ್ ನಟಿ ಎಂಟ್ರಿ. ಯಾರು ಗೊತ್ತೇ??

ಬಿಗ್ ಬಾಸ್ ಎಂದರೆ ಎಲ್ಲರಿಗು ಫ್ಯಾಸಿನೇಷನ್ ಕುತೂಹಲ ಜಾಸ್ತಿ, ಬಿಗ್ ಮನೆಯೊಳಗೆ ಹೇಗಿರುತ್ತದೆ, ಸ್ಪರ್ಧಿಗಳು ನಿಜಕ್ಕೂ ಎಲ್ಲವನ್ನು ಬಿಟ್ಟು, ಯಾರದ್ದೇ ಸಂಪರ್ಕ ಇಲ್ಲದೆ ಇರುತ್ತಾರಾ ಅಥವಾ ತೆರೆಮರೆಯ ಹಿಂದೆ ಬೇರೆ ರೀತಿಯಲ್ಲೇ ಇರುತ್ತಾ ಎನ್ನುವ ಕುತೂಹಲದಿಂದ ಈ ಶೋ ಇನ್ನಷ್ಟು ರಂಗೇರುತ್ತದೆ. ಈ ವರ್ಷ ನಮ್ಮ ಬಿಗ್ ಬಾಗ್ ಕನ್ನಡ ಸೀಸನ್ 1 ಬಹಳಷ್ಟು ವಿಶೇಷತೆಗಳಿಂದ ಕೂಡಿದೆ, 9 ಪ್ರವೀಣರು ವರ್ಸಸ್ 9 ನವೀನರು ಜೊತೆಗಿನ ಯುದ್ಧ ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಶುರುವಾಗಿದೆ, ಈ ಬಾರಿ ಹಲವು ಸರ್ಪ್ರೈಸ್ ಗಳು ಕೂಡಿದ್ದು, ಸ್ಟಾರ್ ನಟಿಯೊಬ್ಬರು ಬಿಗ್ ನಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ.

ಹೌದು..ಕನ್ನಡದ ಸ್ಟಾರ್ ನಟಿ, ಎಲ್ಲರ ಮೆಚ್ಚಿನ ನಟಿ, ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟು, ಎರಡು ದಿನಗಳ ಕಾಲ ಮನೆಯೊಳಗೆ ಇರುತ್ತಾರೆ ಎಂದು ಮಾಹಿತಿ ಸಿಕ್ಜಿದೆ, ಬಿಗ್ ಬಾಸ್ ಮನೆಯ ರಂಗನ್ನು ಹೆಚ್ಚಿಸಲು ಬರುತ್ತಾರೆ ಎನ್ನಲಾಗುತ್ತಿರುವ ನಟಿ ಮತ್ಯಾರು ಅಲ್ಲ, ದಶಕದಿಂದ ಸ್ಯಾಂಡಲ್ ವುಡ್ ಕ್ವೀನ್ ಎಂದು ಹೆಸರು ಮಾಡಿರುವ ನಟಿ ರಮ್ಯಾ ಅವರು. ರಮ್ಯಾ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ, ಇವರು ನಟನೆಯಿಂದ ದೂರವಿದ್ದು 5 ವರ್ಷಗಳೆ ಕಳೆದಿದ್ದರೂ ಸಹ, ಈಗಲೂ ಅವರ ಮೇಲೆ ಜನರಿಗೆ ಅಭಿಮಾನಿಗಳಿಗೆ ಇರುವ ಪ್ರೀತಿ ನೋಡಿದರೆ ನಿಜಕ್ಕೂ ವಾವ್ ಎನ್ನಿಸುತ್ತದೆ..

ಇದೀಗ ರಮ್ಯಾ ಅವರು ಹೆಚ್ಚಾಗಿ ಕನ್ನಡ ಚಿತ್ರರಂಗದ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ, ನಿನ್ನೆಯಷ್ಟೇ ನಡೆದ ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಸೆಲೆಬ್ರಿಟಿ ಶೋಗೆ ರಮ್ಯಾ ಅವರು ಬಂದು ಸಾಥ್ ನೀಡಿದರು, ಸಿನಿಮಾವನ್ನು ಮೆಚ್ಚಿಕೊಂಡಿರುವ ರಮ್ಯಾ ಅವರು ಬಹಳ ಸಂತೋಷದಿಂದ ಮಾಧ್ಯಮದ ಎದುರು ಮಾತನಾಡಿದರು. ಇದೀಗ ರಮ್ಯಾ ಅವರು ಬಿಗ್ ಬಾಸ್ ಮನೆಯ ಫನ್ ಮತ್ತು ರಂಗು ಹೆಚ್ಚಿ ವಿಶೇಷತೆಯಿಂದ ತುಂಬಿಸು ಎರಡು ದಿನಗಳ ಕಾಲ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗುತ್ತಾರೆ ಎನ್ನುವ ಮಾತುಗಳು ಈಗ ಜೋರಾಗಿಯೇ ಸದ್ದು ಮಾಡುತ್ತಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂದು ಗೊತ್ತಿಲ್ಲ, ಒಟ್ಟಿನಲ್ಲಿ ರಮ್ಯಾ ಅವರು ಬಿಗ್ ಬಾಸ್ ಮನೆಗೆ ಹೋದರೆ, ಬಿಗ್ ಬಾಸ್ ಜನಪ್ರಿಯತೆ ಮತ್ತು ಟಿ.ಆರ್.ಪಿ ಎಲ್ಲವೂ ದುಪ್ಪಟ್ಟಾಗುವುದು ಖಂಡಿತ.