ಊಟ ಮಾಡಿದ ನಂತರ ಅಪ್ಪಿ ತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ, ಧನಲಕ್ಷ್ಮೀ ಕೋಪಗೊಳ್ಳುತ್ತಲೇ. 99 % ಈ ತಪ್ಪು ಮಾಡುತ್ತಾರೆ.

ಮನುಷ್ಯ ಸೇವಿಸುವ ಆಹಾರಕ್ಕೆ ಅದರದ್ದೇ ಆದ ಪ್ರಾಧಾನ್ಯತೆ ಇದೆ. ಆಹಾರ ತಯಾರಿಸಿ, ಅದನ್ನು ಸೇವಿಸುವ ವರೆಗು ಕೆಲವು ನಿಯಮಗಳನ್ನು ಅನುಸರಿಸಬೇಕು. ಹೇಗೆ ತಿನ್ನಬೇಕು, ಹೇಗೆ ಕುಳಿತುಕೊಳ್ಳಬೇಕು, ಎಲ್ಲಿ ತಿನ್ನಬೇಕು ಇದೆಲ್ಲವೂ ಪ್ರತಿಯೊಬ್ಬ ವ್ಯಕ್ತಿಯ ವಿಚಾರದಲ್ಲೂ ಬದಲಾವಣೆ ಆಗುತ್ತದೆ. ಆದರೆ ಊಟ ಮಾಡಿದ ಬಳಿಕ ತಪ್ಪದೆ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಒಂದು ವೇಳೆ ಈ ನಿಯಮಗಳನ್ನು ಅನುಸರಿಸದೆ ಹೋದರೆ ಲಕ್ಷ್ಮೀದೇವಿಯ ಕೋಪಕ್ಕೆ ನೀವು ಗುರಿಯಾಗಬಹುದು. ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾದರೆ, ನೀವು ಬಡತನಕ್ಕೆ ಹೋಗಬಹುದು. ಹಾಗಾಗಿ ಪ್ರತಿಬಾರಿ ಊಟ ಮಾಡುವಾಗ ಈ ಕೆಲವು ನಿಯಮಗಳನ್ನು ತಪ್ಪದೇ ಅನುಸರಿಸಿ..

ತಿಂದಿರುವ ತಟ್ಟೆಯಲ್ಲಿ ಕೈ ತೊಳೆಯುವ ಅಭ್ಯಾಸ ಹಲವು ಜನರಿಗೆ ಇರುತ್ತದೆ. ಆದರೆ ಆ ರೀತಿ ಮಾಡಬಾರದು. ಎಂಜಲು ತಟ್ಟೆಗೆ ಕೈ ತೊಳೆಯುವುದು ಅನ್ನಪೂರ್ಣೇಶ್ವರಿ ದೇವಿ ಮತ್ತು ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಲಕ್ಷ್ಮೀದೇವಿ ಮತ್ತು ಅನ್ನಪೂರ್ಣೇಶ್ವರಿಯ ಕೋಪ ಒಬ್ಬ ವ್ಯಕ್ತಿಯನ್ನು ಬಡತನದ ಕೂಪಕ್ಕೆ ತಳ್ಳಬಹುದು. ಅದರಿಂದ ಈ ಅಭ್ಯಾಸವನ್ನು ಬಿಟ್ಟುಬಿಡಿ. ಇದರ ಜೊತೆಗೆ ಲಕ್ಷ್ಮೀದೇವಿಯನ್ನು ಮೆಚ್ಚಿಸಲು, ನಿಮ್ಮ ಅಡುಗೆ ಮನೆಯಲ್ಲಿ ಆಹಾರದ ಬಗ್ಗೆ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ರಾತ್ರಿ ಮಲಗುವ ಸಮಯದಲ್ಲಿ ಎಂಜಲು ಪತ್ರೆಗಳನ್ನು ಅಡುಗೆ ಮನೆಯಲ್ಲಿ ಇಡಬಾರದು, ಎಂಜಲು ಪಾತ್ರೆಗಳನ್ನು ತೊಳೆದು ಇಡಿ. ಅಡುಗೆ ಮನೆಯನ್ನು ಸ್ವಚ್ಛವಾಗಿಡಿ. ಅಡುಗೆ ಮನೆಯಲ್ಲಿ ಕುಡಿಯುವ ನೀರಿನ ಪಾತ್ರೆಯ ಬಳಿ ದೀಪ ಬೆಳಗಿಸಿ, ಇದರಿಂದ ಲಕ್ಷ್ಮಿದೇವಿಗೆ ಸಂತೋಷ ಆಗುತ್ತದೆ. ಅಡುಗೆ ಮಾಡುವ ಮೊದಲು ಸ್ನಾನ ಮಾಡಿಕೊಳ್ಳಿ. ದಕ್ಷಿಣ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸಬೇಡಿ. ಉತ್ತರ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು, ಆಹಾರ ಸೇವನೆ ಮಾಡುವುದು ಒಳ್ಳೆಯದು. ಎಂದಿಗು ಆಹಾರ ವ್ಯರ್ಥ ಮಾಡಬೇಡಿ, ತಿನ್ನಲು ಸಾಧ್ಯವಾದಷ್ಟನ್ನು ಮಾತ್ರ ತಟ್ಟೆಗೆ ಹಾಕಿಕೊಳ್ಳಿ. ಅನ್ನದಾನ ಮಾಡಿ.