ಅನುಶ್ರೀ ರವರ ದಾಖಲೆಯನ್ನು ಕೂಡ ಮುರಿದ ವಂಶಿಕ: ನಿರೂಪಕಿಯಾಗಿ ಒಂದು ಎಪಿಸೋಡಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿ ಎಲ್ಲರ ಮನಗೆದ್ದಿರುವ ಮುದ್ದು ಮಗು ವಂಶಿಕಾ ಅಂಜನಿ ಕಶ್ಯಪ. ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಈ ಮುದ್ದು ಮಗು ಕಿರುತೆರೆಗೆ ಎಂಟ್ರಿ ಕೊಟ್ಟಿತು, ಯಶಸ್ವಿನಿ ಆನಂದ್ ಹಾಗೂ ವಂಶಿ ಈ ಶೋ ಇಂದ ಮನೆಮಾತಾದರು. ಅದರಲ್ಲೂ ವಂಶಿಯ ಪಟಪಟ ಮಾತುಗಳನ್ನ ಕೇಳಿ ಎಂಜಾಯ್ ಮಾಡದೆ ಇರುವವರು ಸಾಧ್ಯವಿಲ್ಲ. ನನ್ನಮ್ಮ ಸೂಪರ್ ಸ್ಟಾರ್ ಶೋನ ವಿಜೇತಳಾಗಿ ಹೊರಹೊಮ್ಮಿದಳು ವಂಶಿಕಾ.

ಬಳಿಕ ವಂಶಿ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕಾಣಿಸಿಕೊಂಡಳು. ಈ ಶೋನಲ್ಲಿ ವಂಶಿಕಾ ಅಭಿನಯ ನೋಡಿ ಜಡ್ಜ್ ಗಳು, ಶೋಗೆ ಬರುವ ಗೆಸ್ಟ್ ಗಳು ಎಲ್ಲರೂ ಸಹ ಫಿದಾ ಆಗಿದ್ದರು. ಶಾಲೆಗೆ ಹೋಗುತ್ತಲೇ ಈ ಶೋಗಳಲ್ಲಿ ಭಾಗವಹಿಸುತ್ತಿದ್ದಳು ವಂಶಿ. ಇದೀಗ ಈ ಶೋ ಸಹ ಮುಗಿದಿದ್ದು, ವಂಶಿಕಾ ಹಾಗೂ ಶಿವು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆಕ್ಟರ್ ವಿಭಾಗದಲ್ಲಿ ವಂಶಿ, ನಾನ್ ಆಕ್ಟರ್ ವಿಭಾಗದಲ್ಲಿ ಶಿವು ವಿನ್ನರ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಟಿ.ಆರ್.ಪಿ ಮರಳಿ ಬಂದಿದ್ದು ವಂಶಿಕಾ ಇಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಸಹ ವಂಶಿ ಹವಾ ಯಾರಿಗಿಂತಲು ಕಡಿಮೆ ಇಲ್ಲ. ಇದೀಗ ವಂಶಿ ರಿಯಾಲಿಟಿ ಶೋ ನಿರೂಪಣೆ ಸಹ ಮಾಡಲಿದ್ದಾಳೆ ಎಂದು ಪ್ರೊಮೋಗಳ ಮೂಲಕ ತಿಳಿದುಬಂದಿದೆ. ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಶೋ ನಿರೂಪಣೆ ಮಾಡುತ್ತಿದ್ದು, ಈ ಶೋ ನಿರೂಪಣೆಗೆ ಅನುಶ್ರೀ ಅವರನ್ನು ಮೀರಿಸುವಷ್ಟು ಸಂಭಾವನೆ ಪಡೆಯುತ್ತಿದ್ದಾಳೆ ವಂಶಿಕಾ, ಒಂದು ಎಪಿಸೋಡ್ ಗೆ ಬರೋಬ್ಬರಿ 1.8ಲಕ್ಷ ರೂಪಾಯಿ ಸಂಭಾವನೆಯನ್ನು ವಂಶಿಗೆ ನೀಡಲಾಗುತ್ತಿದ್ದು, ಇದು ಅನುಶ್ರೀ ಅವರಿಗಿಂತ ಹೆಚ್ಚಿನ ಸಂಭಾವನೆ ಆಗಿದ್ದು, ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ.