ಈ ಬಾರಿಯ ಬಿಗ್ ಬಾಸ್ ನಲ್ಲಿ ತನ್ನ ನೆಚ್ಚಿನ ಸ್ಪರ್ದಿಗಳನ್ನು ಹೆಸರಿಸಿದ ಶಮಂತ್; ಬೇರೆ ಯಾರು ಸಿಗಲಿಲ್ಲವೇ ಎಂದು ಟ್ರೊಲ್ ಮಾಡಿದ ಜನ.

ಬಿಗ್ ಬಾಸ್ ಕನ್ನಡ ಈ ಹಿಂದಿನ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದ ಸ್ಪರ್ಧಿಗಳಲ್ಲಿ ಒಬ್ಬರು ಶಮಂತ್. ನಿರ್ದೇಶಕನಾಗಿ ಸಿಂಗರ್ ಆಗಿ ಗುರುತಿಸಿಕೊಂಡಿದ್ದ ಶಮಂತ್ ಅವರು ಬಿಗ್ ಬಾಸ್ ಮನೆಗೆ ಬಂದು ಇನ್ನು ಹೆಚ್ಚು ಫೇಮಸ್ ಆದರು. ಇದೀಗ ಶಮಂತ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಭಾಗ್ಯಲಕ್ಷ್ಮಿ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಶಮಂತ್. ಇವರಿಗೆ ಇದು ಮೊದಲ ಧಾರವಾಹಿ ಆಗಿದೆ. ಶಮಂತ್ ಅವರು ಇತ್ತೀಚಿನ ಸಂದರ್ಶನದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ತಮ್ಮ ಮೆಚ್ಚಿನ ಸ್ಪರ್ಧಿ ಬಗ್ಗೆ ಮಾತನಾಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಭಾಗ್ಯಲಕ್ಷ್ಮಿ ಧಾರವಾಹಿ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ, ನಿರೂಪಕಿ ಸುಷ್ಮಾ 10 ವರ್ಷಗಳ ಬಳಿಕ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದಾರೆ, ಪದ್ಮಜಾ ರಾವ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಬ್ರೋ ಗೌಡ ಶಮಂತ್ ಈ ಧಾರವಾಹಿಯಲ್ಲಿ ಸಿಂಗರ್ ಸೆಲೆಬ್ರಿಟಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಶಮಂತ್ ಅವರ ನಿಜ ಜೀವನಕ್ಕೆ ಬಹಳ ಹತ್ತಿರವಾಗಿರುವ ಕಾರಣ ಬೇಗ ಒಪ್ಪಿಕೊಂಡರಂತೆ ಶಮಂತ್. ಧಾರವಾಹಿಯಲ್ಲಿ ಶಮಂತ್ ಅವರ ಪಾತ್ರ ಅಮ್ಮನ ಮುದ್ದಿನ ಮಗ, ಸಿಂಗರ್, ಕುಟುಂಬದಲ್ಲಿ ಎಲ್ಲರ ಜೊತೆಗೂ ನಗುನಗುತ್ತಾ ಚೆನ್ನಾಗಿರುವ ಹುಡುಗ, ಎಲ್ಲರಿಗು ಬೇಕಾದ ಹುಡುಗ, ರಿಲೇಶನ್ಷಿಪ್ ನಲ್ಲಿರುವ ಒಂದು ಅಂಶ ಬಿಟ್ಟು ಇನ್ನೆಲ್ಲವು ನಾನು ನಿಜ ಜೀವನದಲ್ಲಿ ಇರುವ ಹಾಗೆಯೇ ಇದೆ..ಎಂದಿದ್ದಾರೆ ಶಮಂತ್.

ಇನ್ನು ಬಿಗ್ ಬಾಸ್ ಬಗ್ಗೆ ಮಾತನಾಡಿ, “ಬಿಗ್ ಬಾಸ್ ನೋಡುತ್ತಿದ್ದೇನೆ, ಈಗ ಶೂಟಿಂಗ್ ನಲ್ಲಿ ಬ್ಯುಸಿ ಇರೋದ್ರಿಂದ ಪ್ರೊಮೋಗಳನ್ನು ಮಾತ್ರ ನೋಡುತ್ತಿದ್ದೆ. ಪ್ರಶಾಂತ್ ಸಂಬರ್ಗಿ ಅವರು ಅವರು ಇರುವ ರೀತಿ ಇಲ್ಲ, ದಿವ್ಯ ಅವರು ಅಷ್ಟೇ. ದಿವ್ಯ ಅವರು ಸೈಲೆಂಟ್ ಆಗಿದ್ದಾರೆ, ಆಟದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು ತುಂಬಾ ಬೇಗ ಕೋಪ ಮಾಡಿಕೊಳ್ಳುತ್ತಾ ಇದ್ದಾರೆ, ಇನ್ನು ಯಂಗ್ ಆಗಿ ಕಾಣುತ್ತಿದ್ದಾರೆ. ಈ ಸೀಸನ್ ನಲ್ಲಿ ನನಗೆ ರಾಕೇಶ್ ಮತ್ತು ಸೈಕ್ ನವಾಜ್ ತುಂಬಾ ಇಷ್ಟ..” ಎಂದು ಹೇಳಿದ್ದಾರೆ ಶಮಂತ್. ಶಮಂತ್ ಅವರು ಈ ಇಬ್ಬರು ತಮ್ಮ ಫೇವರೆಟ್ ಎಂದು ಹೇಳಿರುವುದಕ್ಕೆ, ಬೇರೆ ಯಾವ ಸ್ಪರ್ಧಿಯು ಇಷ್ಟ ಆಗ್ಲಿಲ್ವಾ ಎಂದು ಶಮಂತ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.