ದೀಪಾವಳಿಗೂ ಮುನ್ನ ಈ ಗಿಡ ನೆಡಿ ಸಾಕು, ಏನಾಗುತ್ತದೆ ಎಂದು ತಿಳಿದರೆ ಇಂದೇ ಹುಡುಕಿಕೊಂಡು ನೆಡುತ್ತಿರಿ. ಜೀವನ ಬದಲಾಯಿಸುವ ನಡೆ.

ದೀಪಾವಳಿ ನಮ್ಮ ಸಂಪ್ರದಾಯದಲ್ಲಿ ಬಹಳ ಮುಖ್ಯವಾದ ಹಬ್ಬಗಳಲ್ಲಿ ಒಂದು, ಇಡೀ ಭಾರತಾದ್ಯಂತ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ಹಬ್ಬ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುವ ಬೆಳಕಿನ ಹಬ್ಬ, ದೀಪಾವಳಿ ಸಮಯದಲ್ಲಿ ನಿಮ್ಮ ಮನೆಯಲ್ಲಿ ಕೆಲವು ಗಿಡಗಳನ್ನು ನೆಟ್ಟರೆ, ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆ ಬರುವುದಿಲ್ಲ. ಆ ಗಿಡಗಳು ಯಾವುವು ? ಇವುಗಳಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?ತಿಳಿಸುತ್ತೇವೆ ನೋಡಿ..

ಕಮಲದ ಗಿಡ :- ಕಮಲದ ಹೂವು ಲಕ್ಷ್ಮೀದೇವಿ ತುಂಬಾ ಇಷ್ಟಪಡುವ ಹೂವು, ಇದು ಲಕ್ಷ್ಮೀದೇವಿಗೆ ಸಂಬಂಧಪಟ್ಟ ಹೂ ಆಗಿರುವುದರಿಂದ ಈ ಗಿಡವನ್ನು ನಿಮ್ಮ ಮನೆಯಲ್ಲಿ ನೆಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿ ತುಳುಕುತ್ತದೆ. ನಿಮ್ಮ ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಈ ಗಿಡವನ್ನು ನೆಡಬೇಕು.
ದಾಸವಾಳ ಗಿಡ :- ವಾಸ್ತುಶಾಸ್ತ್ರದ ಪ್ರಕಾರ ಬಹಳ ಮಂಗಳಕರವಾದ ಹೂವು ದಾಸವಾಳ, ಆಂಜನೇಯ ಸ್ವಾಮಿ ಮತ್ತು ದುರ್ಗಾದೇವಿಗೆ ದಾಸವಾಳ ಹೂವನ್ನು ಅರ್ಪಿಸಿ ಪೂಜೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಮ್ಮ ಮನೆಯಲ್ಲಿ ದಾಸವಾಳ ಗಿಡ ನೆಡುವುದರಿಂದ ಲಕ್ಷ್ಮೀದೇವಿ ಸಂತೋಷವಾಗುತ್ತಾರೆ ಹಾಗು ನಿಮ್ಮ ಮನೆಯಲ್ಲಿ ತೊಂದರೆಗಳನ್ನು ದೂರ ಮಾಡುತ್ತಾರೆ ಎನ್ನುವ ನಂಬಿಕೆ ಇದೆ.

ಬಾಳೆಗಿಡ :- ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಾಳೆಗಿಡಕ್ಕೆ ವಿಶೇಷವಾದ ಮಹತ್ವವಿದೆ. ಆಲದ ಮರದಲ್ಲಿ ಮಹಾವಿಷ್ಣು ನೆಲೆಸಿರುತ್ತಾರೆ, ವಿಷ್ಣುವಿನ ಪತ್ನಿ ಲಕ್ಷ್ಮೀದೇವಿ. ದೀಪಾವಳಿ ಹಬ್ಬದ ಸಮಯದಲ್ಲಿ ನಿಮ್ಮ ಮನೆಯಲ್ಲಿ ಬಾಳೆಗಿಡ ನೆಟ್ಟರೆ, ವಿಷ್ಣುವಿನ ಜೊತೆಗೆ ಲಕ್ಷ್ಮೀದೇವಿಯ ಆಶೀರ್ವಾದ ಸಹ ನಿಮಗೆ ಸಿಗುತ್ತದೆ. ವಿಷ್ಣುವಿನ ಆಶೀರ್ವಾದ ನಿಮ್ಮ ಮನೆಯಲ್ಲೇ ಉಳಿಯುತ್ತದೆ. ಜೀವನದಲ್ಲಿ ಯಾವುದೇ ಬಿಕ್ಕಟ್ಟುಗಳು ನಿಮಗೆ ತೊಂದರೆ ಕೊಡುವುದಿಲ್ಲ.
ತುಳಸಿ ಗಿಡ :- ತುಳಸಿ ಗಿಡ ಲಕ್ಷ್ಮಿಯ ನಿವಾಸ ಎಂದು ಹೇಳುತ್ತಾರೆ. ದೀಪಾವಳಿ ಹಬ್ಬದಂದು ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ತಾಯಿ ಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಮನೆಯ ವ್ಯಕ್ತಿಗಳಿಗೆ ಎಲ್ಲಾ ಅನುಕೂಲಗಳು ಸಿಗುತ್ತದೆ, ಜೀವನದಲ್ಲಿ ಯಾವುದೇ ಕೊರತೆ ಆಗುವುದಿಲ್ಲ. ಹಾಗೆಯೇ ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ತುಳಸಿ ಗಿಡ ನೆಡಬಾರದು ಎಂದು ನನಪಿನಲ್ಲಿ ಇಟ್ಟುಕೊಳ್ಳಿ.

ಮಣಿ ಪ್ಲಾಂಟ್ :- ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಗೆ ವಿಶೇಷ ಮಹತ್ವ ಇದೆ. ಈ ಗಿಡ ನೆಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಆಗುವುದಿಲ್ಲ. ಈ ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮಾತ್ರ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಹಾಗೆ ಒಬ್ಬ ವ್ಯಕ್ತಿ ಮನಿ ಪ್ಲಾಂಟ್ ನೆಟ್ಟರೆ ಮಾತ್ರ ಉತ್ತಮ ಫಲಿತಾಂಶ ಪಡೆಯುತ್ತಾನೆ.