ಸ್ವಂತ ಮನೆ ಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಸ್ವತಃ ಶಿವ ಹೇಳಿದ ರಹಸ್ಯವೇನು ಗೊತ್ತೆ??

ಸ್ವಂತ ಮನೆ ಬೇಕು ಎನ್ನುವುದು ಎಲ್ಲಾ ಹೆಣ್ಣುಮಕ್ಕಳ ಆಸೆ ಆಗಿರುತ್ತದೆ, ಅವರಿಗಾಗಿ ಒಂದು ಸೂರು ಬೇಕು ಎಂದು ಬಯಸುವುದರಲ್ಲಿ ತಪ್ಪೇನು ಇಲ್ಲ. ಗಂಡಸರಿಗೂ ಇದೆ ರೀತಿ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಆಸೆ ಶುರುವಾದರೆ ಹೆಂಗಸರ ಸಂತೋಷಕ್ಕೆ ಪಾರವೇ ಇಲ್ಲ. ಸ್ವಂತ ಮನೆ ಇರುವ ಹಣ್ಣಿನ ಸಂತೋಷ ಹೇಗಿರುತ್ತದೆ ಎಂದು ವರ್ಣಿಸಲು ಪದಗಳು ಕೂಡ ಸಾಲದು. ಹೀಗೆ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಬಯಸಿದರೆ, ಏನು ಮಾಡಬೇಕು ಎಂದು ಒಂದು ಕಥೆಯ ರೂಪದಲ್ಲಿ ತಿಳಿಸುತ್ತೇವೆ.. ಒಂದು ದಿನ ಪಾರ್ವತಿ ದೇವಿಯು ಸಾಕ್ಷಾತ್ ಶಿವನ ಬಳಿ, ಸ್ವಾಮಿ ನಮಗೆ ಒಂದು ಸ್ವಂತ ಮನೆ ಬೇಕು ಎಂದು ಕೇಳುತ್ತಾರೆ. ಆಗ ಶಿವನು, ದೇವಿ ಈ ಹಿಮ ಪ್ರಕೃತಿಯ ಸೊಬಗು ಇಷ್ಟವಿಲ್ಲವೇ,, ಎಂದು ಕೇಳುತ್ತಾರೆ. ಆಗ ಪಾರ್ವತಿ ದೇವಿಯು, ಮಕ್ಕಳು ಬೆಳೆಯುತ್ತಿದ್ದಾರೆ, ಅವರಿಗೆ ಮದುವೆ ಮಾಡುವ ಸಮಯಕ್ಕೆ, ಹುಡುಗಿಯ ಕಡೆಯವರು ಎಷ್ಟು ಆಸ್ತಿ ಇದೆ ಎಂದು ಕೇಳುತ್ತಾರೆ, ಹಾಗಾಗಿ ನಮ್ಮ ಪ್ರಪಂಚದಲ್ಲಿ ಒಂದು ಒಳ್ಳೆಯ ಮನೆ ಕಟ್ಟಿಸಿಕೊಳ್ಳೋಣ ಎಂದು ಹೇಳುತ್ತಾರೆ. ಆಗ ಶಿವನು ವಿಶ್ವಕರ್ಮನನ್ನು ಕರೆಸಿ, ಒಂದು ಮನೆ ಕಟ್ಟಿಸುತ್ತಾರೆ.

ಮನೆ ಕಟ್ಟಿಸಿ ಪೂರ್ತಿಯಾದ ಬ್ರಾಹ್ಮಣ ರಾವಣರನ್ನು ಮನೆಯ ಗೃಹಪ್ರವೇಶಕ್ಕೆ ಕರೆಯಲಾಯಿತು. ಆಗ ರಾವಣರು ಬ್ರಾಹ್ಮಣೋತ್ತಮರಾಗಿ, ಎಲ್ಲಾ ಶಾಸ್ತ್ರಗಳನ್ನು ತಿಳಿದುಕೊಂಡಿದ್ದನು. ಶಿವಭಕ್ತರೊಬ್ಬರ ಕಡೆಯಿಂದ, ರಾವಣನಿಗೆ ಸಂದೇಶ ಹೋದಾಗ, ಸಾಕ್ಷಾತ್ ಶಿವನೆ ತನ್ನನ್ನು ಅವರ ಮನೆಗೆ ಕರೆಸಿಕೊಳ್ಳುತ್ತಿದ್ದಾರೆ ಎಂದು ರಾವಣ ಬಹಳ ಸಂತೋಷಪಟ್ಟನು. ಶಿವ ಪಾರ್ವತಿ ಅವರ ಮನೆಯನ್ನು ನೋಡಿ ಆಶ್ಚರ್ಯಪಟ್ಟ ರಾವಣನು, ತನಗೂ ಇಂಥದ್ದೊಂದು ಮನೆ ಇದ್ದರೆ ಚೆನ್ನಾಗಿರುತ್ತದೆ ಮನಸಲ್ಲೇ ಎಂದು ಅಂದುಕೊಂಡನು. ಇದನ್ನರಿತ ಶಿವ ತಥಾಸ್ತು ಎಂದರು. ಮನೆಯ ಗೃಹಪ್ರವೇಶಕ್ಕೆ ಲಕ್ಷ್ಮೀದೇವಿ,.ವಿಷ್ಣುದೇವ, ಬ್ರಹ್ಮದೇವ ಎಲ್ಲರೂ ಬಂದು ವಿಶ್ವಕರ್ಮ ದೊಡ್ಡ ಮನೆಯನ್ನು ಕಟ್ಟಿದ್ದಾರೆ ಎಂದು ಹೇಳಿದರು. ಜೊತೆಗೆ ರಾವಣ ಬ್ರಹ್ಮ ಪೂಜೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ, ಇಷ್ಟು ಚೆನ್ನಾಗಿ ಮಂತ್ರ ಹೇಳುವುದನ್ನು ನಾನು ನೋಡಿಯೇ ಇಲ್ಲ ಎಂದು ಎಲ್ಲರೂ ಹೇಳಿದರು.

ರಾವಣ ಮಾಡಿದ ಪೂಜೆಯನ್ನು ಎಲ್ಲರೂ ಹೊಗಳಿದ್ದನ್ನು ನೋಡಿ ಪಾರ್ವತಿ ದೇವಿಗೆ ಬಹಳ ಸಂತೋಷವಾಗಿ, ಮಗು ರಾವಣ ನಿನಗೆ ಏನು ಬೇಕೋ ಕೇಳು ಎಂದು ಹೇಳಿದರು, ಆಗ ಶಿವನು ಪಾರ್ವತಿಯ ಕಡೆಗೆ ನೋಡಿ, ಪಾರ್ವತಿ ಏನು ಬೇಕೋ ಕೇಳು ಎಂದು ಹೇಳುವುದು ಒಳ್ಳೆಯದಲ್ಲವೇನೋ ಒಂದು ಸಾರಿ ಆಲೋಚನೆ ಮಾಡು ಎಂದು ಹೇಳುತ್ತಾರೆ. ಆಗ ಪಾರ್ವತಿ ದೇವಿ ಈ ಸಂತೋಷದ ಸಮಯದಲ್ಲಿ ರಾವಣ ಏನು ಕೇಳಿದರು ಕೊಟ್ಟುಬಿಡುತ್ತೇನೆ ಎಂದು ಹೇಳುತ್ತಾರೆ. ಆಗ ರಾವಣನು, ತಾಯಿ ನಿಮಗೆ ಅಭ್ಯಂತರವಿಲ್ಲದಿದ್ದರೆ ಈ ಮನೆಯನ್ನು ನನಗೆ ಕೊಟ್ಟುಬಿಡಿ ಎಂದ್ ಹೇಳುತ್ತಾನೆ. ಆಗ ಪಾರ್ವತಿದೇವಿ ಆಶ್ಚರ್ಯದಿಂದ ಪರಮೇಶ್ವರನ ಕಡೆಗೆ ನೋಡುತ್ತಾರೆ, ಆಗ ಸಾಕ್ಷಾತ್ ಪರಮೇಶ್ವರನು, ಪಾರ್ವತಿ ದೇವಿ ನಮ್ಮನ್ನು ನಾವು ಇದೊಂದು ಮನೆಗೆ ಸೀಮಿತಗೊಳಿಸಿಕೊಂಡರೆ ಲೋಕದ ಜನರು ಹತಾಶೆಗೊಳ್ಳುತ್ತಾರೆ, ಲೋಕಕಲ್ಯಾಣಕ್ಕೆ ನಾವೇ ಮೊದಲ ದಂಪತಿಗಳು, ಲೋಕಕಲ್ಯಾಣಕ್ಕಾಗಿ ನಾವು ಪ್ರತಿಯೊಬ್ಬ ಮನೆಯಲ್ಲೂ ಇರಬೇಕು. ಈ ವಿಶ್ವದ ಪ್ರತಿಯೊಂದು ಮನೆಯು ನಮ್ಮ ಮನೆ ಆಗಿರಬೇಕು ಎಂದು ಶಿವನು ಹೇಳಿದಾಗ, ಪಾರ್ವತಿ ದೇವಿಗೆ ಅರ್ಥವಾಯಿತು.

ಇದೆಲ್ಲವೂ ಶಿವನ ಲೀಲೆ ಎಂದು ಅರ್ಥಮಾಡಿಕೊಂಡ ಪಾರ್ವತಿ ದೇವಿ ಹಾಗೆ ಆಗಲಿ ಸ್ವಾಮಿ ಎಂದು ಮನೆಯನ್ನು ರಾವಣನಿಗೆ ನೀಡಿದರು, ಈಗಲೂ ಆ ಮನೆ ಲಂಕಾನಗರದಲ್ಲಿದೆ..ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಏನೆಂದರೇ, ಶಿವ ಪಾರ್ವತಿಯರು ಇಲ್ಲದೆ, ಅವರನ್ನು ಅಲ್ಲೆ ಮಾಡದೆ ಮನೆಯಲ್ಲಿ ಶಂಕುಸ್ಥಾಪನೆ, ಗೃಹಪ್ರವೇಶ, ಇಂಥ ಯಾವ ಕಾರ್ಯಕ್ರಮವನ್ನು ಮಾಡಬಾರದು ಎನ್ನುವ ನಿಯಮವನ್ನು ಮನೆ ಕಟ್ಟುವ ಎಲ್ಲರೂ ಕೂಡ ಪಾಲಿಸಬೇಕು. ಹಾಗಾಗಿ ಜಾಗ ಖರೀದಿಸಿ ಶಂಕುಸ್ಥಾಪನೆ ಮಾಡಿದಾಗ, ಶಿವ ಪಾರ್ವತಿಯರ ಭಾವಚಿತ್ರವನ್ನು ಇಟ್ಟು ಶಂಕುಸ್ಥಾಪನೆ ಮಾಡಿ, ಇದರಿಂದ ಶಿವ ಪಾರ್ವತಿಯ ಕೃಪೆಗೆ ಪಾತ್ರರಾಗುತ್ತೀರಿ. ದೇವರ ವಿಚಾರಗಳಿಂದ ಪ್ರತಿ ಮನೆಯ ಶಂಕುಸ್ಥಾಪನೆ ನಡೆಯಬೇಕು. ಪ್ರತಿ ಮನೆಯಲ್ಲೂ ಶಿವ ಪಾರ್ವತಿ ಇರುತ್ತಾರೆ. ಶಿವನ ಆಜ್ಞೆಯಿಲ್ಲದೆ ಒಂದು ಇರುವೆ ಕೂಡ ಕಚ್ಚುವುದಿಲ್ಲ. ಹಾಗಾಗಿ ಮನೆ ಬೇಕು ಎಂದು ಹಂಬಲಿಸುತ್ತಿರುವವರು ಶಿವ ಪಾರ್ವತಿಯನ್ನು ಪ್ರಾರ್ಥಿಸಿದರೆ ಅವರಿಗೆ ಮನೆ ಸಿಗುತ್ತದೆ.