ಕಾಂತಾರ ಸಿನೆಮಾದಲ್ಲಿ ಫಾರೆಸ್ಟ್ ಗಾರ್ಡ್: ನಿಜ ಜೀವನದಲ್ಲಿ ಸಕತ್ ಕ್ಯೂಟ್: ಹೇಗಿದೆ ಗೊತ್ತೇ ಸಪ್ತಮಿ ರವರ ನಿಜವಾದ ಲುಕ್.

ಈಗ ಎಲ್ಲೆಡೆ ಕಾಂತಾರ ಸಿನಿಮಾದೇ ಹವಾ ಆಗಿದೆ. ಕನ್ನಡ ಸಿನಿಮಾ ಒಂದಕ್ಕೆ ಬೇಡಿಕೆ ಹೆಚ್ಚಾಗಿ, ಬೇರೆ ಭಾಷೆಯ ಸಿನಿಮಾ ಜನರು ನಮ್ಮ ಭಾಷೆಗೆ ಸಿನಿಮಾ ಡಬ್ ಮಾಡಿಕೊಡಿ ಎಂದು ಹೇಳುವ ಮಟ್ಟಕ್ಕೆ ಬೆಳೆದು ನಿಂತಿದೆ ಕಾಂತಾರ ಸಿನಿಮಾ. ಕನ್ನಡದಲ್ಲಿ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಈಗ ಹಿಂದಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಕಾಂತಾರ ಸಿನಿಮಾದಲ್ಲಿ ನಾಯಕ ಶಿವನ ಪಾತ್ರ ಜನರಿಗೆ ಎಷ್ಟು ಇಷ್ಟ ಆಗಿದೆಯೋ, ನಾಯಕಿ ಲೀಲಾ ಪಾತ್ರ ಕೂಡ ಅಷ್ಟೇ ಇಷ್ಟ ಆಗಿದೆ.

ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಸಪ್ತಮಿ ಗೌಡ ಅವರು ಲೀಲಾ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಅಪ್ಪಟ ಹಳ್ಳಿ ಹುಡುಗಿ ಲುಕ್ ನಲ್ಲಿ ಸಪ್ತಮಿ ಗೌಡ ಅವರು ಕಾಣಿಸಿಕೊಂಡಿದ್ದು, ಹಳ್ಳಿಯಲ್ಲಿರುವ ಹುಡುಗಿಯ ಹಾಗೆ ಸೀರೆ ಲಂಗಾ ದಾವಣಿ, ಬಿಟ್ಟರೆ ಫಾರೆಸ್ಟ್ ಗಾರ್ಡ್ ಕಾಸ್ಟ್ಯೂಮ್ ನಲ್ಲಿ ಬಹಳ ಸರಳವಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಸಿಂಪಲ್ ಬ್ಯೂಟಿ ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ಶಿವ ಲೀಲಾ ಜೋಡಿಯ ಕೆಮಿಸ್ಟ್ರಿ ಎಲ್ಲರಿಗೂ ಬಹಳ ಇಷ್ಟ ಆಗಿದೆ.

ಇನ್ನು ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಸಹ ಜನರಿಗೆ ಬಹಳ ಇಷ್ಟವಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಹಾಗೆ ಕಾಣಿಸಿಕೊಂಡಿರುವ ಸಪ್ತಮಿ ಗೌಡ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ಇವರು ಮೂಲತಃ ಬೆಂಗಳೂರಿನವರು ಎಂದು ಹೇಳಿದರೆ ನಂಬುವುದು ಕಷ್ಟವೇ. ಸಪ್ತಮಿ ಗೌಡ ಅವರು ನಿಜ ಜೀವನದಲ್ಲಿ ಬಹಳ ಸಿಂಪಲ್ ಆದರೆ ಹಳ್ಳಿ ಹುಡುಗಿಯ ಹಾಗಲ್ಲ, ಸಪ್ತಮಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2020ರಲ್ಲಿ, ಡಾಲಿ ಧನಂಜಯ್ ಅವರು ಅಭಿನಯಿಸಿದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಇವರು ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರ ಮಗಳು.