ಬಡತನದಿಂದ ಬೆಳೆದು ಬಂದಿರುವ ನವಾಜ್ ರವರಿಗೆ ಬಿಗ್ ಬಾಸ್ ಮನೆಯಲ್ಲೂ ಕೂಡ ಸಿಗುತ್ತಿರುವ ಕಡಿಮೆ ಸಂಭಾವನೆ ಎಷ್ಟು ಗೊತ್ತೇ??

ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ 2 ವಾರ ಕಳೆಯುತ್ತಿದೆ. ಇಂದು ಎರಡನೇ ಎಲಿಮಿನೇಷನ್ ನಡೆಯಲಿದೆ. ಬಿಗ್ ಬಾಸ್ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಒಂದೊಂದು ವಿಶೇಷತೆ ಹೊಂದಿದ್ದಾರೆ. ಈ ಬಾಯಿ ಬಿಗ್ ಬಾಸ್ ಮನೆಗೆ ಹೋಗಿರುವ ಸ್ಪರ್ಧಿ ನವಾಜ್ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ರಿವ್ಯೂಗಳನ್ನು ಪ್ರಾಸಬದ್ಧವಾಗಿ, ಒನ್ ಲೈನ್ ಕೌಂಟರ್ ಡೈಲಾಗ್ ಗಳನ್ನು ಹೇಳುವ ಮೂಲಕ ಗುರುತಿಸಿಕೊಂಡಿದ್ದ ನವಾಜ್ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು.

ಈ ಹುಡುಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಕ್ಕೆ ಹೆಚ್ಚಾಗಿ ಟೀಕೆಗೆ ಸಹ ಕಾರಣವಾದರು, ನಾಲ್ಕು ಸಿನಿಮಾ ರಿವ್ಯೂ ಹೇಳಿದರೆ ಬಿಗ್ ಬಾಸ್ ಮನೆಗೆ ಹೋಗಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಟ್ರೋಲ್ ಸಹ ಮಾಡಿದರು. ಮೊದಲ ವಾರ ಬಿಗ್ ಬಾಸ್ ಮನೆಯಲ್ಲಿ ತನಗೆ ಬಹಳ ಕೋಪ ಬರುತ್ತಿದೆ, ಹೊಡೆಯಬೇಕು ಅನ್ನಿಸುತ್ತದೆ, ಕೆಲವರು ಮಾತನಾಡೋದು ನೋಡಿದ್ರೆ ಜಗಳ ಮಾಡಬೇಕು ಅನ್ನಿಸುತ್ತದೆ ಎಂದೆಲ್ಲಾ ಹೇಳಿದ್ದ ನವಾಜ್ ಈಗ ಕೋಪ ಕಡಿಮೆ ಮಾಡಿಕೊಂಡು ಶಾಂತವಾಗಿದ್ದಾರೆ. ಎಲ್ಲರ ಜೊತೆಗೆ ಬೆರೆಯುವ ಪ್ರಯತ್ನವನ್ನು ಸಹ ಮಾಡುತ್ತಿದ್ದಾರೆ. ನಾವೆಲ್ಲರೂ ಈಗಾಗಲೇ ನೋಡಿರುವ ಹಾಗೆ ನವಾಜ್ ಬಡತನದ ಕುಟುಂಬದಲ್ಲಿ ಬೆಳೆದು ಬಂದಿರುವ ಹುಡುಗ.

ಇವರ ಟ್ಯಾಂಡ್ಸ್ ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ಮೊನ್ನೆ ನಡೆದ ದಸರಾ ಹಬ್ಬದ ವಿಶೇಷ ಎಪಿಸೋಡ್ ನಲ್ಲಿ ಹೊಸ ಬಟ್ಟೆಗಳು ಬಂದಾಗ, ಅದನ್ನು ನೋಡಿದ ನವಾಜ್ ಇಂಥ ಬಟ್ಟೆನ ಜೀವನದಲ್ಲಿ ಹಾಕೋತಿನಿ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ, ನನ್ನ ಹತ್ರ ಇದ್ದಿದ್ದು ಎರಡೇ ಜೊತೆ ಬಟ್ಟೆ, ಎಲ್ಲಾ ಕಡೆ ಅದನ್ನೇ ಹಾಕೊಂಡು ಹೋಗ್ತಾ ಇದ್ದೆ, ಈ ಬಟ್ಟೆಗಳನ್ನ ಕಳಿಸಿಕೊಟ್ಟವರಿಗೆ ತುಂಬಾ ಥ್ಯಾಂಕ್ಸ್ ಎಂದು ಹೊರಗಿನ ಜೀವನವನ್ನು ನೆನಪುಮಾಡಿಕೊಂಡಿದ್ದರು ನವಾಜ್. ಕಷ್ಟದಲ್ಲಿ ಬೆಳೆದು ಬಂದ ಹುಡುಗನಿಗೆ ಬಿಗ್ ಬಾಸ್ ಮಮೆಯಲ್ಲಿರಲು ಕೊಡುತ್ತಿರುವ ಸಂಭಾವನೆ ಎಷ್ಟು ಎಂದು ಚರ್ಚೆಗಳು ನಡೆಯುತ್ತಿದ್ದು, ಸಿಕ್ಕಿರುವ ಮಾಹಿತಿ ಪ್ರಕಾರ ನವಾಜ್ ಅವರಿಗೆ ಒಂದು ವಾರಕ್ಕೆ 20 ಸಾವಿರ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆ.