ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಬಿಗ್ ಶಾಕ್: ಕೊನೆಗೆ ಕನ್ನಡಕ್ಕೆ ಕೈ ಮುಗಿಯಬೇಕೆ?? ಏನಾಗಿದೆ ಗೊತ್ತೇ??

ನಟಿ ರಶ್ಮಿಕಾ ಮಂದಣ್ಣ ಇಂದು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಹಿಂದಿಯಲ್ಲೇ 100 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿತ್ತು. ಪುಷ್ಪ ಸಿನಿಮಾ ಒಟ್ಟಾರೆಯಾಗಿ 300 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದ್ದ ಕಾರಣ ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಯಿತು. ಸಾಲು ಸಾಲು ಸಿನಿಮಾ ಆಫರ್ ಗಳು ರಶ್ಮಿಕಾ ಅವರನ್ನು ಹುಡುಕಿಕೊಂಡು ಬರಲು ಆರಂಭವಾಯಿತು. ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆಗೆ ಮಿಷನ್ ಮಜ್ನು ಸಿನಿಮಾ, ರಣಬೀರ್ ಕಪೂರ್ ಅವರ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ.

ಬಾಲಿವುಡ್ ನಲ್ಲಿ ಬಿಡುಗಡೆಯಾದ ರಶ್ಮಿಕಾ ಅಭಿನಯದ ಮೊದಲ ಸಿನಿಮಾ ಗುಡ್ ಬೈ, ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಕುತೂಹಲ ಸೃಷ್ಟಿಸಿದ್ದು, ಫ್ಯಾಮಿಲಿ ಆಡಿಯನ್ಸ್ ಗಾಗಿ, ಈ ಸಿನಿಮಾದಲ್ಲಿ ಭಾವನಾತ್ಮಕವಾದ ಕಥೆ ಹೆಣೆಯಲಾಗಿತ್ತು ಎಂದು ಹೇಳಲಾಗಿತ್ತು, ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ನಿರೀಕ್ಷೆ ಸಹ ಇತ್ತು. ಆದರೆ ಆಕ್ಟೊಬರ್ 7ರಂದು ಸಿನಿಮಾ ಬಿಡುಗಡೆ ಆಗಿದ್ದು, ಮಕಾಡೆ ಮುಗ್ಗರಿಸಿದೆ. ದಕ್ಷಿಣ ಭಾರತದಲ್ಲಿ ರಶ್ಮಿಕಾ ಅವರು ಸ್ಟಾರ್ ನಟಿ, ಅವರನ್ನು ನೋಡುವುದಕ್ಕಾಗಿ ಆದರು ಅಭಿಮಾನಿಗಳು ಥಿಯೇಟರ್ ಗೆ ಬರುತ್ತಾರೆ. ಆದರೆ ಹಿಂದಿಯಲ್ಲಿ ರಶ್ಮಿಕಾ ಅವರ ಫೇಮ್ ವರ್ಕೌಟ್ ಆಗಿಲ್ಲ.

ಮೊದಲ ದಿನ ಗುಡ್ ಬೈ ಸಿನಿಮಾ ಮಾಡಿರುವ ಗಳಿಕೆ ಕೇವಲ 90 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಅಮಿತಾಭ್ ಬಚ್ಚನ್ ಅವರು ನಟಿಸಿದ್ದು, ರಶ್ಮಿಕಾ ಜೊತೆಯಲ್ಲಿರುವ ಗುಡ್ ಬೈ ಸಿನಿಮಾ ಮೊದಲ ದಿನ ಒಂದು ಕೋಟಿ ಸಹ ಗಳಿಸದೆ ಇರುವುದು ಆಶ್ಚರ್ಯಕರವಾಗಿದೆ. ವೀಕೆಂಡ್ ನಲ್ಲಿ ಸಿನಿಮಾ ಕಲೆಕ್ಷನ್ ಇಂಪ್ರೂವ್ ಆದರೆ ಪರವಾಗಿಲ್ಲ ಎನ್ನುವ ಹಾಗಿದ್ದು, ಒಂದು ವೇಳೆ ಹೀಗೆ ಮುಂದುವರೆದರೆ ಗುಡ್ ಬೈ ಸಿನಿಮಾ ಫ್ಲಾಪ್ ಲಿಸ್ಟ್ ಗೆ ಸೇರುತ್ತದೆ. ಈ ಸಿನಿಮಾಗೆ ಉತ್ತರ ಭಾರತದಲ್ಲಿ ಮಾತ್ರ ಪ್ರಚಾರ ಮಾಡಲಾಯಿತು, ದಕ್ಷಿಣ ಭಾರತದಲ್ಲಿ ಪ್ರಚಾರ ಮಾಡಲಿಲ್ಲ, ಇದು ಕೂಡ ಸಿನಿಮಾ ಸೋಲಿಗೆ ಕಾರಣ ಇರಬಹುದು ಎನ್ನಲಾಗುತ್ತಿದೆ. ಇನ್ನು ಸಿನಿಮಾ ಬಿಡುಗಡೆಯಾದ ದಿನವೇ ರಶ್ಮಿಕಾ ಮಾಲ್ಡಿವ್ಸ್ ಗೆ ಹಾರಿದರು, ಸಿನಿಮಾ ಸೋಲುತ್ತದೆ ಎಂದು ರಶ್ಮಿಕಾ ಅವರಿಗೆ ಮೊದಲೇ ಗೊತ್ತಿತ್ತಾ ಎನ್ನುವ ಚರ್ಚೆ ಸಹ. ನಡೆಯುತ್ತಿದೆ.