ಬಿಗ್ ನ್ಯೂಸ್: ಘೋಷಣೆಯಾಯಿತು ಸೌತ್ ಫಿಲಂ ಫೇರ್ ಅವಾರ್ಡ್ಸ್: ಈ ಬಾರಿ ಪ್ರಶಸ್ತಿ ಗೆದ್ದವರು ಯಾರು ಗೊತ್ತೇ??

ಭಾರತದಲ್ಲಿ ಕಲಾವಿದರಿಹೇ ಕೊಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಫಿಲ್ಮ್ ಫೇರ್ ಪ್ರಶಸ್ತಿ, ಈ ವರ್ಷ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದದ್ದು ಬಹಳ ವಿಶೇಷವಾಗಿತ್ತು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಿಗೆ ಫಿಲ್ಮ್ ಫೇರ್ ಅವಾರ್ಡ್ಸ್ ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. 2020 ಮತ್ತು 2021ರಲ್ಲಿ ತೆರೆಕಂಡ ಸಿನಿಮಾಗಳಿಗೆ, ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ. ನಿನ್ನೆ ನಡೆದ ಸಮಾರಂಭದಲ್ಲಿ ಯಾರಿಗೆಲ್ಲಾ ಅವಾರ್ಡ್ ಸಿಕ್ಕಿದೆ ಎಂದು ತಿಳಿಸುತ್ತೇವೆ ನೋಡಿ..

ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕನ್ನಡ ಸಿನಿಮಾಗಳು ಜೋರಾಗಿ ಸದ್ದು ಮಾಡಿ, ಬೇರೆ ಭಾಷೆಯ ಜನರನ್ನು ಸಹ ಸೆಳೆದಿದೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಯಾರಿಗೆಲ್ಲ ಪ್ರಶಸ್ತಿ ಬಂದಿದೆ ಎಂದು ತಿಳಿಸುತ್ತೇವೆ ನೋಡಿ..ಜೀವಮಾನ ಸಾಧನೆ ಪ್ರಶಸ್ತಿ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಸಿಕ್ಕಿದೆ, ಅತ್ಯುತ್ತಮ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಯುವರತ್ನ ಸಿನಿಮಾಗೆ, ಅತ್ಯುತ್ತಮ ಛಾಯಾಗ್ರಾಹಕ ಶ್ರೀಶ ಕುಡುವಳ್ಳಿ ರತ್ನನ್ ಪ್ರಪಂಚ ಸಿನಿಮಾಗೆ, ಅತ್ಯುತ್ತಮ ಡೇಬ್ಯು ನಟಿ ಧನ್ಯಾ ರಾಮ್ ಕುಮಾರ್, ನಿನ್ನ ಸನಿಹಕೆ ಸಿನಿಮಾಗೆ, ಅತ್ಯುತ್ತಮ ಸಾಹಿತಿ ಜಯಂತ್ ಕಾಯ್ಕಿಣಿ ತೇಲಾಡು ಮಲ್ಲಿಗೆ ಹಾಡಿಗೆ.

ಅತ್ಯುತ್ತಮ ಹಿನ್ನಲೆ ಗಾಯಕಿ ಅನುರಾಧ ಭಟ್ ಬಿಚ್ಚುಗತ್ತಿ ಸಿನಿಮಾದ ಧೀರ ಸಮ್ಮೋಹಗಾರ ಹಾಡಿಗೆ, ಅತ್ಯುತ್ತಮ ಹಿನ್ನಲೆ ಗಾಯಕ ರಘು ದೀಕ್ಷಿತ್, ನಿನ್ನ ಸನಿಹಕೆ ಸಿನಿಮಾಗೆ, ಅತ್ಯುತ್ತಮ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರಿಗೆ ಬಡವ ರಾಸ್ಕಲ್ ಸಿನಿಮಗೆ, ಅತ್ಯುತ್ತಮ ಪೋಷಕ ನಟಿ ಉಮಾಶ್ರೀ ರತ್ನನ್ ಪ್ರಪಂಚ ಸಿನಿಮಾಗೆ, ಅತ್ಯುತ್ತಮ ಪೋಷಕ ನಟ ಬಿ.ಸುರೇಶ್ ಆಕ್ಟ್ 1978 ಸಿನಿಮಾಗೆ, ಅತ್ಯುತ್ತಮ ನಟಿ (ಕ್ರಿಟಿಕ್ಸ್) ಮಿಲನ ನಾಗರಾಜ್ ಲವ್ ಮಾಕ್ಟೇಲ್ ಸಿನಿಮಾಗೆ ಮತ್ತು ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ಸಿನಿಮಾಗೆ, ಅತ್ಯುತ್ತಮ ನಟ (ಕ್ರಿಟಿಕ್ಸ್) ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಸಿನಿಮಾಗೆ, ಅತ್ಯುತ್ತಮ ನಿರ್ದೇಶಕ ರಾಜ್ ಬಿ ಶೆಟ್ಟಿ ಗರುಡ ಗಮನ ವೃಷಭ ವಾಹನ ಸಿನಿಮಾಗೆ. ಇಷ್ಟು ಅವಾರ್ಡ್ ಗಳು ಕನ್ನಡಕ್ಕೆ ಬಂದಿದೆ.