ಈ ರಾಶಿಗಳು ಎಂದರೆ ಶನಿ ದೇವನಿಗೂ ಪ್ರೀತಿ: ಶನಿ ದೇವನು ಕೂಡ ಈ ರಾಶಿಗಳಿಗೆ ಕಷ್ಟ ಕೊಡಲ್ಲ. ಯಾವ ರಾಶಿಗಳಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರಿಗೆ ವಿಶೇಷವಾದ ಸ್ಥಾನಮಾನವಿದೆ. ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ಮನುಷ್ಯ ಮಾಡುವ ಕೆಲಸಗಳ ಅನುಸಾರ ಆತನಿಗೆ ಫಲ ನೀಡುವ ದೇವರು ಶನಿ. ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಫಲ ಕೆಟ್ಟ ಕೆಲಸ ಮಾಡಿದವರಿಗೆ ಕೆಟ್ಟ ಫಲ ನೀಡುತ್ತಾರೆ ಶನಿದೇವರು. ಶನಿದೇವರಿಗೆ ಕೋಪ ಬಂದು ಕೆಟ್ಟ ಪರಿಣಾಮ ಬೀರಿದರೆ, ಅವರ ಕೋಪವನ್ನು ತಡೆದುಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ಪ್ರತಿಯೊಬ್ಬರು ಶನಿದೇವರ ಕೋಪದ ಪ್ರಭಾವವನ್ನು ಅನುಭವಿಸುತ್ತಾರೆ.

ಶನಿದೇವರ ಕೋಪ ಯಾರ ಮೇಲೆ ಬೀಳುತ್ತದೆಯೋ ಆ ವ್ಯಕ್ತಿ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಶನಿ ದೇವನ ಕೋಪದಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಸಾರಿ ಮಹಾಶಿವನು ಸಹ ಶನಿದೇವರ ಕೋಪವನ್ನು ತಡೆಯಲಾಗದೆ ಆನೆಯ ರೂಪ ತಾಳಿದ್ದನು ಎಂದು ಹೇಳಲಾಗುತ್ತದೆ. ಅಷ್ಟರ ಮಟ್ಟಿಗೆ ಇರುತ್ತದೆ ಶನಿದೇವರ ಕೋಪ. ಆದರೆ ಕೆಲವು ರಾಶಿಯ ಜನರು ಶನಿದೇವರ ಕೋಪವನ್ನು ಕಡಿಮೆ ಪ್ರಮಾಣದಲ್ಲಿ ಅನುಭವಿಸುತ್ತಾರೆ ಎಂದು ಸಹ ಹೇಳಲಾಗುತ್ತದೆ. ಶನಿ ದೇವರು ಮಕರ ಮತ್ತು ಕುಂಭ ರಾಶಿಗಳಿಗೆ ಅಧಿಪತಿ ಎಂದು ಹೇಳಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವರ ಮೆಚ್ಚಿನ ರಾಶಿ ತುಲಾ ರಾಶಿ ಆಗಿದೆ.

ನಿರ್ದಿಷ್ಟವಾದ ಪರಿಸ್ಥಿತಿಗಳಲ್ಲಿ ಅಥವಾ ದೊಡ್ಡ ತಪ್ಪುಗಳನ್ನು ಮಾಡಿದರೆ ಮಾತ್ರ ಶನಿದೇವರು ಈ ರಾಶಿಯವರ ಮೇಲೆ ಕೋಪಗೊಂಡು ಇವರ ಮೇಲೆ ಕೆಟ್ಟ ಪರಿಣಾಮ ಬೀರುತ್ತಾನೆ. ಇಲ್ಲದೆ ಹೋದರೆ, ತುಲಾ ರಾಶಿಯವರಿಗೆ ಶನಿದೇವರು ಹೆಚ್ಚು ಶಿಕ್ಷೆ ನೀಡುವುದಿಲ್ಲ. ಇಲ್ಲದೆ ಹೋದರೆ, ತುಲಾ ರಾಶಿಯವರಿಗೆ ಶನಿದೇವರು ಶಿಕ್ಷೆ ನೀಡುವುದು ಬಹಳ ಕಡಿಮೆ ಆಗಿದೆ. ಇನ್ನು ಶನಿದೇವರ ಕೋಪಕ್ಕೆ ಗುರಿಯಾಗದೆ ಇರಲು ಕೆಲವು ಕ್ರಮಗಳನ್ನು ಅನುಸರಿಸಬೇಕು, ಕೆಲಸ ಮಾಡದೆ ಸೋಮಾರಿಗಳಾಗಿ ಇರಬಾರದು, ನಮ್ಮ ಬಳಿ ಅನುಕೂಲ ಇದ್ದರೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಈ ಮೂಲಕ ಶನಿದೇವರ ಅನುಗ್ರಹ ಪಡೆಯಬಹುದು.