ಇದ್ದಕ್ಕಿದ್ದ ಹಾಗೆ ಅಪ್ಪು ಸಮಾಧಿ ಬಳಿ ತೆರಳಿದ ತೆಲುಗಿನ ಗಾಯಕ ದೇವಿಶ್ರೀ ಪ್ರಸಾದ್ ಮಾಡಿದ್ದೇನು ಗೊತ್ತೇ?? ಸಮಾಧಿ ಬಳಿಯೇ ದೇವಿಶ್ರೀ ಏನು ಮಾಡಿದ್ದಾರೆ ಗೊತ್ತೇ??

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಆಕ್ಟೊಬರ್ 29ಕ್ಕೆ ಒಂದು ವರ್ಷ ಕಳೆಯುತ್ತದೆ. ಪುನೀತ್ ರಾಜ್ ಅವರ ಸಮಾಧಿ ನೋಡಿ ಅವರ ದರ್ಶನ ಪಡೆಯಲು ಇದುವರೆಗೂ ಅನೇಕರು, ಲಕ್ಷಾಂತರ ಜನರು ಬಂದು ಹೋಗಿದ್ದಾರೆ. ನಮ್ಮ ರಾಜ್ಯದವರು ಮಾತ್ರವಲ್ಲದೆ, ಬೇರೆ ರಾಜ್ಯದ ಜನರು, ತಮಿಳು ತೆಲುಗು ಚಿತ್ರರಂಗದ ಸ್ಟಾರ್ ಕಲಾವಿದರು ಮತ್ತು ಸೆಲೆಬ್ರಿಟಿಗಳು ಸಹ ಅಪ್ಪು ಅವರ ಸಮಾಧಿ ಬಳಿ ಬಂದು ದರ್ಶನ ಪಡೆದಿದ್ದಾರೆ. ಅದೇ ಸಾಲಿಗೆ ಈಗ ಮತ್ತೊಬ್ಬ ತೆಲುಗು ಸೆಲೆಬ್ರಿಟಿ ಬಂದಿದ್ದಾರೆ.

ಅವರು ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು, ಕನ್ನಡದಲ್ಲಿ ಸಹ ಕೆಲವು ಸಿನಿಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 67ನೇ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದ ದೇವಿಶ್ರೀ ಪ್ರಸಾದ್ ಅವರು ಹಾಗೆಯೇ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ, ಅಪ್ಪು ಅವರ ಸಮಾಧಿಯ ದರ್ಶನ ಪಡೆದು, ಅಲ್ಲಿಯೇ ಕೂತು ತಮ್ಮ ನಾನ್ನಕು ಪ್ರೇಮತೋ ಸಿನಿಮಾ ಹಾಡನ್ನು ಹಾಡಿದ್ದಾರೆ, ಅಪ್ಪು ಅವರಿಗೆ ಈ ಹಾಡು ಇಷ್ಟ, ನಾನು ನನ್ನ ತಂದೆಗೆ ಅರ್ಪಿಸಿ ಈ ಹಾಡನ್ನು ಸಂಯೋಜನೇ ಮಾಡಿದ್ದೆ, ಅಪ್ಪು ಅವರ ಮಕ್ಕಳಿಗೂ ಈ ಹಾಡು ಇಷ್ಟ ಅದಕ್ಕೆ ಈ ಹಾಡನ್ನು ಹಾಡುತ್ತಿದ್ದೇನೆ ಎಂದು ಹಾಡಿದ್ದಾರೆ.

ಇನ್ನು ದೇವಿಶ್ರೀ ಪ್ರಸಾದ್ ಅವರು ಅಪ್ಪು ಅವರೊಡನೆ ನಡೆದ ಮೊದಲ ಮಾತುಕತೆಯನ್ನು ಸಹ ನೆನೆಪು ಮಾಡಿಕೊಂಡಿದ್ದಾರೆ, “ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ನಾನು ಸುಮ್ಮನೆ ಕುಳಿತಿದ್ದೆ ಆಗ ಅಪ್ಪು ಸರ್ ನನ್ನ ಹಿಂದೆ ಇಂದ ಬಂದು ಮಾತನಾಡಿಸಿದರು, ಹಾಯ್ ನಾನು ಪುನೀತ್ ರಾಜ್ ಕುಮಾರ್ ಎಂದು ಹೇಳಿದರು. ಅಷ್ಟು ದೊಡ್ಡ ನಟನಾಗಿ ಹಾಗೆ ಬಂದು ತಮ್ಮ ಪರಿಚಯ ಮಾಡಿಕೊಳ್ಳೋದು ಅಂದ್ರೆ ಏನು.. ಅದು ಡಾ.ರಾಜ್ ಕುಮಾರ್ ಅವರು ಮತ್ತು ಪಾರ್ವತಮ್ಮನವರು ಕಲಿಸಿರುವ ಸಂಸ್ಕೃತಿ ..” ಎಂದಿದ್ದಾರೆ ದೇವಿಶ್ರೀ ಪ್ರಸಾದ್. ಜೊತೆಗೆ, ಫಿಲ್ಮ್ ಫೇರ್ ನಲ್ಲಿ ಅವಾರ್ಡ್ ಪಡೆದ ಬಳಿಕ, ಅದನ್ನು ಅಪ್ಪು ಅವರಿಗೆ ಅರ್ಪಣೆ ಮಾಡಿದರು.