ತಪ್ಪು ಮಾಡಿಬಿಟ್ಟೆ: ಮದುವೆಯ ನಂತರ ಷಾಕಿಂಗ್ ಕಾಮೆಂಟ್ ಕೊಟ್ಟ ತೆಲುಗಿನ ಖ್ಯಾತ ನಟಿ ಕಾಜಲ್: ಹೇಳಿದ್ದೇನು ಗೊತ್ತೇ??

ಟಾಲಿವುಡ್ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ನಾಯಕಿಯಾಗಿ ತಮಿಳು ಮತ್ತು ತೆಲುಗು ಚಿತ್ರರಂಗದ ಎಲ್ಲಾ ಖ್ಯಾತ ಕಲಾವಿದರ ಜೊತೆಗೆ ತೆರೆ ಹಂಚಿಕೊಂಡ ಕಾಜಲ್ ಅಗರ್ವಾಲ್ ಅವರು ಬ್ಯುಸಿನೆಸ್ ಮ್ಯಾನ್ ಗೌತಮ್ ಅವರನ್ನು ಪ್ರೀತಿಸಿದರು. ಕೆಲ ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ಮದುವೆಯಾಗುವ ಮೂಲಕ ಒಂದಾದರು. ಕಾಜಲ್ ಅವರು ಒಂದು ಮುದ್ದಾದ ಮಗುವಿಗೆ ಜನ್ಮ ನೀಡಿದರು. ತಮ್ಮ ಮಗುವಿನ ಆಗಮನದ ಬಳಿಕ ಕಾಜಲ್ ಅವರು ಬಹಳ ಸಂತೋಷಪಟ್ಟಿದ್ದಾರೆ. ಹಿಂದೆಂದೂ ಅನುಭವಿಸದ ತಾಯ್ತನವನ್ನು ಮಗುವಿನ ನಂತರ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದುವೆಯಾದ ನಟಿಯರು ಸಹ ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಸಿನಿಪ್ರಿಯರ ಆಯ್ಕೆ ಮತ್ತು ಪ್ರತಿಕ್ರಿಯೆ ಸಹ ಈ ವಿಚಾರದಲ್ಲಿ ಬದಲಾಗಿದೆ. ಅದೇ ರೀತಿಯಲ್ಲಿ ಕಾಜಲ್ ಅವರು ಸಹ ಈಗ, ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಚಿಂತನೆಯಲ್ಲಿದ್ದಾರೆ. ಆದರೆ ಗರ್ಭಿಣಿಯಾದ ಬಳಿಕ ದೇಹವನ್ನು ಫೈಟ್ ಆಗಿಟ್ಟುಕೊಳ್ಳಲು ಸಾಧ್ಯ ಆಗುತ್ತಿಲ್ಲ ಎನ್ನುತ್ತಾರೆ ಕಾಜಲ್. ಎಷ್ಟೇ ಟ್ರೈ ಮಾಡಿದರು ವರ್ಕೌಟ್ ನಲ್ಲಿ ಆಕ್ಟಿವ್ ಆಗಿರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಮಗುವಾದ ಬಳಿಕ ವರ್ಕೌಟ್ ಮಾಡಲು ಶುರು ಮಾಡಿದರೆ, ಆರಂಭದಲ್ಲಿ ದೇಹ ಕೂಡ ಅದಕ್ಕೆ ಸಪೋರ್ಟ್ ಮಾಡುವುದಿಲ್ಲ ಎನ್ನುತ್ತಾರೆ ಕಾಜಲ್. ಮದುವೆಯಾದ ಬಳಿಕ ಕೆರಿಯರ್ ಬಗ್ಗೆ ಬೇರೆಯದೇ ನಿರ್ಧಾರ ತೆಗೆದುಕೊಂಡಿದ್ದ ಕಾಜಲ್ ಅವರು ಈಗ ಮನಸ್ಸು ಬದಲಾಯಿಸಿ, ಸಿನಿಮಾಗಳಲ್ಲಿ ನಟಿಸಲು ಇಷ್ಟ ಪಡುತ್ತಿದ್ದಾರೆ. ಮದುವೆ ಓಕೆ, ಮಗು ಅಷ್ಟು ಬೇಗ ಎಂದು ಅಂದುಕೊಂಡಿರಲಿಲ್ಲ. ಮದುವೆ ಬಳಿಕ ನಟನೆ ಮಾಡಬಾರದು ಎನ್ನುವ ನಿರ್ಧಾರ ಮಾಡಿ ತಪ್ಪು ಮಾಡಿಬಿಟ್ಟೆ ಎಂದು ಹೇಳಿದ್ದಾರೆ ಕಾಜಲ್.

ತನ್ನ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವ ಕಾರಣ ಕಾಜಲ್ ಅವರು ಎಲ್ಲಿಗೂ ಹೋಗಲು ಸಾಧ್ಯ ಆಗುತ್ತಿಲ್ಲವಂತೆ, ಕೇರ್ ಟೇಕರ್ ಗಳು ಹಲವು ಜನ ಇದ್ದರು ತಾವೇ ಜೊತೆಯಲ್ಲಿದ್ದು ಮಗುವನ್ನು ನೋಡಿಕೊಳ್ಳುವ ಹಾಗೆ ಆಗುವುದಿಲ್ಲ ಎನ್ನುತ್ತಾರೆ ಕಾಜಲ್, ಅದರಿಂದ ತಮಗೆ ಖುಷಿ ಆಗುತ್ತದೆ ಎಂದು ಸಹ ಹೇಳಿದ್ದಾರೆ. ಪ್ರಸ್ತುತ ಕಾಜಲ್ ಅವರು ಇಂಡಿಯನ್2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇಷ್ಟೇ ಅಲ್ಲದೆ ಚಂದ್ರಮುಖಿ2 ಸಿನಿಮಾದಲ್ಲಿ ಸಹ ಕಾಜಲ್ ಅವರು ನಟಿಸುತ್ತಾರಂತೆ. ತಮಗೆ ಸ್ವಲ್ಪ ಮುಜುಗರ ಎನ್ನಿಸಿದರು ಸಹ, ತಮ್ಮನ್ನು ಇಷ್ಟಪಡುವ ಈಗಲೂ ತಮ್ಮನ್ನು ತೆರೆಯ ಮೇಲೆ ನೋಡಲು ಬಯಸುವ ಅಭಿಮಾನಿಗಳಿಗೋಸ್ಕರ ನಟನೆ ಮಾಡುತ್ತಾರಂತೆ ಕಾಜಲ್. ಕಮರ್ಷಿಯಲ್ ಸಿನಿಮಾಗಿಂತ ಹೆಚ್ಚಾಗಿ ಎಕ್ಸ್ಪೆರಿಮೆಂಟಲ್ ಸಿನಿಮಾಗಳಲ್ಲಿ ನಟಿಸಲು ಇಷ್ಟ ಎನ್ನುತ್ತಾರೆ. ಇನ್ನು ಎರಡು ಸಿನಿಮಾಗಳು ಚರ್ಚೆಯ ಹಂತದಲ್ಲಿವೆ ಎಂದು ಹೊಸ ಅಪ್ಡೇಟ್ ನೀಡಿದ್ದಾರೆ.