ಇಂದಿಗೂ ಕೂಡ ಶ್ರೀ ಕೃಷ್ಣ ಜೀವಂತ, ಭಗವಾನ್ ಶ್ರೀ ಕೃಷ್ಣ ಅದೊಂದು ಅಂಗ ಮಾತ್ರ ಭೂಮಿ ಮೇಲೆಯೇ ಇದೆ ಎಲ್ಲಿ ಗೊತ್ತೇ?? ಯಾವ ಅಂಗ ಗೊತ್ತೇ?

ನಮಸ್ಕಾರ ಸ್ನೇಹಿತರೇ, ನರಮಾನವನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಈ ಭೂಮಿಯನ್ನು ಬಿಟ್ಟು ಹೋಗಲೇಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಸಾ’ವು ಎನ್ನುವುದು ಖಚಿತ. ಆದರೆ ದೇವರ ವಿಷಯದಲ್ಲಿ ಹಾಗಲ್ಲ. ದೇವರುಗಳಿಗೆ ಆದಿ ಅಂತ್ಯವಿಲ್ಲ. ದೇವರು ಆಯಾ ಯುಗದಲ್ಲಿ ಅವತಾರ ಎತ್ತಿ ತಮ್ಮ ಕಾರ್ಯವನ್ನು ಮುಗಿಸಿ ಆ ಅವತಾರವನ್ನು ಮುಗಿಸುತ್ತಾರೆ ಅಷ್ಟೇ. ಅದನ್ನ ದೇವರಿಗೆ ಅಂತ್ಯ ಎಂದು ಕರೆಯಲು ಸಾಧ್ಯವಿಲ್ಲ. ಹಾಗೆಯೇ ಮಹಾವಿಷ್ಣುವು ಶ್ರೀ ಕೃಷ್ಣ ಅವತಾರವನ್ನು ಮುಗಿಸುತ್ತಾನೆ. ಆದರೆ ಅದು ಆತನ ಅಂತ್ಯವಲ್ಲ!

ಮಹಾಭಾರತದಲ್ಲಿ ಧರ್ಮ ಸಂಸ್ಥಾಪನೆಗೆ ಬಂದ ಶ್ರೀ ಕೃಷ್ಣ ತನ್ನ ಕಾರ್ಯವನ್ನು ಮುಗಿಸಿ ಹೊರಡುತ್ತಾನೆ. ಹಾಗೆ ಹೊರಡುವಾಗ ಆತ ತನ್ನ ದೇಹವನ್ನು ಭೂಮಿಯಲ್ಲಿಯೇ ಬಿಡುತ್ತಾನೆ. ಹೀಗೆ ಶ್ರೀ ಕೃಷ್ಣನ ದೇಹ ತ್ಯಜಿಸುವುದಕ್ಕೂ ಒಂದು ಕಥೆಯಿದೆ. ಕೌರವರ ತಾಯಿ ಗಾಂಧಾರಿ ತನ್ನೆಲ್ಲಾ ಮಕ್ಕಳು ಕುರುಕ್ಷೇತ್ರದಲ್ಲಿ ಮ’ರಣ ಹೊಂದುವುದಕ್ಕೆ ಶ್ರೀಕೃಷ್ಣನೇ ನೇರ ಕಾರಣ ಎಂದು ಶ್ರೀ ಕೃಷ್ಣನಿಗೆ ನಿನ್ನ ಯಧು ವಂಶ ನಿನ್ನ ಕಣ್ಣೆದುರೇ ನಾಶವಾಗಲಿ, ನಿನಗೂ ಯಾರೂ ನೋಡದ ಸಾವು ಸಿಗಲಿ ಎಂದು ಶಾಪವಿತ್ತುಬಿಡುತ್ತಾಳೆ. ಶ್ರೀ ಕೃಷ್ಣ ಅವತಾರದ ಅಂತ್ಯ ಇಲ್ಲಿಂದ ಆರಂಭ.

ಗಾಂಧಾರಿಯ ಅಪೇಕ್ಷೆಯಂತೆಯೇ ಯಧುವಂಶ ಒಳಜಗಳದಿಂದಲೇ ನಾಶವಾಗುತ್ತದೆ. ಶ್ರೀ ಕೃಷ್ಣ ಕಾಡಿನಲ್ಲಿ ವಿಶ್ರಮಿಸುತಿರುವಾಗ ಜಿಂಕೆ ಎಂಡು ತಪ್ಪು ತಿಳಿದ ಬೇಟೆಗಾರನೊಬ್ಬ ಶ್ರೀ ಕೃಷ್ಣನಿಗೆ ಬಾಣ ಹೂಡುತ್ತಾನೆ. ಶ್ರೀ ಕೃಷ್ಣ ದೇಹ ತ್ಯಜಿಸುತ್ತಾನೆ. ಶ್ರೀ ಕೃಷ್ಣನ ದೇಹವನ್ನು ಪಾಂಡವರು ಅಗ್ನಿಗೆ ಅರ್ಪಿಸುತ್ತಾರೆ. ಅಗ್ನಿ ಶ್ರೀ ಕೃಷ್ಣನ ಇಡೀ ದೇಹವನ್ನು ಸು’ಟ್ಟರೂ ಈ ಒಂದು ಭಾಗವನ್ನು ಮಾತ್ರ ಸುಡಲು ಸಾಧ್ಯವಾಗುವುದಿಲ್ಲ. ಹೌದು ಶ್ರೀ ಕೃಷ್ಣನ ಹೃದಯ ಮಾತ್ರ ಅಗ್ನಿಯಲ್ಲಿ ಲೀನವಾಗುವುದೇ ಇಲ್ಲ. ನಂತರ ಶ್ರೀ ಕೃಷ್ಣನ ಹೃದಯವನ್ನು ಸಮುದ್ರದಲ್ಲಿ ಬಿಡಲಾಗುತ್ತದೆ. ಈ ಹೃದಯ ಇಂದ್ರಿಯಂ ರಾಜನಿಗೆ ಸಿಗುತ್ತದೆ. ಆತ ಶ್ರೀ ಕೃಷ್ಣನ ಈ ಹೃದಯವನ್ನು ಶ್ರೀ ಜಗನ್ನಾಥ ವಿಗ್ರಹದಲ್ಲಿ ಇಡುತ್ತಾನೆ. ಹೀಗೆ ಶ್ರೀಕೃಷ್ನನ ಹೃದಯ ಕಲಿಯುಗದಲ್ಲೂ ಜೀವಂತವಾಗಿದೆ ಎಂದು ಹೇಳಲಾಗುತ್ತದೆ.