ಶನಿ ದೇವನನ್ನು ಮೆಚ್ಚಿಸಿ ಕಷ್ಟಗಳಿಂದ ಪಾರಾಗಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು. ಶನಿ ದೇವನೇ ನಿಮ್ಮನ್ನು ಕಾಯಲಿದ್ದಾನೆ.

ಶನಿದೇವರು ಕರ್ಮಫಲದಾತ, ಶನಿದೇವರ ಆಶೀರ್ವಾದ ಇದ್ದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಯಾವುದೇ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ಶನಿದೇವರನ್ನು ಮೆಚ್ಚಿಸಲು ಹಲವರು ಹಲವು ಕೆಲಸಗಳನ್ನು ಮಾಡುತ್ತಾರೆ. ಶನಿವಾರದ ದಿನ ಶನಿದೇವರ ಪೂಜೆ ಮಾಡುವುದರಿಂದ ಶನಿದೇವರ ಆಶೀರ್ವಾದ ಪಡೆಯಬಹುದು. ಶನಿದೇವರ ಪೂಜೆ ಮಾಡುವಾಗ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಆ ರೀತಿ ಮಾಡಿದರೆ ನಿಮಗೆ ಎಲ್ಲಾ ಒಳ್ಳೆಯದಾಗುವುದು ಖಂಡಿತ. ಹಾಗಿದ್ದರೆ ಶನಿದೇವರ ಪೂಜೆ ಮಾಡುವಾಗ ಅನುಸರಿಸಬೇಕಾರ ಕೆಲವು ಕ್ರಮಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಶನಿದೇವರಿಗೆ ಅರ್ಪಿಸಬೇಕಾದ ವಸ್ತುಗಳು :- ಶನಿದೇವರಿಗೆ ಎಳ್ಳು ಬೆಲ್ಲ ಮತ್ತು ಖಿಚಡಿ ಅರ್ಪಿಸಿ. ಇದರಿಂದ ಶನಿದೇವರಿಗೆ ಸಂತೋಷ ಆಗುತ್ತದೆ ಜೊತೆಗೆ ಶನಿದೇವರ ಆಶೀರ್ವಾದ ಅನುಗ್ರಹ ನಿಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಶನಿದೇವರನ್ನು ಮೆಚ್ಚಿಸಿ, ಆಶೀರ್ವಾದ ಪಡೆಯಲು ಶನಿವಾರ ಈ ವಸ್ತುಗಳನ್ನು ಅರ್ಪಿಸಿ.
ತಾಮ್ರದ ಪಾತ್ರೆ ಬಳಸಬೇಡಿ :- ಸಾಮಾನ್ಯವಾಗಿ ದೇವರ ಪೂಜೆ ಮಾಡುವಾಗ ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ತಾಮ್ರದ ಪಾತ್ರೆ ಬಳಸಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ, ದೇವರ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಆದರೆ ಶನಿದೇವರ ಪೂಜೆ ಮಾಡುವಾಗ, ತಾಮ್ರವನ್ನು ಬಳಸಿ ಪೂಜೆ ಮಾಡಬಾರದು. ತಾಮ್ರವು ಸೂರ್ಯದೇವನಿಗೆ ಸಂಬಂಧಿಸಿದ ವಸ್ತು ಆಗಿದೆ. ಜೊತೆಗೆ ಸೂರ್ಯದೇವರು ಮತ್ತು ಶನಿದೇವರು ವಿರೋಧಿಗಳು ಎಂದು ಹೇಳುತ್ತಾರೆ. ಹಾಗಾಗಿ ಶನಿದೇವರ ಪೂಜೆಗೆ ಕಬ್ಬಿಣದ ಪಾತ್ರೆ ಬಳಸುವುದು ಒಳ್ಳೆಯದು.
ಪಶ್ಚಿಮ ದಿಕ್ಕಿನಲ್ಲಿ ನಿಂತು ಪೂಜೆ ಮಾಡಿ :- ಶನಿದೇವರು ಪಶ್ಚಿಮದಿಕ್ಕಿನ ಅಧಿಪತಿ ಆಗಿರುವುದರಿಂದ ಪಶ್ಚಿಮ ದಿಕ್ಕಿನಲ್ಲಿ ಮುಖ ಮಾಡಿ, ಶನಿದೇವರಿಗೆ ಪೂಜೆ ಮಾಡಬೇಕು ಎಂದು ಹೇಳಲಾಗುತ್ತಿದೆ. ಪೂಜೆ ಮಾಡುವಾಗ ನೆನಪಿಡಬೇಕಾದ ಮತ್ತೊಂದು ವಿಚಾರ ಏನೆಂದರೆ, ಶನಿದೇವರಿಗೆ ಪೂಜೆ ಮಾಡುವಾಗ ನಿಮ್ಮ ಮುಖ ತೋರಿಸಿ ಪೂಜೆ ಮಾಡಬಾರದು. ಶನಿದೇವರ ಕಣ್ಣಿನ ಜೊತೆಗೆ ನೇರ ಸಂಪರ್ಕದಲ್ಲಿದ್ದು ಪೂಜೆ ಮಾಡಬಾರದು.