ಸದಾ ದೇವರ ಕೃಪೆ ಪಡೆದು ಶ್ರೀಮಂತರಾಗಲು, ಈ ಗಿಡವನ್ನು ಈಗಲೇ ಮನೆಗೆ ತನ್ನಿ. ಅದೃಷ್ಟ ಅದರ ಹಿಂದೆಯೇ ಬಂದು ಮನೆ ಸೇರುತ್ತದೆ.

ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಪ್ರತಿ ಗಿಡಕ್ಕೂ ಅದರದ್ದೇ ಆದ ಮಹತ್ವ ಇದೆ. ಮನೆಗಳಲ್ಲಿ ನೆಡುವ ಪ್ರತಿ ಗಿಡಗಳು ಮತ್ತು ಮರಗಳಿಗೆ ಪ್ರತ್ಯೇಕ ಮಹತ್ವವಿದೆ. ಪ್ರತಿ ಮರ ಅಥವಾ ಗಿಡಗಳನ್ನು ಇಂಥದ್ದೇ ಆದ ನಿರ್ದಿಷ್ಟ ದಿಕ್ಕಿನಲ್ಲಿ ನೆಡಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ, ಅವರು ಹೇಳಿದ ಹಾಗೆ ಸರಿಯಾದ ದಿಕ್ಕಿನಲ್ಲಿ ಗಿಡ ನೆಟ್ಟು, ಮರ ಬೆಳೆಸಿದರೆ ಅವುಗಳಿಂದ ಸಕಾರಾತ್ಮಕ ಪ್ರಯೋಜನಗಳು ಸಿಗುತ್ತದೆ. ಈ ರೀತಿಯಾಗಿ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಮನೆಯಲ್ಲಿ ಬಿಲ್ವಪತ್ರೆಯನ್ನು ಬೆಳೆಸುವುದು ಕೂಡ ಒಳ್ಳೆಯದು ಎಂದು ಹೇಳಲಾಗುತ್ತದೆ. ಬಿಲ್ವಪತ್ರೆ ಎನ್ನುವ ಹೆಸರು ಕೇಳಿದರೆ ಮೊದಲಿಗೆ ನೆನಪಾಗುವುದು ಶಿವ. ಇದು ಶಿವನಿಗೆ ಪ್ರಿಯವಾದ ಮರ.

ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದನ್ನು ಹಲವು ಬಾರಿ ನೋಡಿರುತ್ತೇವೆ. ಈ ಮರದಲ್ಲಿ ಲಕ್ಷ್ಮೀದೇವಿ ನೆಲೆಸಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಬಿಲ್ವ ಮರವನ್ನು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ಹಾಗಿದ್ದರೆ, ಬಿಲ್ವ ಮರವನ್ನು ಮನೆಯಲ್ಲಿ ನೆಡುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ಇಂದು ನಿಮಗೆ ತಿಳಿಸುತ್ತೇವೆ..
*ಬಿಲ್ವ ಮರ ನೆಡುವುದರಿಂದ ಮನೆಯಲ್ಲಿ ಯಾವುದೇ ಥರದ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತಾರೆ. ಈ ಮರದ ಕೆಳಗೆ ನಿಂತು, ಅನ್ನ ಹಾಗು ಸಿಹಿ ತಿಂಡಿ ಇಂಥವುಗಳನ್ನು ದಾನ ಮಾಡುವುದರಿಂದ ಅವರ ಮನೆಗೆ ಬಡತನ ಬರುವುದಿಲ್ಲ ಎಂದು ಹೇಳುತ್ತಾರೆ..

*ನಿಮ್ಮ ಮನೆಯಲ್ಲಿ ಬಿಲ್ವ ಮರ ಬೆಳಸಿದರೆ ಹಾವು ಮನೆಗೆ ಬರುವುದಿಲ್ಲ ಎನ್ನಲಾಗುತ್ತದೆ. ಏಕೆಂದರೆ ಇದು ಶಿವನಿಗೆ ಪ್ರಿಯವಾದ ಮರ ಆಗಿದೆ.
*ಶಿವನಿಗೆ ಪ್ರಿಯವಾದ ಮರ ಇದಾಗಿರುವುದರಿಂದ ಬಿಲ್ವ ವೃಕ್ಷ ನೆಡುವುದರಿಂದ ಶಿವನ ಆಶೀರ್ವಾದ ಸಿಗುತ್ತದೆ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತವೆ.
*ಬಿಲ್ವ ಮರದ ಬೇರು ತೆಗೆದುಕೊಂಡು, ಅದಕ್ಕೆ ಕೆಂಪು ಬಟ್ಟೆ ಕಟ್ಟಿ, ನಿಮ್ಮ ಮನೆಯ ಲಾಕರ್ ನಲ್ಲಿ ಇಟ್ಟರೆ, ಹಣದ ತೊಂದರೆ ಆಗುವುದಿಲ್ಲ.

*ಈ ಮರವನ್ನು ನೆಡುವುದರಿಂದ ಸಂತಾಣದಲ್ಲಿ ವೃದ್ಧಿ ಆಗುತ್ತದೆ, ಅದೇ ರೀತಿ ಮರವನ್ನು ಕತ್ತರಿಸುವುದರಿಂದ ಸಂತಾನ ಬೆಳೆವಣಿಗೆ ನಿಂತು ಹೋಗುತ್ತದೆ ಎಂದು ಹೇಳುತ್ತಾರೆ.
*ಬಿಲ್ವ ಮರಕ್ಕೆ ಶುದ್ಧ ನೀರಿನಿಂದ ಪೋಷಣೆ ನೀಡಿದರೆ, ಪೂರ್ವಿಕರಿಗೆ ಸಂತೋಷ ಆಗುತ್ತದೆ, ಅವರ ಆಶೀರ್ವಾದ ಸಿಗುತ್ತದೆ ಎಂದು ಹೇಳುತ್ತಾರೆ.
*ಬಿಲ್ವ ಮರದ ಜೊತೆಗೆ ಬಿಳಿ ಆಕವನ್ನು ಜೊತೆಯಾಗಿ ಇರಿಸುವುದರಿಂದ ತಾಯಿ ಲಕ್ಷ್ಮಿ ಮತ್ತು ಶಿವ ಇಬ್ಬರ ಆಶೀರ್ವಾದ ಕೂಡ ಸಿಗುತ್ತದೆ.