ನೇರವಾಗಿ ರಕ್ಷಿತ್ – ವಿಜಯ್ ಬಗ್ಗೆ ಹೋಲಿಕೆ ಮಾಡಿ, ಇದ್ದದ್ದದ್ದು ಇದ್ದ ಹಾಗೆ ಹೇಳಿದ ರಶ್ಮಿಕಾ; ವಿಜಯ್ ಯಾವುದರಲ್ಲಿ ಗ್ರೇಟ್ ಅಂತೇ ಗೊತ್ತೇ??

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರು ಸಹ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಈ ಜೋಡಿ ಜೊತೆಯಾಗಿ ಮಾಲ್ಡಿವ್ಸ್ ಗೆ ಎಂದು ಸುದ್ದಿಯಿದೆ, ಏರ್ ಪೋರ್ಟ್ ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ, ಇಬ್ಬರು ತುಂಬಾ ಆತ್ಮೀಯರು, ಮದುವೆ ಆಗುತ್ತಾರೆ ಎನ್ನುವ ಬಗ್ಗೆ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ, ಆದರೆ ಈ ಜೋಡಿ ಮಾತ್ರ ತಾವಿಬ್ಬರು ಬೆಸ್ಟ್ ಫ್ರೆಂಡ್ಸ್, ಬೇರೇನೂ ಇಲ್ಲ ಎಂದು ಹೇಳಿಕೊಂಡರು ಸಹ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ಕೈಕೈ ಹಿಡಿದು ಓಡಾಡುವುದನ್ನು ನೋಡಿದರೆ, ಇವರಿಬ್ಬರು ಜಸ್ಟ್ ಫ್ರೆಂಡ್ಸ್ ಮಾತ್ರ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ..

ರಶ್ಮಿಕಾ ಅವರು ಮೊದಲಿಗೆ ಕನ್ನಡದ ಖ್ಯಾತ ನಟ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ಎಂಗೇಜ್ಮೆಂಟ್ ಸಹ ಮಾಡಿಕೊಂಡಿದ್ದರು, ಬಳಿಕ ಅದನ್ನು ಮುರಿದು ಹಾಕಿದ್ದರು. ತಮ್ಮ ರಿಲೇಶನ್ಷಿಪ್ ವಿಚಾರಗಳ ಬಗ್ಗೆ ರಶ್ಮಿಕಾ ಅವರು ಹೆಚ್ಚಾಗಿ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ, ಆದರೆ 2020ರಲ್ಲಿ ನಡೆದಿದ್ದ ಒಂದು ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದ ರಶ್ಮಿಕಾ, ತಮ್ಮ ಮತ್ತು ರಕ್ಷಿತ್ ಸಂಬಂಧ ಮುರಿದು ಬಿದ್ದಿದ್ದು ಯಾಕೆ, ವಿಜಯ್ ದೇವರಕೊಂಡ ಜೊತೆಗೆ ರಿಲೇಶನ್ಷಿಪ್ ಶುರುವಾಗಿದ್ದು ಹೇಗೆ, ಎಲ್ಲವನ್ನು ತಿಳಿಸಿದ್ದಾರೆ. ರಶ್ಮಿಕಾ ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. “ವಿಜಯ್ ದೇವರಕೊಂಡ ತುಂಬಾ ಸಿಂಪಲ್ ಅದ ವ್ಯಕ್ತಿತ್ವ ಇರುವವರು. ತಮ್ಮದೆ ಲೋಕದಲ್ಲಿ ಖುಷಿಯಾಗಿದ್ದಾರೆ. ಗೀತಾ ಗೋವಿಂದಮ್ ಚಿತ್ರೀಕರಣ ಸಮಯದಲ್ಲಿ ನಾವು ಫ್ರೆಂಡ್ಸ್ ಆಗಿದ್ವಿ ಅಷ್ಟೇ..

ಆದರೆ ವಿಜಯ್ ತುಂಬಾ ಸ್ಪೆಷಲ್, ಅವರ ಮತ್ತು ನನ್ನ ನಡುವೆ ಒಂದು ಸ್ಪಾರ್ಕ್ ಇದೆ ಎಂದು ನನ್ನ ಹಾರ್ಟ್ ಹೇಳ್ತಾ ಇತ್ತು. ನಾನು ಅದನ್ನ ಅವರ ಹತ್ತಿರ ಹೇಳಿದೆ, ಮೊದಲು ಅವರು ಅದನ್ನು ಒಪ್ಪಲಿಲ್ಲ ಹಿಂಜರಿದರು. ಅವರಿಗು ನನ್ನ ಬಗ್ಗೆ ವಿಶೇಷವಾದ ಫೀಲಿಂಗ್ಸ್ ಇದ್ದಿದ್ದರಿಂದ ಒಪ್ಪಿಕೊಂಡರು. ನಮ್ಮಿಬ್ಬರ ನಡುವೆ ಪ್ರೀತಿ ಶುರುವಾಗಿದ್ದಕ್ಕೆ ಅವರಿಗೆ ಬಹಳ ಸಂತೋಷ ಇತ್ತು. ನನ್ನ ಮಾಜಿ ಭಾಯ್ ಫ್ರೆಂಡ್ ರಕ್ಷಿತ್ ಶೆಟ್ಟಿ ಅವರ ಹಾಗೆ ವಿಜಯ್ ಅವರಲ್ಲಿ ಇನ್ಸೆಕ್ಯೂರ್ ಫೀಲಿಂಗ್ಸ್ ಇರಲಿಲ್ಲ. ವಿಜಯ್ ಅವರದ್ದು ಮುಕ್ತ ಮನಸ್ಸು ವ್ಯಕ್ತಿತ್ವ, ನಾನು ಸ್ವತಂತ್ರ್ಯವಾಗಿ ಇರಬೇಕು ಎಂದು ಅವರು ಬಯಸುತ್ತಾರೆ..” ಎಂದು ವಿಜಯ್ ಜೊತೆಗಿನ ರಿಲೇಶನ್ಷಿಪ್ ಬಗ್ಗೆ ಹೇಳಿಕೊಂಡಿದ್ದಾರೆ ರಶ್ಮಿಕಾ.