ಕಾಂತಾರ ಸಿನೆಮಾ ಕುರಿತು ಚೇತನ್ ಹೇಳಿಕೆಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ಉಪೇಂದ್ರ. ಹೇಳಿದ್ದೇನು ಗೊತ್ತೇ??

ಕಾಂತಾರ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿದೆ ಎಂದು ನಮಗೆಲ್ಲ ಗೊತ್ತಿದೆ. ಕಾಂತಾರ ಸಿನಿಮಾದ ಜೀವಾಳ ಮಂಗಳೂರಿನ ಸಂಸ್ಕೃತಿ ಭೂತಕೋಲ, ದೈವ ನರ್ತನ ಆಗಿದೆ. ಪ್ರಕೃತಿ ಮತ್ತು ಮನುಷ್ಯನ ನಡುವೆ ನಡೆಯುವ ಸಂಘರ್ಷಗಳು, ದೈವದ ಮೇಲಿನ ನಂಬಿಕೆ ಇವುಗಳನ್ನು ಮೂಲ ಕಥಾವಸ್ತುವಾಗಿ ತೆಗೆದುಕೊಂಡು, ಕಾಂತಾರ ಸಿನಿಮಾದ ಕಥೆಯನ್ನು ರಿಷಬ್ ಶೆಟ್ಟಿ ಅವರು ತಯಾರಿಸಿದ್ದಾರೆ.

ರಿಷಬ್ ಶೆಟ್ಟಿ ಅವರೇ ಕಥೆ ಬರೆದು, ನಿರ್ದೇಶನ ಮಾಡಿ, ನಾಯಕ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ಅಭಿನಯ ಅದ್ಭುತ, ವಿಶೇಷವಾಗಿ ದೈವನರ್ತನ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯ ರೋಮಾಂಚನ ಆಗುವಂಥದ್ದು. ಇಂಥಹ ಒಂದು ಅದ್ಭುತವಾದ ಕಥವಸ್ತು ತೆಗೆದುಕೊಡು, ಕರಾವಳಿ ಪ್ರದೇಶದ ಕಥೆಯನ್ನು ಸಿನಿಮಾಪ್ರಿಯರಿಗೆ ತಿಳಿಸಿರುವುದಕ್ಕೆ ರಿಷಬ್ ಶೆಟ್ಟಿ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ದೇಶಾದ್ಯಂತ ಎಲ್ಲಾ ಜನರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು, ಭೂತಕೋಲ, ದೈವ ನರ್ತನ, ದೈವದ ಮೇಲಿನ ನಂಬಿಕೆ ಇದೆಲ್ಲದರ ಬಗ್ಗೆ ಅರಿವು ಮೂಡಿದೆ ನಮ್ಮ ಆಚರಣೆಗಳು ಮತ್ತು ನಂಬಿಕೆಗಳನ್ನು ಎಂದಿಗೂ ಮರೆಯಬಾರದು ಎಂದು ಹೇಳುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಹೈಲೈಟ್ ಆಗಿರುವ ಮತ್ತೊಂದು ವಿಚಾರ ಕಂಬಳ. ಕಂಬಳ ಕ್ರೀಡೆ ಬಗ್ಗೆ ಸಹ ಚೆನ್ನಾಗಿ ತೋರಿಸಿದ್ದಾರೆ, ಕಂಬಳ ದೃಶ್ಯ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಿದ್ದಾರೆ ಜನರು.

ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಇಂದು ದೇಶಾದ್ಯಂತ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗಿ, ಎಲ್ಲಾ ಭಾಷೆಗಳಲ್ಲೂ ಯಶಸ್ಸು ಗಳಿಸುತ್ತದೆ, ಎಲ್ಲಾ ಕಡೆ ಥಿಯೇಟರ್ ಗಳಲ್ಲಿ ಕಾಂತಾರ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದೆ, ಪದೇ ಪದೇ ಸಿನಿಮಾ ಪ್ರಿಯರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ಹೊಗಳಿಕೆಯ ಸುರಿಮಳೆ ಸಿಗುತ್ತಿದೆ.

ಕಲೆಕ್ಷನ್ ವಿಚಾರದಲ್ಲಿ ಸಹ ಕಾಂತಾರ ಸಿನಿಮಾ ಮುಂದಿದೆ, ಈಗಾಗಲೇ ಎಲ್ಲಾ ಭಾಷೆಗಳಲ್ಲಿ 150 ಕೋಟಿಗೆ ಸಮೀಪ ಹಣಗಳಿಕೆ ಮಾಡಿದೆ ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹಣಗಳಿಕೆ ಮಾಡುವ ಭರವಸೆ ಮೂಡಿಸಿದೆ ಕಾಂತಾರ. ಎಲ್ಲಾ ಭಾಷೆಯ ಸಿನಿಪ್ರಿಯರು ಮತ್ತು ವಿಮರ್ಶಕರು ಸಿನಿಮಾವನ್ನು ಮೆಚ್ಚಿ ಉತ್ತಮ ಅಂಕ ನೀಡಿದ್ದು, ಹೊಂಬಾಳೆ ಸಂಸ್ಥೆಗೆ ಕಾಂತಾರ ಸಿನಿಮಾ ಮತ್ತೊಂದು ಹೆಮ್ಮೆಯ ಗರಿ ಆಗಿದೆ.

ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಕಾಂತಾರ ಸಿನಿಮಾ ಬಗ್ಗೆ ಈಗ ಒಂದು ವಿವಾದ ಶುರುವಾಗಿದೆ, ಕನ್ನಡದ ಖ್ಯಾತ ನಟ ಚೇತನ್ ಅವರು ಭೂತಕೋಲ ನಮ್ಮ ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ. ಭೂತಕೋಲ ಹಿಂದೂ ಸಂಸ್ಕೃತಿಯ ಭಾಗ ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದರು, ಅದು ಸತ್ಯವಲ್ಲ ಎಂದು ಹೇಳಿರುವ ಚೇತನ್ ಅವರು, ನಮ್ಮ ನಲಿಕೆ, ಪಬಂಧ, ಪರವರ ಇವು ಬಹುಜನ ಸಂಪ್ರದಾಯ ಆಗಿದೆ, ಇದು ವೈದಿಕ ಬ್ರಹ್ಮಣ್ಯದ ಹಿಂದೂ ಧರ್ಮಕ್ಕಿಂತ ಮೊದಲಿನಿಂದಲೂ ಇರುವುದು ಎಂದು ಚೇತನ್ ಅವರು ಹೇಳಿದ್ದಾರೆ.

ಇದರ ಬಗ್ಗೆ ರಿಷಬ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿ, ತಾವು ಹೇಗೆ ಮುಂಜಾಗ್ರತೆ ವಹಿಸಿ ಚಿತ್ರೀಕರಣ ಮಾಡಿದ್ದರು ಎನ್ನುವುದನ್ನು ವಿವರಿಸಿ, ತಾವು ಸಂಸ್ಕೃತಿಯ ಬಗ್ಗೆ ಮಾತನಾಡುವ ಅರ್ಹತೆ ಹೊಂದಿಲ್ಲ, ಆ ರೀತಿ ಮಾತನಾಡಿದವರಿಗೆ ಅರ್ಹತೆ ಇದೆಯಾ ಎಂದು ತಮಗೆ ಗೊತ್ತಿಲ್ಲ, ದೈವ ನರ್ತನ ಭೂತಕೋಲ ಮಾಡುವವರಿಗೆ ಮಾತ್ರ ಅದರ ಬಗ್ಗೆ ಮಾತನಾಡುವ ಅರ್ಹತೆ ಇದೆ ಎಂದು ಹೇಳಿದ್ದರು. ಇದೀಗ ಚೇತನ್ ಅವರು ಮಾತನಾಡಿರುವ ಈ ಹೇಳಿಕೆ ಬಗ್ಗೆ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದವರು ಈ ವಿಚಾರದ ಬಗ್ಗೆ ಉಪೇಂದ್ರ ಅವರಲ್ಲಿ ಪ್ರಶ್ನೆ ಕೇಳಿದ್ದು, “ಇಂತಹ ವಿಚಾರಗಳನ್ನು ignore ಮಾಡಬೇಕು. ಮಾತನಾಡುತ್ತಾ ಹೋದಷ್ಟು ಇವುಗಳು ಬೆಳೆಯುತ್ತವೆ. ಬೆಂಕಿಗೆ ತುಪ್ಪ ಸುರಿಯಬಾರದು, ಅದನ್ನು ಬಿಟ್ಟು Ignore ಮಾಡುವುದು ಒಳ್ಳೆಯದು. ಇದೆಲ್ಲವು ವೈಯಕ್ತಿಕ ಅಭಿಪ್ರಾಯ ನಂಬಿಕೆಗಳು, ಇವುಗಳ ಮೇಲೆ ಸಮಾಜದಲ್ಲಿ ಕಿತ್ತಾಡುವುದು ಅಸಹ್ಯ ಎನ್ನಿಸುತ್ತದೆ. ನಮ್ಮ ಮನೆಗಳಲ್ಲೂ ಕೂಡ ಇಂದಿಗೂ ನಂಬಿಕೆಗಳಿವೆ, ನಮ್ಮ ತಂದೆ ಈಗಲೂ ನಾಗರಪೂಜೆ ಮಾಡುತ್ತಾರೆ. ನಂಬಿಕೆಗಳ ಬಗ್ಗೆ ಹೆಚ್ಚು ಮಾತನಾಡಬಾರದು..” ಎಂದಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.