ಈ ಬಾರಿಯ ವಿಶ್ವಕಪ್ ನಲ್ಲಿ ನಾವು ಸೆಮಿ ಫೈನಲ್ ನ ಬಗ್ಗೆನೇ ಯೋಚನೆ ಮಾಡುತ್ತಿಲ್ಲ ಎಂದು ಷಾಕಿಂಗ್ ಹೇಳಿಕೆ ಕೊಟ್ಟ ರೋಹಿತ್.

2007ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ನಡೆದಾಗ ಧೋನಿ ಅವರ ನೇತೃತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿತ್ತು, ಅದೇ ಭಾರತದ ಮೊದಲ ಟಿ20 ಗೆಲುವು. ಅದಾದ ಬಳಿಕ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಿಲ್ಲ. ಹಾಗಾಗಿ ಈ ವರ್ಷ ಎಲ್ಲರ ಕಣ್ಣು ಭಾರತದ ಮೇಲಿದೆ, 15 ವರ್ಷಗಳ ನಂತರ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಬೇಕು ಎನ್ನುವುದು ಎಲ್ಲರ ಆಸೆ ಆಗಿದೆ. ಅದೇ ರೀತಿ ಭಾರತ ತಂಡ ಕೂಡ ಅಭ್ಯಾಸ ನಡೆಸುತ್ತಿದೆ.

ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಈಗಾಗಲೇ ಮೂರು ಅಭ್ಯಾಸ ಪಂದ್ಯಗಳನ್ನಾಡಿ, ಎರಡರಲ್ಲಿ ಗೆದ್ದಿದೆ. ನಿನ್ನೆ ನಡೆಯಬೇಕಿದ್ದ, ನಾಲ್ಕನೇ ಅಭ್ಯಾಸ ಪಂದ್ಯ ಮಳೆಯ ಕಾರಣ ರದ್ದಾಯಿತು. ಇನ್ನು ಟಿ20 ವಿಶ್ವಕಪ್ ಈಗಾಗಲೇ ಶುರುವಾಗಿದ್ದು, ಸೂಪರ್ 12 ಹಂತದ ಪಂದ್ಯ ಅಕ್ಟೋಬರ್ 22 ರಿಂದ ಶುರುವಾಗುತ್ತದೆ. ಅಕ್ಟೋಬರ್ 23ರಂದು ರಂದು ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಲಿದ್ದು, ಈ ಪಂದ್ಯಕ್ಕಾಗಿ ಎಲ್ಲರೂ ಕಾದು ಕುಳಿತಿದ್ದಾರೆ.

ಇದರಲ್ಲಿ ಭಾರತ ತಂಡ ಗೆಲ್ಲಲೇಬೇಕು ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಸಹ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಇದು ಕ್ಯಾಪ್ಟನ್ ಆಗಿ ಮೊದಲ ವಿಶ್ವಕಪ್ ಪಂದ್ಯ ಆಗಿದೆ, ರೋಹಿತ್ ಅವರು 2007ರಲ್ಲಿ ಸಹ ಧೋನಿ ಅವರ ನಾಯಕತ್ವದಲ್ಲಿ ವಿಶ್ವಕಪ್ ತಂಡದಲ್ಲಿದ್ದರು, ಆದರೆ ಈ ವರ್ಷ ನಾಯಕನಾಗಿ ವಿಶ್ವಕಪ್ ತಂಡವನ್ನು ಮುನ್ನಡೆಸಿದ್ದಾರೆ, ಈ ಸಮಯದಲ್ಲಿ ರೋಹಿತ್ ಶರ್ಮಾ ಅವರು ತಂಡದ ಬಗ್ಗೆ ಮತ್ತು ವಿಶ್ವಕಪ್ ನಲ್ಲಿ ತಮ್ಮ ಯೋಜನೆಗಳ ಬಗ್ಗೆ ಮಾತುಗಳನ್ನಾಡಿದ್ದಾರೆ..

“ಪ್ರಸ್ತುತ ನಾವು ಸೆಮಿಫೈನಲ್ಸ್ ಮತ್ತು ಫೈನಲ್ಸ್ ಬಗ್ಗೆ ಗಮನ ಕೊಡುತ್ತಿಲ್ಲ, ಪ್ರತಿ ಮ್ಯಾಚ್ ಎದುರಾಳಿ ತಂಡವನ್ನು ಹೇಗೆ ಎದುರಿಸುತ್ತೇವೆ ಎನ್ನುವ ಬಗ್ಗೆ ಗಮನ ಕೊಡುತ್ತಿದ್ದೇವೆ, ಹಾಗೆಯೇ ಪ್ರತಿ ಮ್ಯಾಚ್ ಅನ್ನು ಕೂಡ ಗೆಲ್ಲಬೇಕು ಎನ್ನುವ ಬಗ್ಗೆ ಗಮನ ಹರಿಸುತ್ತಿದ್ದೇವೆ.. ಆಸ್ಟ್ರೇಲಿಯಾದಲ್ಲಿ ಬೇರೆ ಬೇರೆ ರೀತಿಯ ಸವಾಲುಗಳಿವೆ. ಹಿಂದಿನ ಕೆಲವು ವರ್ಷಗಳಿಂದ ನಾವು ವಿಶ್ವಕಪ್ ಗೆದ್ದಿಲ್ಲ ಎಂದು ನನಗೂ ಬೇಸರ ಇದೆ..

ಇಲ್ಲಿ ಮೊದಲಿಗೆ ನಾವು ಆಸ್ಟ್ರೇಲಿಯಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಹಲವು ಆಟಗಾರರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಬಂದಿದ್ದಾರೆ. ಹಾಗಾಗಿ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವಲ್ಲಿ, ಮತ್ತು ಇನ್ನು ಕೆಲವು ವಿಚಾರಗಳಲ್ಲಿ ನಮಗೆ ಅನೇಕ ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಿ ವಿಶ್ವಕಪ್ ಗೆಲ್ಲುವ ವಿಶ್ವಾಸ ಮತ್ತು ಉತ್ಸಾಹ ಎರಡು ಕೂಡ ನಮ್ಮಲ್ಲಿ ಇದೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.

ಇನ್ನು ಪಾಕಿಸ್ತಾನ್ ವಿರುದ್ಧ ನಡೆಯಲಿರುವ ಮೊದಲ ಪಂದ್ಯದ ಬಗ್ಗೆ ರೋಹಿತ್ ಶರ್ಮಾ ಅವರು ಮಾತನಾಡಿದ್ದು, “ಪ್ರತಿಸಲದ ಹಾಗೆ ಈ ಸಾರಿ ಕೂಡ ಇಂಡೋ ಪಾಕ್ ಪಂದ್ಯ ಬ್ಲಾಕ್ ಬಸ್ಟರ್ ಆಗಿರುತ್ತದೆ. ಇಂಡಿಯಾ ಪಾಕಿಸ್ತಾನ್ ಮ್ಯಾಚ್ ನೋಡಲು ಅತಿದೊಡ್ಡ ಅಭಿಮಾನಿ ಬಳಗ ಸಹ ಬರುತ್ತದೆ. ಪ್ಲೇಯರ್ ಗಳಾಗಿ ಎಲ್ಲರಿಗೂ ಇದು ಬಹಳ ಮುಖ್ಯವಾದ ಪಂದ್ಯ, ಪಾಕ್ ವಿರುದ್ಧ ಗೆದ್ದು, ವಿಶ್ವಕಪ್ ಟೂರ್ನಿಯ ಗೆಲುವಿನ ಅಭಿಯಾನ ಶುರು ಮಾಡುತ್ತೇವೆ..”ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ ಕ್ಯಾಪ್ಟನ್ ಹಿಟ್ ಮ್ಯಾನ್.

ಸೂಪರ್ 12 ಹಂತದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ, ಪಾಕಿಸ್ತಾನ್, ಬಾಂಗ್ಲಾದೇಶ್ ಬಿಟ್ಟು ಇನ್ನು ಎರಡು ತಂಡಗಳ ಜೊತೆಗೆ ಇಂಡಿಯಾ ಮ್ಯಾಚ್ ಗಳನ್ನು ಆಡಬೇಕು. ಈ ಗ್ರೂಪ್ ಇಂದ ಸೆಮಿಫೈನಲ್ ತಲುಪುವ ತಂಡಗಳ ಪೈಕಿ ನಮ್ಮ ತಂಡ ಕೂಡ ಇರುತ್ತದೆ ಎಂದು ನಮಗೆ ವಿಶ್ವಾಸ ಇದೆ. ಆದರೆ ಈಗ ನಾವು ಸೆಮಿಫೈನಲ್ ಮತ್ತು ಫೈನಲ್ಸ್ ಬಗ್ಗೆ ಯೋಚನೇ ಮಾಡುತ್ತಿಲ್ಲ. ಸೂಪರ್ 12 ರೌಂಡ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವುದು ನಮ್ಮ ಗುರಿ ಆಗಿದೆ..” ಎಂದಿದ್ದಾರೆ ರೋಹಿತ್ ಶರ್ಮಾ.

ಭಾರತ ತಂಡದ ಪಂದ್ಯಗಳು ಯಾವಾಗ ನಡೆಯುತ್ತದೆ ಎಂದು ನೋಡುವುದಾದರೆ, ಅಕ್ಟೋಬರ್ 23ರಂದು,ಭಾರತ ವರ್ಸಸ್ಪಾಕಿಸ್ತಾನ, ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಅಕ್ಟೋಬರ್ 27ರಂದು, ಭಾರತ ವರ್ಸಸ್ ಅರ್ಹತಾ ಸುತ್ತಿನ A ಗ್ರೂಪ್​ನ ರನ್ನರ್​ ಅಪ್ ತಂಡ , ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಅಕ್ಟೋಬರ್ 30ರಂದು,ಭಾರತ ವರ್ಸಸ್ದಕ್ಷಿಣ ಆಫ್ರಿಕಾ,ಪರ್ತ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ನವೆಂಬರ್ 2ರಂದು, ಭಾರತ ವರ್ಸಸ್ ಬಾಂಗ್ಲಾದೇಶ ಆಡಿಲೇಡ್ ಓವಲ್ ನಲ್ಲಿ ನಡೆಯಲಿದೆ. ನವೆಂಬರ್ 6ರಂದು, ಭಾರತ ವರ್ಸಸ್ಅರ್ಹತಾ ಸುತ್ತಿನ B ಗ್ರೂಪ್​ನ ​ವಿನ್ನರ್ ತಂಡದ ಜೊತೆಗೆ ನಡೆಯಲಿದೆ. ತಪ್ಪದೆ ಈ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿ.