ಅಪ್ಪಿ ತಪ್ಪಿಯೂ ಕೂಡ ದೀಪಾವಳಿ ಈ ಕೆಲಸ ಮಾಡಬೇಡಿ, ಲಕ್ಷ್ಮಿ ದೇವಿ ಮನೆಯಿಂದ ಹೊರಟು ಹೋಗುತ್ತಾರೆ. ಏನು ಮಾಡಬಾರದು ಗೊತ್ತೇ??

ದೀಪಾವಳಿ ಹಬ್ಬಕ್ಕೆ ನಮ್ಮ ಧರ್ಮದಲ್ಲಿ, ಪುರಾಣದಲ್ಲಿ ಮತ್ತು ಸಂಸ್ಕೃತಿಯಲ್ಲಿ ಬಹಳ ಮಹತ್ವ ಇದೆ. ಭಾರತದ ಬಹುತೇಕ ಎಲ್ಲರ ಮನೆಯಲ್ಲೂ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ದೇವರಿಗೆ ಪೂಜೆ ಮಾಡುವುದು, ಸಂಜೆಯ ನಂತರ ಪಟಾಕಿ ಹೊಡೆಯುವುದು, ಸಿಹಿ ಅಡುಗೆ ಮಾಡಿ ಕುಟುಂಬವೆಲ್ಲ ಜೊತೆಗೆ ಕೂತು ಊಟ ಮಾಡುವುದು, ಇದೆಲ್ಲವನ್ನು ಜನರು ಬಹಳ ಇಷ್ಟ ಪಟ್ಟು ಮಾಡುತ್ತಾರೆ. ದೀಪಾವಳಿ ಹಬ್ಬ ವಿಶೇಷವಾಗಿ ಲಕ್ಷ್ಮಿದೇವಿಗೆ ಪೂಜೆ ಮಾಡುವ ಹಬ್ಬ.

ಈ ದಿನ ಲಕ್ಷ್ಮೀದೇವಿ ಆರಾಧನೆ ಮಾಡಿ ಭಕ್ತಿಯಿಂದ ಪೂಜೆ ಮಾಡಿದರೆ, ತಾಯಿಯ ಆಶೀರ್ವಾದ ನಿಮಗೆ ಸಿಗುವುದು ಖಂಡಿತ, ಲಕ್ಷ್ಮೀದೇವಿಯ ಆಶಿರ್ವಾದ ಸಿಕ್ಕರೆ, ನಿಮ್ಮ ಜೀವನ ಬದಲಾಗಿ, ನಿಮಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಬರುವುದಿಲ್ಲ. ಜೊತೆಗೆ, ಕುಟುಂಬದಲ್ಲಿ ಸುಖ ಸಂತೋಷ ಸಮೃದ್ಧಿ ತುಂಬಿರುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮೀದೇವಿಯನ್ನು ಪ್ರಸನ್ನಾರಾಗಿಸುವುದು ಬಹಳ ಮುಖ್ಯ..

ಅದೇ ರೀತಿ ದೇವಿಗೆ ಕೋಪ ಬರದ ಹಾಗೆ ಎಚ್ಚರಿಕೆ ವಹಿಸುವುದು ಕೂಡ ಅಷ್ಟೇ ಮುಖ್ಯ. ದೇವಿಗೆ ಕೋಪ ಬಂದರೆ, ಅವರ ಆಶೀರ್ವಾದ ಸಿಗುವುದಿಲ್ಲ, ಅದರಿಂದ ನೀವು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಹುದು. ಹಾಗಿದ್ದರೆ, ಲಕ್ಷ್ಮೀದೇವಿಗೆ ಇಷ್ಟವಾದ ಆ ಕೆಲಸಗಳು ಯಾವುವು? ನೀವು ಮಾಡಬಾರದ ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಈ ವರ್ಷ ದೀಪಾವಳಿ ಹಬ್ಬ ಇರುವುದು ಆಕ್ಟೊಬರ್ 23ರಂದು, ಈ ದಿನ ನಿಮ್ಮ ಮನೆಗಳಲ್ಲಿ ಲಕ್ಷ್ಮಿದೇವಿಗೆ ಇಷ್ಟ ಆಗಿರುವ ಆಹಾರ ಪದಾರ್ಥಗಳನ್ನು ತಯಾರಿಸಿ, ಪೂಜೆ ಮಾಡಿ, ದೇವಿಗೆ ನೈವೇದ್ಯ ಅರ್ಪಿಸಿ. ಇದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಿರುತ್ತದೆ. ದೀಪಾವಳಿ ಹಬ್ಬದ ದಿನ ಮನೆಯಲ್ಲಿ ಕುಬೇರ ದೇವ ಮತ್ತು ಧನ್ವಂತರಿ ದೇವರಿಗೆ ಪೂಜೆ ಮಾಡಲಾಗುತ್ತದೆ.

ದೀಪಾವಳಿ ಹಬ್ಬದ ದಿನದಂದು ಯಾವುದೇ ಕಾರಣಕ್ಕೂ ಮನೆಯನ್ನು ಖಾಲಿ ಬಿಡಬೇಡಿ. ಲಕ್ಷ್ಮಿದೇವಿಗೆ ಪೂಜೆ ಮಾಡಿದ ನಂತರ, ಮನೆಯಲ್ಲಿ ಯಾರಾದರೂ ಒಬ್ಬರಾದರು ಇರಲೇಬೇಕು. ಹಲವು ಜನರು ದೀಪಾವಳಿ ದಿನ ಪೂಜೆ ನಂತರ ಮನೆಯನ್ನು ಲಾಕ್ ಮಾಡಿ, ಹೊರಗಡೆ ಹೋಗುತ್ತಾರೆ, ಶಾಪಿಂಗ್ ಮಾಡುತ್ತಾರೆ. ಆ ರೀತಿ ಮಾಡಬಾರದು.

ದೀಪಾವಳಿ ಹಬ್ಬದ ದಿನ ಒಂದು ಪ್ರಮುಖವಾದ ಕೆಲಸವನ್ನು ಮಾಡಬಾರದು, ಈ ದಿನ ಸಂಜೆಯ ನಂತರ ಯಾರೊಂದಿಗೂ ಹಣದ ವಹಿವಾಟುಗಳನ್ನು ಮಾಡಬೇಡಿ. ದೀಪಾವಳಿ ಹಬ್ಬವನ್ನು ಲಕ್ಷ್ಮೀದೇವಿಗೆ ಅರ್ಪಣೆ ಮಾಡುವ ಹಬ್ಬ, ಹಾಗಾಗಿ ಈ ದಿನ ಸಂಜೆಯ ನಂತರ ನೀವು ಹಣದ ವಹಿವಾಟು ಮಾಡಿದರೆ, ಆರ್ಥಿಕವಾಗಿ ನಿಮ್ಮ ಸ್ಥಿತಿ ಕಠಿಣವಾಗಬಹುದು.

ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವ ಹಾಗೆ, ಬಿಳಿ ಬಣ್ಣದ ವಸ್ತುಗಳು ಎಂದರೆ ಲಕ್ಷ್ಮಿದೇವಿಗೆ ತುಂಬಾ ಇಷ್ಟ. ಲಕ್ಷ್ಮೀದೇವಿಯನ್ನು ಸಂತೋಷಪಡಿಸಲು, ಬಿಳಿ ಬಣ್ಣದ ವಸ್ತುಗಳನ್ನು ಬಳಸಲಾಗುತ್ತದೆ. ಅದರಿಂದಾಗಿ, ದೀಪಾವಳಿ ಹಬ್ಬದ ದಿನ ಸಂಜೆಯ ನಂತರ ಬಿಳಿ ಬಣ್ಣದ ವಸ್ತುಗಳನ್ನು ಯಾರಿಗೂ ದಾನವಾಗಿ ಕೊಡಬೇಡಿ. ಈ ರೀತಿ ಮಾಡುವುದರಿಂದ, ಲಕ್ಷ್ಮೀದೇವಿಗೆ ಕೋಪ ಬಂದು ನಿಮ್ಮ ಮನೆಯಿಂದ ಹೊರಟುಹೋಗುತ್ತಾಳೆ.

ಇಂದು ನಿಮಗೆ ತಿಳಿಸಿರುವ ಈ ಕೆಲಸಗಳನ್ನು ದೀಪಾವಳಿ ಹಬ್ಬದ ನೆನಪಿಟ್ಟು ಮಾಡಬೇಡಿ. ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಿ, ಹಬ್ಬವನ್ನು ಚೆನ್ನಾಗಿ ಆಚರಿಸಿ, ಸಂತೋಷದಿಂದ ಜೀವಿಸಿ. ಲಕ್ಷ್ಮೀದೇವಿಗೆ ಇಷ್ಟ ಆಗುವಂತಹ ಕೆಲಸಗಳನ್ನು ಮಾಡಿ, ತಾಯಿಯ ಆಶೀರ್ವಾದ ಪಡೆಯಿರಿ.