ಎಷ್ಟೇ ಮಾತ್ರೆ ನುಂಗಿದರು ಪರಿಹಾರ ಸಿಗದ ಅಸಿಡಿಟಿ ಗೆ ಕ್ಷಣ ಮಾತ್ರದಲ್ಲಿ ಪರಿಹಾರ ಪಡೆಯಲು ಇರುವ ಮನೆಮದ್ದು ಏನು ಗೊತ್ತೇ?? ಹೇಗೆ ಮಾಡಬೇಕು ಗೊತ್ತೇ??

ಗ್ಯಾಸ್ಟ್ರಿಕ್ ಎನ್ನುವುದು ಬಹಳ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಸಮಸ್ಯೆ ಆಗಿದೆ. ಹೊಟ್ಟೆಯಲ್ಲಿ ಅಸಿಡಿಟಿ ಆಗುತ್ತದೆ, ಆದರೆ ಈ ಸಮಸ್ಯೆ ಹೆಚ್ಚಾದಾಗ ತಲೆನೋವು ಬರುತ್ತದೆ ಮತ್ತು ವಾಂತಿ ಆಗುವುದು ಸಹ ಶುರುವಾಗುತ್ತದೆ. ಇದರಿಂದಾಗಿ ಅಸಿಡಿಟಿ ಇಂದ ತೊಂದರೆ ಅನುಭವಿಸುವವರು ಇನ್ನು ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುತ್ತಾರೆ. ಅಸಿಡಿಟಿ ಸಮಸ್ಯೆ ಕಡಿಮೆ ಆಗುತ್ತಿಲ್ಲ ಎಂದು ನಿಮಗೂ ಆ ಸಮಸ್ಯೆ ಕಾಡುತ್ತಿದ್ದರೆ, ಇಂದು ನಾವು ತಿಳಿಸುವ ಮನೆಮದ್ದುಗಳನ್ನು ತಪ್ಪದೇ ಟ್ರೈ ಮಾಡಿ..

*ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಅಗುತ್ತಿಲ್ಲ ಎನ್ನುವುದಾದರೆ, ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ನಿಂಬೆ ರಸದ ಜೊತೆಗೆ ಅಡುಗೆ ಸೋಡಾ ಬೆರೆಸಿ ಕುಡಿಯಿರಿ, ಈ ರೀತಿ ಮಾಡುವುದರಿಂದ ತಕ್ಷಣವೇ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.
*ಮನೆಯಲ್ಲಿ ಸಾಮಾನ್ಯವಾಗಿ ಅಡುಗೆಗೆ ಇಂಗು ಬಳಸುತ್ತೇವೆ, ಒಂದು ಗ್ಲಾಸ್ ಬೆಚ್ಚಗಿರುವ ನೀರಿಗೆ ಇಂಗು ಬೆರೆಸಿ ಕುಡಿಯಿರಿ. ಇಂಗಿನಿಂದ ಅಡುಗೆಗೆ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದನ್ನು ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ತಕ್ಷಣವೇ ಪರಿಹಾರ ಸಿಗುತ್ತದೆ. ಒಂದು ದಿನದಲ್ಲಿ ಎರಡರಿಂದ ಮೂರು ಸಾರಿ ಈ ರೀತಿ ಮಾಡಿ, ಕುಡಿಯಿರಿ.

*ಅಸಿಡಿಟಿ ಕಡಿಮೆ ಮಾಡಲು ಕೊತ್ತಂಬರಿ ಬೀಜ ಸಹ ಉತ್ತಮವಾದ ಪರಿಹಾರ ಆಗಿದೆ. ಅಸಿಡಿಟಿ ಸಮಸ್ಯೆಯಿಂದ ಪರಿಹಾರ ಪಡೆಯಲು ಬೆಳಗ್ಗೆ ಎದ್ದಾಗ ಕೊತ್ತಂಬರಿ ಬೀಜವನ್ನು ನೀರಿಗೆ ಬೆರೆಸಿ ಅದನ್ನು ಕುಡಿಯಿರಿ. ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಮಾತ್ರವಲ್ಲ, ಹೊಟ್ಟೆಗೆ ಸೇರಿದ ಬೇರೆ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ.
*ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಕರಿಮೆಣಸು ಬೆರಸಿದ ಹಾಲನ್ನು ಕುಡಿಯಿರಿ. ಕರಿಮೆಣಸು ಅಸಿಡಿಟಿ ಸಮಸ್ಯೆಗೆ ಸಹಾಯ ಮಾಡುತ್ತದೆ. ಇದರಿಂದ ಅಸಿಡಿಟಿ ಮಾತ್ರವಲ್ಲದೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ.