ಮಗಳನ್ನು 17 ವರ್ಷಕ್ಕೆ ನಟಿ ಮಾಡಲು, ಕೃತಿ ಶೆಟ್ಟಿ ಅವರ ತಾಯಿ ಮಾಡಿದ ತ್ಯಾಗದ ಕುರಿತು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ಮಗಳನ್ನು 17 ವರ್ಷಕ್ಕೆ ನಟಿ ಮಾಡಲು, ಕೃತಿ ಶೆಟ್ಟಿ ಅವರ ತಾಯಿ ಮಾಡಿದ ತ್ಯಾಗದ ಕುರಿತು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ನಟಿ ಕೃತಿ ಶೆಟ್ಟಿ ಇಂದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಹೆಸರುವಾಸಿ ಆಗಿರುವ ನಟಿ. ಕೃತಿ ಅವರು ಮೊದಲಿಗೆ ನಟಿಸಿದ್ದು ತೆಲುಗಿನ ಉಪ್ಪೇನ ಸಿನಿಮಾದಲ್ಲಿ, ಬಹಳ ಚಿಕ್ಕ ವಯಸ್ಸಿಗೆ ಇವರಿಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಸಿಕ್ಕಿತು. ಕೃತಿ ಅವರು ಉಪ್ಪೇನ ಸಿನಿಮಾದಲ್ಲಿ ನಟಿಸಿ, ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ, ಉಪ್ಪೇನ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಿನಿಮಾದ ಹಾಡುಗಳಲ್ಲಿ ಕೃತಿ ಶೆಟ್ಟಿ ಅವರ ಮುದ್ದಾದ ಎಕ್ಸ್ಪ್ರೆಷನ್ ಗಳನ್ನು ನೋಡಿ ಸಿನಿಪ್ರಿಯರು ಫಿದಾ ಆಗಿಹೋದರು. ಎಲ್ಲ ತೆಲುಗು ಹುಡುಗರ ಕ್ರಶ್ ಆಗಿಬಿಟ್ಟರು ಕೃತಿ ಶೆಟ್ಟಿ. ಹಾಡುಗಳು ಪಾಪ್ಯುಲರ್ ಆದ ಕಾರಣ ಉಪ್ಪೇನ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ ಇವರ ಡೇಟ್ಸ್ ಪಡೆಯಲು ನಿರ್ಮಾಪಕರು ಕ್ಯೂ ನಿಲ್ಲುವ ಹಾಗಾಯಿತು. ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ಕೃತಿ ಶೆಟ್ಟಿ ಅವರು ಎರಡು ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದರು.

ಸಿನಿಮಾ ಬಿಡುಗಡೆ ಆದಮೇಲಂತೂ ಬೇಬಮ್ಮ ಎಂದೇ ಅಭಿಮಾನಿಗಳು ಇವರನ್ನು ಕರೆಯಲು ಶುರು ಮಾಡಿದರು. ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಎನ್ನಿಸಿಕೊಂಡಿತು. ಮೊದಲ ಸಿನಿಮಾದಲ್ಲೇ ಕೃತಿ ಶೆಟ್ಟಿ ಅವರು ಬಿಗ್ ಹಿಟ್ ಪಡೆದರು. ಬಳಿಕ ಕೃತಿ ಅವರು ಅಭಿನಯಿಸಿದ ಎರಡು ಸಿನಿಮಾಗಳು, ಬಂಗಾರ್ರಾಜು ಮತ್ತು ಶ್ಯಾಮ್ ಸಿಂಘಾ ರಾಯ್ ತೆರೆಕಂಡವು. ಈ ಎರಡು ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಎನ್ನಿಸಿಕೊಂಡವು.

ಆದರೆ, ಇದರ ನಂತರ ಬಿಡುಗಡೆಯಾದ ಇನ್ನು ಮೂರು ಸಿನಿಮಾಗಳು ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಕೃತಿ ಶೆಟ್ಟಿ ಅವರು ಮೂರು ಸಿನಿಮಾಗಳು ಫ್ಲಾಪ್ ಲಿಸ್ಟ್ ಗೆ ಸೇರಿದವು. ಆದರೆ ಕೃತಿ ಅವರಿಗೆ ಸಿಗುತ್ತಿರುವ ಅವಕಾಶಗಳೇನು ಕಡಿಮೆ ಆಗುತ್ತಿಲ್ಲ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಮಾತನಾಡಿ ತಾವು ಸಿನಿಮಾಗೆ ಬರಲು ಬಹಳ ಕಷ್ಟಪಟ್ಟಿದ್ದಾಗಿ ಹೇಳಿಕೊಂಡರು, ಜೊತೆಗೆ ತಾವು ಇಷ್ಟು ಎತ್ತರಕ್ಕೆ ಬೆಳೆಯಲು ತಮ್ಮ ತಾಯಿ ಎಷ್ಟು ಸಹಕಾರ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕೃತಿ ಶೆಟ್ಟಿ ಅವರು ಹುಟ್ಟಿ ಬೆಳೆದದ್ದು ಎಲ್ಲವೂ ಮುಂಬೈನಲ್ಲಿ ಆದರೆ ಇವರದ್ದು ಮೂಲತಃ ಕರ್ನಾಟಕದ ಬೆಂಗಳೂರು. ಕರಾವಳಿ ಬೆಡಗಿ ಎಂದೇ ಎಲ್ಲರೂ ಇವರನ್ನು ಕರೆಯುತ್ತಾರೆ. ಕೃತಿ ಶೆಟ್ಟಿ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ಕೃತಿ ಅವರ ತಂದೆ ಬ್ಯುಸಿನೆಸ್ ಮ್ಯಾನ್ ಮತ್ತು ಅವರ ತಾಯಿ ಫ್ಯಾಶನ್ ಡಿಸೈನರ್ ಆಗಿದ್ದಾರೆ. ಕೃತಿ ಅವರಿಗೆ ಒಬ್ಬ ತಮ್ಮ ಮತ್ತು ಒಬ್ಬ ಸಹೋದರಿ ಸಹ ಇದ್ದಾರೆ. ಇವರ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ಕೃತಿ ಅವರು ಸೈಕಾಲಜಿ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಇವರಿಗೆ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಟಿವಿಯಲ್ಲಿ ಪ್ರಸಾರವಾಗುವ ಜಾಹೀರಾತುಗಳು ಮತ್ತು ಬೇರೆ ಜಾಹೀರಾತುಗಳಲ್ಲಿ ನಟಿಸಲು ಶುರು ಮಾಡಿದರು. ಜಾಹೀರಾತುಗಳು ಪಾಪ್ಯುಲರ್ ಆಗುತ್ತಿದ್ದ ಹಾಗೆ, ನಿಧಾನವಾಗಿ ಕೃತಿ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಹ ಬರಲು ಶುರುವಾದವು.

ಪ್ರಸ್ತುತ ಕೃತಿ ಅವರು ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೃತಿ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಅವರ ತಾಯಿ ಮಾಡಿರುವ ಅದೊಂದು ತ್ಯಾಗ ಬಹಳ ಮುಖ್ಯವಾದ ಕಾರಣ ಆಗಿದೆ. ಮಗಳು ಎತ್ತರಕ್ಕೆ ಬೆಳೆಯುತ್ತಿದ್ದ ಹಾಗೆ, ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಕೃತಿ ಶೆಟ್ಟಿ ಅವರ ತಾಯಿ ತಮ್ಮ ಫ್ಯಾಶನ್ ಡಿಸೈನಿಂಗ್ ಕೆಲಸವನ್ನು ತ್ಯಜಿಸಿದರು .

ಸದಾ ಮಗಳ ಜೊತೆಗೆ ಇರಲು ಶುರು ಮಾಡಿದರು, ಮಗಳು ಎಲ್ಲಿಗೆ ಹೋದರು ಕೃತಿ ಅವರ ತಾಯಿ ಜೊತೆಯಾಗಿ ಹೋಗಿ ಮಗಳ ಸೇಫ್ಟಿಯನ್ನು ನೋಡಿಕೊಳ್ಳುತ್ತಿದ್ದರು. ೧೭ ವರ್ಷಕ್ಕೆ ಮಗಳನ್ನು ಹೀರೋಯಿನ್ ಆಗಿ ಮಾಡಲು ಕೃತಿ ಅವರ ತಾಯಿ ಬಹಳಷ್ಟು ಕಷ್ಟ ಪಟ್ಟಿದ್ದಾರೆ.  ಮಗಳ ಭವಿಷ್ಯಕ್ಕಾಗಿ ಕೃತಿ ಅವರ ತಾಯಿ ಮಾಡಿರುವ ಈ ತ್ಯಾಗವನ್ನು ನೆನೆದು ಭಾವುಕರಾಗಿದ್ದರು ಕೃತಿ ಶೆಟ್ಟಿ.

kannadakannada actresskannada newskrithikrithi shettykriti shettytelugu actresstollywood