ದೀಪಾವಳಿ ಹಬ್ಬಕ್ಕೆ ಹಳದಿ ಚೂಡಿದಾರ್ ಹಾಕಿ ಮಸ್ತ್ ಫೋಟೋ ತೆಗೆಸಿಕೊಂಡ ಮೇಘ ಶೆಟ್ಟಿ ಡ್ರೆಸ್ ಗಾಗಿ ಖರ್ಚು ಮಾಡಿದ್ದೇನು ಗೊತ್ತೇ??

ಕಿರುತೆರೆಯ ಸೆನ್ಸೇಷನ್ ಆಗಿದ್ದ ಮೇಘಾ ಶೆಟ್ಟಿ ಇಂದು ಸಿನಿಮಾಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. 2019ರಲ್ಲಿ ಜೀಕನ್ನಡ ವಾಹಿನಿಯಲ್ಲಿ ಶುರುವಾದ ಜೊತೆ ಜೊತೆಯಲಿ ಧಾರವಾಹಿ ಮೂಲಕ ನಟನೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ಅವರು ಅನು ಸಿರಿಮನೆ ಪಾತ್ರದ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾದರು. ಜೊತೆ ಜೊತೆಯಲಿ ಧಾರವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ತಂದುಕೊಟ್ಟಿದೆ ಅಂದ್ರೆ, ಸಾಕಷ್ಟು ಜನ ಇವರನ್ನು ಅನು ಎಂದೇ ಗುರುತಿಸುತ್ತಾರೆ. ಜೊತೆ ಜೊತೆಯಲಿ ಇಂದ ಜನರ ಪ್ರೀತಿ, ದೊಡ್ಡ ಅಭಿಮಾನಿ ಬಳಗ ಎಲ್ಲವನ್ನು ಪಡೆದುಕೊಂಡಿದ್ದಾರೆ ಮೇಘಾ.

ಧಾರವಾಹಿ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಅಭಿನಯಿಸಿರುವ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆಗೆ ರೆಡಿಯಿದೆ, ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಹಾಡು ಜನರಿಗೆ ಬಹಳ ಇಷ್ಟವಾಯಿತು. ಇನ್ನು ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್ ಸಿನಿಮಾದಲ್ಲಿ ನಾಯಿಸುತ್ತಿದ್ದಾರೆ ಮೇಘಾ ಶೆಟ್ಟಿ, ದಿಲ್ ಪಸಂದ್ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಮೇಘಾ ಶೆಟ್ಟಿ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, ಜನರು ಇಷ್ಟಪಟ್ಟಿದ್ದಾರೆ. ಇಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ ಮೇಘಾ.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಈ ಮುದ್ದು ಮುಖದ ನಟಿ ಆಗಾಗ ಫೋಟೋಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಹಳದಿ ಬಣ್ಣದ ಡ್ರೆಸ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಿ ಮಿಂಚಿದ್ದಾರೆ ಮೇಘಾ ಶೆಟ್ಟಿ. ಹಳದಿ ಬಣ್ಣದ ಡ್ರೆಸ್ ಗೆ ಸರಿ ಹೊಂದುವಂತಹ ಸುಂದರವಾದ ಓಲೆ, ಸಿಂಪಲ್ ಆದ ಮೇಕಪ್ ಇಂದ ಅಭಿಮಾನಿಗಳನ್ನು ಇಂಪ್ರೆಸ್ ಮಾಡಿದ್ದಾರೆ ಮೇಘಾ ಶೆಟ್ಟಿ. ಈ ಫೋಟೋಸ್ ನೋಡಿದ ನೆಟ್ಟಿಗರು, ಅಪ್ಸರೆಯ ಹಾಗೆ ಕಾಣುತ್ತಿದ್ದೀರಾ ಎಂದು ಕಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಡ್ರೆಸ್ ಮತ್ತು ಫೋಟೋಶೂಟ್ ಗೆ ಮೇಘಾ ಶೆಟ್ಟಿ ಅವರು ಬರೋಬ್ಬರಿ 46 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಹಲವರು ಫೋಟೋಗಳು ಬಹಳ ಸುಂದರವಾಗಿವೆ ಎನ್ನುತ್ತಿದ್ದಾರೆ. ನೀವು ಕೂಡ ಮೇಘಾ ಶೆಟ್ಟಿ ಅವರ ಈ ಸುಂದರವಾದ ಫೋಟೋಗಳನ್ನು ನೋಡಿ..

dilpasand moviejothe jotheyalikannada actorskannada actressKannada cinemakannada newsmegha shettysandalwood