ಬಿಡುಗಡೆಯಾದ 48 ಗಂಟೆಗಳಲ್ಲಿಯೇ ಗಂಧದಗುಡಿಗೆ ಮತ್ತೊಂದು ಶಾಕ್. ಅಪ್ಪು ಕೊನೆಯ ಸಿನೆಮಾಗೆ ಇದೆಂತಹ ಪರಿಸ್ಥಿತಿ.

ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರು ಒಂದು ವರ್ಷಗಳ ಕಾಲ, ಅಮೋಘವರ್ಷ ಅವರ ಜೊತೆಗೆ ಪುನೀತ್ ಅವರು ಕರ್ನಾಟಕದಲ್ಲಿ ಹಲವು ಪ್ರದೇಶಗಳು, ಕಾಡು ಮೇಡು ಎಲ್ಲವನ್ನು ಸುತ್ತಿ ಬಂದಿದ್ದಾರೆ. ಅಪ್ಪು ಅವರ ಚಿಕ್ಕ ವಯಸ್ಸಿನ ಆಸೆಯ ಹಾಗೆ, ಆನೆ ಮತ್ತು ಹುಲಿಯನ್ನು ನೈಜವಾಗಿ, ಕಾಡಿನಲ್ಲಿ ನೋಡಿದ್ದಾರೆ ಅಪ್ಪು. ಪರಿಸರಡ್ಸ್ ವಿಚಾರದಲ್ಲಿ ಅಪ್ಪು ಅವರ ಕನಸುಗಳು, ಅಪ್ಪು ಅವರ ಭಯ, ನೈಜವಾಗಿ ನಿಜ ಜೀವನದಲ್ಲಿ ಅಪ್ಪು ಅವಫು ಹೇಗಿರುತ್ತಾರೆ ಎನ್ನುವುದನ್ನು ನೈಜವಾಗಿ ಕ್ಯಾಪ್ಚರ್ ಮಾಡಲಾಗಿದೆ.

ಸಿನಿಮಾ ನೋಡಿದವರಿಗೆ ಅದೊಂದು ವಿಶೇಷ ಅನುಭವ ಎನ್ನಿಸುತ್ತದೆ. ಅಪ್ಪು ಅವರು ಹೋಗುವಾಗ, ಎಂಥಹ ಸಿನಿಮಾವನ್ನು ಕನ್ನಡಿಗರಿಗೆ ನೀಡಿದ್ದಾರೆ, ಎಂಥ ಅದ್ಭುತವಾದ ಮೆಸೇಜ್ ಅನ್ನು ಚಿತ್ರಪ್ರೇಮಿಗಳಿಗೆ ಜನರಿಗೆ ನೀಡಿದ್ದಾರೆ ಎಂದು ವಾವ್ ಅನ್ನಿಸುವುದು ಖಂಡಿತ. ಸಿನಿಮಾದಲ್ಲಿ ಅಪ್ಪು ಅವರು ಹೇಳಿರುವ ಕೆಲವು ಮಾತುಗಳು ಮಣ್ಡಸಿಗೆ ಮುಟ್ಟುತ್ತವೆ. ಈ ಮನುಷ್ಯನಿಗೆ ದೇವರು ಅನ್ಯಾಯ ಮಾಡಿಬಿಟ್ಟ ಎಂದು ಅನ್ನಿಸುತ್ತದೆ. ಸಿನಿಮಾದಲ್ಲಿ ಕರ್ನಾಟಕದ ಸೊಬಗು ಸೌಂದರ್ಯ ಸೌಂದರ್ಯ ನೋಡುವುದು ಹಾಗೆಯೇ, ಅಪ್ಪು ಅವರನ್ನು ಕೊನೆಯ ಸಾರಿ ಬೆಳ್ಳಿಪರದೆಯ ಮೇಲೆ ನೋಡಲು ನೋಡಲು ಅಭಿಮಾನಿಗಳು ಕುಟುಂಬ ಸಮೇತ ಥಿಯೇಟರ್ ಗೆ ಬರುತ್ತಿದ್ದಾರೆ.

ಆದರೆ, ಈಗ ಸಿನಿಮಾ ಮೇಲೆ ನೆಗಟಿವ್ ಪ್ರಭಾವ ಶುರುವಾಗಿದೆ. ಕನ್ನಡದ ಹಲವು ಸಿನಿಮಾಗಳಿಗೆ ಕಾಡುವ ಪೈರೆಸಿ ಕಾಟ ಗಂಧದಗುಡಿ ಸಿನಿಮಾಗು ಕಾಡಲು ಶುರುವಾಗಿದೆ. ಸಿನಿಮಾ ಬಿಡುಗಡೆಯಾದ ದಿನವೇ, ಪೈರೆಸಿ ಕಾಪಿ ಕೆಲವು ವೆಬ್ಸೈಟ್ ಗಳಲ್ಲಿ ಸಿಗುತ್ತಿದ್ದು, ನೇರವಾಗಿ ಪೂರ್ತಿ ಸಿನಿಮಾ ವೆಬ್ಸೈಟ್ ನಲ್ಲಿ ಸಿನಿಮಾ ಸಿಗುತ್ತಿದೆ. ಇನ್ನು ಕೆಲವರು ಗಂಧದಗುಡಿ ಪೂರ್ತಿ ಸಿನಿಮಾವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ಕಾರಣಗಳಿಂದ ಥಿಯೇಟರ್ ಗೆ ಜನರು ಬರುವುದು ಕಡಿಮೆ ಆಗಬಹುದು ಎಂದು ಹೇಳಲಾಗುತ್ತಿದೆ.