ಎಲ್ಲದಕ್ಕೂ ಸಂಬಂಧ ಇದೆ, ಸೌತ್ ಆಫ್ರಿಕಾ ವಿರುದ್ಧ ಸೋತ ಮೇಲೆ, ವಿಶ್ವಕಪ್ ನಮ್ಮದೇ ಎಂದ ಫ್ಯಾನ್ಸ್. ಯಾಕೆ ಅಂತೇ ಗೊತ್ತೇ?? ಲಾಜಿಕ್ ಏನು ಗೊತ್ತೇ??

ಟಿ20 ವರ್ಲ್ಡ್ ಕಪ್ ಪಂದ್ಯದಲ್ಲಿ ಭಾರತ ತಂಡವು ನಿನ್ನೆ ಆಡಿದ ಮೂರನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತಿತು. ಪರ್ತ್ ನಲ್ಲಿ ನಡೆದ ಈ ಪಂದ್ಯದ ಪಿಚ್ ಎಲ್ಲರೂ ಅಂದುಕೊಂಡ ಹಾಗೆ ಇರಲಿಲ್ಲ. ಕಷ್ಟದ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಗಳು ಸೌತ್ ಆಫ್ರಿಕಾ ತಂಡದ ಬೌಲಿಂಗ್ ದಾಳಿಗೆ ಬೇಗ ವಿಕೆಟ್ ಗಳನ್ನು ಕಳೆದುಕೊಂಡರು. ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ 40 ಎಸೆತಕ್ಕೆ 68 ರನ್ ಗಳಿಸಿದ ಕಾರಣ ಭಾರತ ತಂಡದ ಸ್ಕೋರ್ 134 ತಲುಪಿತು.

ಬಳಿಕ ಸೆಕೆಂಡ್ ಇನ್ನಿಂಗ್ಸ್ ನಲ್ಲಿ, ಸೌತ್ ಆಫ್ರಿಕಾ ತಂಡದ ಬ್ಯಾಟಿಂಗ್ ನಲ್ಲಿ ಆರಂಭದಲ್ಲಿ ಭಾರತ ತಂಡ ಚೆನ್ನಾಗಿ ಬೌಲಿಂಗ್ ಮಾಡಿ, ರನ್ ಗಳನ್ನು ನಿಯಂತ್ರಣ ಮಾಡಿದರು, ಮೊದಲ ಓವರ್ ನಲ್ಲೇ ವಿಕೆಟ್ ಪಡೆದರು ಅರ್ಷದೀಪ್ ಸಿಂಗ್, ಅರ್ಷದೀಪ್ ಸಿಂಗ್ ಅವರು 2 ವಿಕೆಟ್,ಮೊಹಮ್ಮದ್ ಶಮಿ ಅವರು ಎರಡು ವಿಕೆಟ್ಸ್ ಪಡೆದರು. ಪಂದ್ಯ ಭಾರತದ ಕಡೆಗೆ ಇರುವಾಗ, 18ನೇ ಓವರ್ ನಲ್ಲಿ ನಡೆದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಪಂದ್ಯವು ಸೌತ್ ಆಫ್ರಿಕಾ ಕಡೆಗೆ ವಾಳಿತು, ಸೌತ್ ಆಫ್ರಿಕಾ ತಂಡ ಗೆದ್ದಿತು. ಪಂದ್ಯದಲ್ಲಿ ಭಾರತ ತಂಡ ಸೋತರು ಸಹ ಅಭಿಮಾನಿಗಳು ಈ ಸೋಲನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಿದ್ದಾರೆ. ಹಾಗೆಯೇ ಲಿಂಕ್ ಮಾಡಿ, ಈ ಬಾರಿ ವಿಶ್ವಕಪ್ ನಮ್ಮದೇ ಎನ್ನುತ್ತಿದ್ದಾರೆ.

2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ಸೌತ್ ಆಫ್ರಿಕಾ ವಿರುದ್ಧ ಹೀಗೆ ಸೋತಿತ್ತು, ಅದೇ ರೀತಿ ಐರ್ಲೆಂಡ್ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು, 2022ರಲ್ಲಿ ಸಹ ಇದು ಪುನರಾವರ್ತನೆ ಆಗುತ್ತಿದ್ದು, ಅಭಿಮಾನಿಗಳು ಈ ಲಿಂಕ್ ಬಗ್ಗೆ ಮಾತನಾಡಿ, ಈ ಬಾರಿ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳೇನೋ ಭಾರತ ತಂಡದ ಮೇಲೆ ವಿಪರೀತವಾಗಿ ಭರವಸೆ ಇಟ್ಟುಕೊಂಡಿದ್ದಾರೆ. ಆ ಭರವಸೆ ಮತ್ತು ವಿಶ್ವಾಸವನ್ನ ಭಾರತ ತಂಡ ಉಳಿಸಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.