ಸಮಂತಾ ಪರಿಸ್ಥಿತಿ ಕಂಡ ರಷ್ಯಾ ಡಾಕ್ಟರ್ ಹೇಳಿದ್ದೇನು ಗೊತ್ತೇ?? ಆಕೆ ಜೀವನದಲ್ಲಿ ಮುಂದೆ ಏನಾಗುತ್ತದೆ ಅಂತೇ ಗೊತ್ತೇ?? ಪಾಪ ಕಣ್ರೀ.

ನಟಿ ಸಮಂತಾ ವಿಚ್ಛೇದನದಿಂದ ವಿವಾದಗಳು ಹಾಗೂ ಮಾಧ್ಯಮಗಳಿಂದ ದೂರವೇ ಉಳಿದಿದ್ದರು, ನವೆಂಬರ್ 11ರಂದು ಸಮಂತಾ ಅಭಿನಯದ ಯಶೋಧ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾ ಪ್ರಚಾರದಲ್ಲಿ ಕೂಡ ಸಮಂತಾ ಅವರು ಕಾಣಿಸಿಕೊಳ್ಳುತ್ತಿಲ್ಲ, ಆಗ ಸಮಂತಾ ಅವರಿಗೆ ಚರ್ಮದ ಸಮಸ್ಯೆ ಆಗಿದೆ, ಅಮೆರಿಕಾದಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು, ಆದರೆ ತಾವು ಮಯೋಸೈಟಿಸ್ ಎನ್ನುವ ಸಮಸ್ಯೆಗೆ ಗುರುಯಾಗಿರುವ ಬಗ್ಗೆ ಸಮಂತಾ ಅವರು ರಿವೀಲ್ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಮಂತಾ ಅವರಿಗೆ ಸಪೋರ್ಟ್ ಮಾಡಿದರು. ಹಲವರು ಈ ಮಯೋಸಿಟಿಸ್ ಎಂದರೆ ಏನು? ಅದು ಬರುವುದು ಯಾಕೆ? ಏನೆಲ್ಲಾ ತೊಂದರೆ ತರುತ್ತದೆ? ಎಂದು ಹುಡುಕುತ್ತಿದ್ದಾರೆ. ಅದಕ್ಕೀಗ ರಷ್ಯದ ವೈದ್ಯರೊಬ್ಬರು ಸಮಂತಾ ಅವರ ಕಂಡೀಷನ್ ಬಗ್ಗೆ ಮಾತನಾಡಿದ್ದಾರೆ..

ದೇಹದಲ್ಲಿ ಆಟೋಇಮ್ಯೂನ್ ಇಂದಾಗಿ ಶುರುವಾಗುವ ಕೆಲವು ರೋಗಲಕ್ಷಣಗಳನ್ನು ಒಟ್ಟುಗೂಡಿಸಿದರೆ ಮೈಯೋಸಿಟಿಸ್ ಎಂದು ಕರೆಯುತ್ತಾರೆ. ಇದು ವ್ಯಕ್ತಿಯ ಸ್ನಾಯುಗಳು ದುರ್ಬಲವಾಗುವ ವ್ಯಕ್ತಿಗೆ ಆಯಾಸ ಆಗುವ ಹಾಗೆ ಮತ್ತು ನೋವಿನ ಲಕ್ಷಣಗಳು ಶುರುವಾಗುತ್ತದೆ. ಆದರೆ ಈ ರೋಗದಲ್ಲಿ ಕೆಲವು ಬೇರೆ ವಿಧ ಮತ್ತು ಭಿನ್ನತೆ ಇದೆ. ಸಮಂತಾ ಅವರಿಗೆ ಇದರಲ್ಲಿ ಯಾವ ಕಾಯಿಲೆ ಶುರುವಾಗಿದೆ ಎಂದು ಅವರು ಸ್ಪಷ್ಟವಾಗಿ ಹೇಳಿಲ್ಲ. ಇವುಗಳಲ್ಲಿ ಪಾಲಿಮೋಸಿಟಿಸ್ ಮೈಯೋಸಿಟಿಸ್‌ನಲ್ಲಿ ಒಂದು, ಇದರಲ್ಲಿ ಸ್ನಾಯು ನೋವು ಹೆಚ್ಚಾಗಿ ಕಂಡುಬರುತ್ತದೆ, ಯಾವುದೇ ಸಣ್ಣ ಕೆಲಸ ಮಾಡಿದರು ಬೇಗ ಸುಸ್ತಾಗುತ್ತದೆ. ಕೆಲವೊಮ್ಮೆ ಗೊತ್ತಿಲ್ಲದೆ ಕೆಳಗೆ ಬೀಳುತ್ತಾರೆ. ಎರಡನೆಯ ವಿಧವೆಂದರೆ ಡರ್ಮಟೊಮಿಯೊಸಿಟಿಸ್. ಇದು ಮಕ್ಕಳು ಮತ್ತು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತದೆ. ಚರ್ಮದ ಮೇಲೆ ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೂರನೆಯ ವಿಧವೆಂದರೆ ಕ್ಲೋಸನ್ ಬಾಡಿ ಮೈಯೋಸಿಟಿಸ್.

ಈ ಮೂರನೇ ರೀತಿಯ ಕಾರಣದಿಂದ, ಭುಜಗಳು, ಸೊಂಟ, ತೊಡೆ ಮತ್ತು ಸ್ನಾಯುಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ. ಈ ರೋಗ ಕಾಲುಗಳು ಮತ್ತು ಮೊಣಕಾಲಿನ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ, ಇದರಲ್ಲಿ ನೋವು ಹೆಚ್ಚಾಗಿರುತ್ತದೆ. ಈ ಕಾರಣದಿಂದ, ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಈ ರೀತಿಯ ಮಯೋಸೈಟಿಸ್ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಮೈಯೋಸಿಟಿಸ್ ರೋಗ ನಿರ್ಣಯ ಮಾಡುವುದು ತುಂಬಾ ಕಷ್ಟ ಎಂದು ವೈದ್ಯರು ಹೇಳುತ್ತಾರೆ. ಈ ರೋಗವು ಕೆಲವರಲ್ಲಿ ಅನು ವಂಶಿಕವಾಗಿ ಬರುತ್ತದೆ ಎಂದು ಸಂಶೋಧನೆಗಳ ಪ್ರಕಾರ ತಿಳಿದುಬಂದಿದೆ. ಈ ಕಾಯಿಲೆಗೆ ಪರಿಪೂರ್ಣ ಚಿಕಿತ್ಸೆ ಇಲ್ಲ. ಪರಿಹಾರಕ್ಕಾಗಿ ಮಾತ್ರ ಔಷಧಿಗಳಿವೆ.

actress samanthakannada newsmovie newsmyositissamanthasamantha ruth prabhutollywoodtollywood actresstollywood news