ಒಂದು ಕಾಲದ ಟಾಪ್ ನಟಿ ಅಮೂಲ್ಯ ಮಕ್ಕಳ ನಾಮಕರಣ: ಬಹಳ ಸಾಮಾನ್ಯ ಹೆಸರಿಟ್ಟ ಅಮೂಲ್ಯ. ಇಬ್ಬರ ಹೆಸರೇನು ಗೊತ್ತೇ??

ಸ್ಯಾಂಡಲ್ ವುಡ್ ನಲ್ಲಿ ಚಿಕ್ಕ ವಯಸ್ಸಿನಿಂದಲೂ ಸಕ್ರಿಯರಾಗಿರುವವರು ನಟಿ ಅಮೂಲ್ಯ, ಎಲ್ಲಾ ಸೆಲೆಬ್ರಿಟಿಗಳ ಮತ್ತು ಅಭಿಮಾನಿಗಳ ಫೇವರೆಟ್ ಆಗಿರುವ ನಟಿ ಅಮೂಲ್ಯ ಈ ವರ್ಷ ಶಿವರಾತ್ರಿ ಹಬ್ಬದ ದಿನ ಅವಳಿ ಮಕ್ಕಳಿಗೆ ಜನ್ಮ ನೀಡಿದರು ನಟಿ ಅಮೂಲ್ಯ. ಅವಳಿ ಗಂಡು ಮಕ್ಕಳು ಹಬ್ಬದ ದಿನ ಬೆಳಗ್ಗೆ 11:45 ಗಂಟೆಗೆ ಜನಿಸಿದರು. ಇದು ಅಮೂಲ್ಯ ಅವರ ಕುಟುಂಬಕ್ಕೆ ಡಬಲ್ ಖುಷಿ ತಂದ ಸಂದರ್ಭ ಆಗಿತ್ತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಹ ಅಮೂಲ್ಯ ಅವರಿಗೆ ಅವಳಿ ಮಕ್ಕಳು ಜನಿಸಿರುವ ವಿಚಾರ ಕೇಳಿ ವಿಶ್ ಮಾಡಿದ್ದರು.

ಇತ್ತೀಚೆಗೆ ನಟಿ ಅಮೂಲ್ಯ ಅವರು ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಶೇರ್ ಮಾಡಿ, ತಮ್ಮ ಮುದ್ದು ಮಕ್ಕಳ ಪರಿಚಯ ಮಾಡಿದ್ದರು. ಇದೀಗ ಅಮೂಲ್ಯ ಅವರ ಮುದ್ದಿನ ಮಕ್ಕಳ ನಾಮಕರಣ ಶಾಸ್ತ್ರ ನಡೆದಿದೆ. ನಿನ್ನೆ ಈ ಸಮಾರಂಭ ನಡೆದಿದ್ದು, ಬಹಳ ಸರಳವಾಗಿ ಮಕ್ಕಳಿಗೆ ನಾಮಕರಣ ಮಾಡಿ, ಸರಳವಾದ ಹೆಸರುಗಳನ್ನೇ ಇಟ್ಟಿದ್ದಾರೆ ನಟಿ ಅಮೂಲ್ಯ. ಅಮೂಲ್ಯ ಅವರ ಮಕ್ಕಳ ನಾಮಕರಣ ಸಮಾರಂಭದಲ್ಲಿ ಕುಟುಂಬದವರು ಮತ್ತು ಕೆಲವು ಆತ್ಮೀಯರು ಹಾಜರಿದ್ದರು, ಎಲ್ಲರೂ ಮಕ್ಕಳಿಗೆ ಆಶೀರ್ವಾದ ಮಾಡಿದ್ದಾರೆ.

ತಮ್ಮ ಮುದ್ದಿನ ಮಕ್ಳಳಿಗೆ ನಟಿ ಅಮೂಲ್ಯ ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ. ಈ ಸರಳವಾದ ಸುಂದರವಾದ ಹೆಸರನ್ನು ಅಮೂಲ್ಯ ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಮೂಲ್ಯ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಮೂಲ್ಯ ಅವರ ಮಕ್ಕಳ ನಾಮಕರಣದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮೂಲ್ಯ ಅವರ ಮುದ್ದಾದ ಮಕ್ಕಳ ಹೆಸರು ನಿಮಗೆ ಇಷ್ಟ ಆಯ್ತಾ ಎಂದು ಕಮೆಂಟ್ಸ್ ಮೂಲಕ ತಿಳಿಸಿ.

amulyaamulya jagadishamulya twin babieskannada actorsKannada cinemakannada film newskannada newssandalwood