ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿರುವ ಬನಾರಸ್ ಸಿನೆಮಾಗೆ ಮತ್ತೊಂದು ಶಾಕ್. ಏನು ಗೊತ್ತೇ??

ನಿನ್ನೆ ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗಿದೆ, ಅದು ಜೈದ್ ಖಾನ್ ಮತ್ತು ಸೋನಲ್ ಮೊಂಟೆರೋ ಅವರು ನಟಿಸಿರುವ ಬನಾರಸ್ ಸಿನಿಮಾ. ಜೈದ್ ಖಾನ್ ಅವರು ಖ್ಯಾತ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮಗ. ಈ ಯುವನಟನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಪೋರ್ಟ್ ಇದೆ. ದರ್ಶನ್ ಅವರು ಬನಾರಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಪಾಲ್ಗೊಂಡು ಬನಾರಸ್ ಸಿನಿಮಾಗೆ ಸಪೋರ್ಟ್ ಮಾಡಿದರು. ದರ್ಶನ್ ಅವರು ಮತ್ತು ಜಮೀರ್ ಅಹ್ಮದ್ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಜೈದ್ ಖಾನ್ ಅವರು ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಹೀರೋ ಆಗಿ ಲಾಂಚ್ ಆಗಿದ್ದಾರೆ, ಟೈಮ್ ಟ್ರಾವೆಲ್ ಕಥೆ ಇರುವ ಬನಾರಸ್ ಸಿನಿಮಾ ಮೂಲಕ, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ ಲಾಂಚ್ ಆಗಿದ್ದರೆ. ಸಿನಿಮಾದ ಟ್ರೈಲರ್ ನೋಡಿದರೆ, ಕಥೆ ಚೆನ್ನಾಗಿದೆ ಎಂದು ಸಿನಿಪ್ರಿಯರು ಅಂದುಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆ ನಂತರ ಅಂದುಕೊಂಡ ಹಾಗೆ ಓಪನಿಂಗ್ ಪಡೆದುಕೊಂಡಿಲ್ಲ. ಬನಾರಸ್ ಸಿನಿಮಾ ಸೋಷಿಯಲ್ ಮೀಡಿಯಾ, ಬುಕ್ ಮೈ ಶೋ ಮತ್ತು ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ಕಂಡುಬರುತ್ತಿದೆ.

ಬಹುತೇಕ ಕಡೆಗಳಲ್ಲಿ ಬನಾರಸ್ ಸಿನಿಮಾ ನೋಡಲು ಜನರು ಥಿಯೇಟರ್ ಗೆ ಬರುತ್ತಿಲ್ಲ. 100 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಬನಾರಸ್ ಸಿನಿಮಾ ಮೊದಲ ದಿನ ಗಳಿಸಿರುವುದು ಕೇವಲ 3 ಕೋಟಿ. ಬುಕ್ ಮೈ ಶೋ ಮೂಲಕ ಗೊತ್ತಾಗುವುದು ಏನೆಂದರೆ, ವೀಕೆಂಡ್ ನಲ್ಲಿ ಸಹ ಬನಾರಸ್ ಸಿನಿಮಾ ಬುಕಿಂಗ್ಸ್ ಚೆನ್ನಾಗಿ ನಡೆಯುತ್ತಿಲ್ಲ, ಹೆಚ್ಚಿನ ಟಿಕೆಟ್ಸ್ ಗಳು ಬುಕ್ ಆಗಿಲ್ಲ. ಹಾಗಾಗಿ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುತ್ತದೆ ಎನ್ನುವ ಭರವಸೆ ಸಹ ಈಗ ಕಡಿಮೆ ಆಗಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.