ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ರವರ ಒಟ್ಟು ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತೆ?? ಇಷ್ಟೆಲ್ಲ ಕೊಹ್ಲಿ ಒಬ್ಬರಿಗೆ ಬೇಕೇ??

ಟೀಮ್ ಇಂಡಿಯಾ ಮತ್ತು ನಮ್ಮ ಆರ್.ಸಿ.ಬಿ ತಂಡದ ಮಾಜಿ ಕ್ಯಾಪ್ಟನ್ ಕಿಂಗ್ ಕೋಹ್ಲಿ ಅವರ ಹುಟ್ಟುಹಬ್ಬ, ಇಂದು 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಕಿಂಗ್ ಮೋಲಿ. ಈ ವರ್ಷ ವಿಶ್ವಕಪ್ ನಲ್ಲಿ ಒಳ್ಳೆ ಫಾರ್ಮ್ ನಲ್ಲಿರುವ ಕಿಂಗ್ ಕೋಹ್ಲಿ ರನ್ ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾತೆ. ನಮ್ಮ ಮಾಜಿ ಕ್ಯಾಪ್ಟನ್ ಕೋಹ್ಲಿ ಅವರು ಐಪಿಎಲ್ ಶುರುವಾದಾಗಿನಿಂದಲೂ ಆರ್.ಸಿ.ಬಿ ತಂಡಕ್ಕಾಗಿಯೇ ಆಡುತ್ತಿದ್ದಾರೆ.
ವಿಶ್ವದಲ್ಲಿನ ಬೆಸ್ಟ್ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಕಿಂಗ್ ಕೋಹ್ಲಿ, ಇವರ ಫಿಟ್ನೆಸ್ ನೋಡಿ ಎಲ್ಲರೂ ಕಲಿಯಬೇಕು ಎನ್ನುವ ಹಾಗಿದ್ದಾರೆ. ಜೊತೆಗೆ ರನ್ ಗಳಿಗೋಸ್ಕರ ಇವರು ಓಡುವ ರೀತಿಗೆ ವಿರಾಟ್ ಕೋಹ್ಲಿ ರನ್ನು ರನ್ ಮಷಿನ್ ಎಂದೇ ಕರೆಯುತ್ತಾರೆ.

ಕ್ರಿಕೆಟ್ ಆಟದ ಜೊತೆಗೆ ವಿರಾಟ್ ಕೋಹ್ಲಿ ಅವರು ಹಲವಾರು ಬ್ರಾಂಡ್ ಗಳಿಗೆ ಬ್ರಾಂಡ್ ಅಂಬಾಸಿಡರ್. ಜಾಹಿರಾತುಗಳಿಂದ, ಕ್ರಿಕೆಟ್ ಇಂದ ಸಾಕಷ್ಟು ಹಣ ಗಳಿಸುವ ಕೋಹ್ಲಿ ಅವರ ಈಗಿನ ಒಟ್ಟು ಮೊತ್ತ ಆಸ್ತಿ ಬರೋಬ್ಬರಿ 1200 ಕೋಟಿ. ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಪ್ರಮುಖ ಬ್ರಾಂಡ್ ಗಳು ಸಹ ಕೋಹ್ಲಿ ಅವರೇ ತಮ್ಮ ಬ್ರಾಂಡ್ ಅಂಬಾಸಿಡರ್ ಆಗಬೇಕು ಎಂದು ಬಯಸುತ್ತಾರೆ. ಹಲವಾರು ಬ್ರಾಂಡ್ ಎಂಡ್ರೋಸ್ಮೆಂಟ್, ಸ್ಟಾರ್ಟ್ ಅಪ್ ಗಳು, ಮತ್ತು ಜಾಹೀರಾತುಗಳಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾರೆ ಕಿಂಗ್ ಕೋಹ್ಲಿ. . ಈ ಮೂಲಗಳು ಮಾತ್ರವಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಸಹ ವಿರಾಟ್ ಕೋಹ್ಲಿ ಅವರಿಗೆ ಕೋಟಿಗಟ್ಟಲೆ ಹಣ ಸಿಗುತ್ತದೆ.

ಇನ್ಸ್ಟಾಗ್ರಾಮ್ ನಲ್ಲಿ ವಿರಾಟ್ ಕೋಹ್ಲಿ ಅವರಿಗೆ ಸುಮಾರು 177 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. ಹಾಗಾಗಿ ವಿರಾಟ್ ಕೋಹ್ಲಿ ಅವರು ಸೋಷಿಯಲ್ ಮೀಡಿಯಾ ಇಂದಲೇ ಬರೋಬ್ಬರಿ 328 ಕೋಟಿ ಹಣ ಗಳಿಸಿದ್ದಾರೆ. ವಿಶ್ವದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ ಪೈಕಿ ಕೋಹ್ಲಿ ಅವರು 61ನೇ ಸ್ಥಾನದಲ್ಲಿದ್ದಾರೆ. ಫುಟ್ ಬಾಲ್ ಪ್ಲೇಯರ್ ಗಳು ಈ ಲಿಸ್ಟ್ ನಲ್ಲಿದ್ದಾರೆ. ಪ್ರತಿ ತಿಂಗಳು ಕೋಹ್ಲಿ ಅವರ ಆದಾಯ ಸುಮಾರು 5 ರಿಂದ 6 ಕೋಟಿ ಆಗಿದೆ, ಕೋಹ್ಲಿ ಅವರ ಬ್ಯಾಟ್ ಮೇಲಿರುವ ಸ್ಟಿಕರ್ ಕಂಪೆನಿಯೇ ಅವರಿಗೆ ವರ್ಷಕ್ಕೆ 12 ಕೋಟಿ ರೂಪಾಯಿ ನೀಡುತ್ತದೆ. ಹೀಗೆ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ, ಆಸ್ತಿ ವಿಷಯದಲ್ಲಿ ಕೂಡ ಟಾಪ್ ನಲ್ಲಿದ್ದಾರೆ ಕಿಂಗ್ ಕೋಹ್ಲಿ.