T20-world-cup: ನಂಬರ್ ಒನ್ ಆಗಿ ಭಾರತ ಸೆಮಿಫೈನಲ್ ಹೋಗಿರಬಹುದು, ಆದರೆ ನಾಯಕ ಹಾಗೂ ಉಪನಾಯಕನ ನಡುವೆ ಏನಾಗಿದೆ ಗೊತ್ತೇ??

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಈಗ ಸೆಮಿ ಫೈನಲ್ಸ್ ಹಂತ ತಲುಪಿ ಗುರುವಾರ ನಡೆಯುವ, ಸೆಮಿ ಫೈನಲ್ಸ್ ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣೆಸಾಡಲಿದೆ. ಈ ಪಂದ್ಯ ನೋಡಲು ವಿಶ್ವಮಟ್ಟದಲ್ಲಿ ಎಲ್ಲರೂ ಕಾಯುತ್ತಿದ್ದಾರೆ. ಭಾರತ ತಂಡ ಸೂಪರ್ 12 ಹಂತದಲ್ಲಿ ಗೆದ್ದು ಬೀಗುತ್ತಿದ್ದರು ಸಹ, ನಮ್ಮ ತಂಡದಲ್ಲಿ ಕೆಲವು ಸಮಸ್ಯೆಗಳಿವೆ, ಅವುಗಳನ್ನು ಅರ್ಥ ಮಾಡಿಕೊಂಡು ಸರಿಪಡಿಸಿಕೊಂಡರೆ ಮಾತ್ರ, ನಮ್ಮ ಗೆಲುವಿನ ಹಾದಿ ಸುಗಮವಾಗುತ್ತದೆ, ಆದರೆ ಸೆಮಿ ಫೈನಲ್ಸ್ ಗೆ ಮೊದಲು ನಮ್ಮ ಸಮಸ್ಯೆ ಏನು ಎಂದು ತಿಳಿಸುತ್ತೇವೆ ನೋಡಿ..

ಪ್ರಸ್ತುತ ನಮಗಿರುವ ನಮಗಿರುವ ಸಮಸ್ಯೆ, ತಮ್ಮ ತಂಡದ ಆರಂಭಿಕ ಜೋಡಿ, ಕೆ.ಎಲ್.ರಾಹುಲ್ ಅವರು ಮತ್ತು ರೋಹಿತ್ ಶರ್ಮಾ, ಉತ್ತಮ ಪ್ರದರ್ಶನ ನೀಡುತ್ತಿದ್ದ ಈ ವರ್ಷ ಟಿ20 ವಿಶ್ವಕಪ್ ನಲ್ಲಿ ನಿರೀಕ್ಷೆಯ ಪ್ರದರ್ಶನ ನೀಡಿಲ್ಲ, ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ 5 ಪಂದ್ಯಗಳಲ್ಲಿ ಸಿಕ್ಕಿರುವುದು ಕೇವಲ 52 ರನ್ ಗಳು ಮಾತ್ರ. ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ, ಅದರಲ್ಲಿ ಇವರಿಬ್ಬರ ಜೊತೆಯಾಟ , 1.5 ಓವರ್ ಗೆ ಕಳೆದು ಹೋಯಿತು. ರಾಹುಲ್ 7 ರನ್ ಗಳಿಸಿ ಔಟ್ ಆದರು. ನೆದರ್ಲ್ಯಾನ್ಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಈ ಜೋಡಿ ಕಲೆಹಾಕಿದ್ದು, ಕೇವಲ 11 ರನ್ ಗಳು. 2.4 ಓವರ್ ನಲ್ಲಿ ರಾಹುಲ್ ಔಟ್ ಆಗಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮೊದಲು ಔಟ್ ಆದರು, ಮೂರನೇ ಪಂದ್ಯದಲ್ಲಿ 4.2 ಓವರ್ ನಲ್ಲಿ 23 ರನ್ ಅಷ್ಟೇ ಗಳಿಸಿತ್ತು ಈ ಜೋಡಿ. ಬಾಂಗ್ಲಾದೇಶ್ ವಿರುದ್ಧ ನಡೆದ ಪಂದ್ಯದಲ್ಲಿ ಸಹ ಇವರಿಬ್ಬರು ಗಳಿಸಿದ್ದು ಕೇವಲ 11 ರನ್ ಗಳು, 3.2 ಓವರ್ ಒಳಗೆ ರೋಹಿತ್ ರಾಹುಲ್ ಇಬ್ಬರು ಔಟ್ ಆಗಿದ್ದರು. ನಿನ್ನೆ ನಡೆದ ಐದನೇ ಪಂದ್ಯ ಜಿಂಬಾಬ್ವೆ ವಿರುದ್ಧ, ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 11 ರನ್ ಗಳಿಸಿ ಬಹಳ ಬೇಗ ಔಟ್ ಆದರು, ಆದರೆ ಕೆ.ಎಲ್.ರಾಹುಲ್ ಅರ್ಧಶತಕ ಸಿಡಿಸಿದರು. ಇವರಿಬ್ಬರು ಮುಂದಿನ ಪಂದ್ಯಗಳಲ್ಲಿ ಉತ್ತಮ ಜೊತೆಯಾಟದಲ್ಲಿ ಆಡಿದರೆ, ತಂಡಕ್ಕೆ ಗೆಲುವು ಸಿಗುವುದು ಇನ್ನು ಸುಲಭ.

cricket newskannada newskl rahulrohit sharmat20 worldcupt20world cup 2022