Kannada Astrology: ಕಾರ್ತಿಕ್ ಮಾಸದಲ್ಲಿ ಇದೊಂದು ಕೆಲಸ ಮಾಡಿ ಸಾಕು, ಲಕ್ಷ್ಮಿ ದೇವಿ ಮನೆ ಹುಡುಕಿಕೊಂಡು ಬಂದು ಹಣ ಕೊಡುವರು. ಏನು ಮಾಡಬೇಕು ಗೊತ್ತೇ??

ಕಾರ್ತಿಕ ಮಾಸದ ವಿಶೇಷತೆಗಳ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯೇ. ಈ ತಿಂಗಳಿನಲ್ಲಿ ಪ್ರತಿದಿನ ಭಕ್ತರು ಶಿವನ ಪೂಜೆ ಮಾಡುತ್ತಾರೆ, ಇದರಿಂದ ಎಲ್ಲಾ ಪಾಪಗಳಿಂದ ವಿಮೋಚನೆ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ತಿಂಗಳಿನಲ್ಲಿ ಪ್ರತಿದಿನ ದೇವರ ಪೂಜೆ ಮಾಡುವುದರಿಂದ ಶುಭಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಜೀವನದಲ್ಲಿ ವಿಜಯ ಸಿಗಬೇಕು ಮುಟ್ಟಿದ್ದೆಲ್ಲವು ಬಂಗಾರವಾಗಬೇಕು ಎಂದರೆ ನೀವು ಕೆಲವು ಕೆಲಸಗಳನ್ನು ಮಾಡಬೇಕು. ಕಾರ್ತಿಕ ಮಾಸದಲ್ಲಿ ಬೆಳಗ್ಗಿನ ಜಾವ ಎದ್ದ ತಕ್ಷಣ, ಸ್ನಾನ ಮಾಡಿ ಪೂಜೆ ಮಾಡುವುದು ಒಳ್ಳೆಯ ಫಲ ಸಿಗುತ್ತದೆ..

ಹಾಗು ಮನಸ್ಸು ಪ್ರಶಾಂತವಾಗಿರುತ್ತದೆ ಎಂದು ಪಂಡಿತರು ಹೇಳುತ್ತಾರೆ. ಪುಣ್ಯ ನದಿಯಲ್ಲಿ ಸಮುದ್ರದಲ್ಲಿ ಸ್ನಾನ ಮಾಡುವುದರಿಂದ ಶ್ರೀ ಮಹಾವಿಷ್ಣು ಮತ್ತು ಲಕ್ಷ್ಮೀದೇವಿ ಆಶೀರ್ವಾದ ಸಿಗುತ್ತದೆ ಎಂದು ಹೇಳುತ್ತಾರೆ. ಪುಣ್ಯಸ್ನಾನದ ನಂತರ ದೇವರ ಪೂಜೆ ಮಾಡಿದರೆ, ದೇವರ ಆಶೀರ್ವಾದ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಸ್ನಾನದ ನಂತರ ದೇವರ ಆರಾಧನೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಕಾರ್ತಿಕ ಮಾಸದಲ್ಲಿ ಪ್ರತಿದಿನ ವಿಷ್ಣುವಿನ ಪೂಜೆ ಮಾಡುವುದರಿಂದ ಎಲ್ಲವೂ ಶುಭವಾಗುತ್ತದೆ.
ಶಿವನ ಪೂಜೆ ಮಾಡುವವರಿಗೆ ಶೀಸಾಯುಜ್ಯ ಪ್ರಾಪ್ತಿಯಾಗುತ್ತದೆ. ಭಗವಾನ್ ವಿಷ್ಣುವಿನ ಧ್ಯಾನ ಮಾಡುವವರಿಗೆ ವಿಷ್ಣುವಿನ ಅನುಗ್ರಹವನ್ನು ಸಿಗುತ್ತದೆ.

ಕಾರ್ತಿಕ ಸೋಮವಾರದಂದು ಶಿವಾರಾಧನೆ, ಕಾರ್ತಿಕ ಶುಕ್ರವಾರದಂದು ಲಕ್ಷ್ಮೀ ಪೂಜೆ, ದಶಮಿ, ಏಕಾದಶಿ, ದ್ವಾದಶಿ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಷ್ಣುವಿನ ಪೂಜೆ. ಕಾರ್ತಿಕ ಶನಿವಾರದಂದು ದುರ್ಗಾ ಮಾತೆಯ ಆರಾಧನೆ ಮಾಡುವುದು ಒಳ್ಳೆಯದು. ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವ ಇದೆ. ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ದೀಪಾರಾಧನೆ ಮಾಡುವುದು ಒಳ್ಳೆಯದು. ದೇವಸ್ಥಾನಗಳಲ್ಲಿ, ಗೋಶಾಲೆಗಳಲ್ಲಿ ಅಥವಾ ತುಳಸಿ ಗಿಡಕ್ಕೆ ದೀಪಾರಾಧನೆ ಮಾಡಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು. ಇದು ಒಳ್ಳೆಯ ಫಲಿತಾಂಶಗಳನ್ನು ನೀಡುತ್ತದೆ.

kannada astrologykannada news