ಮಹೇಶ್ ಬಾಬು ರವರನ್ನು ಪ್ರೀತಿಸಿ ಮದುವೆಯಾಗುವ ಮುನ್ನ ನಮ್ರತಾ ಪ್ರೀತಿ ಮಾಡಿದ ಇಬ್ಬರು ಯಾರು ಗೊತ್ತೇ?? ಕೊನೆಗೂ ತಿಳಿಯಿತು.

ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಮದುವೆಗಿಂತ ಮೊದಲು ಇವರು ಮಿಸ್ ಇಂಡಿಯಾ ಆಗಿದ್ದರು, ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದರು. ಕನ್ನಡದಲ್ಲಿ ಕೂಡ ನಟಿಸಿದ್ದಾರೆ ನಮ್ರತಾ ಶಿರೋಡ್ಕರ್, ತೆಲುಗು ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮಹೇಶ್ ಬಾಬು ಅವರನ್ನು ಪ್ರೀತಿಸಿ ಮದುವೆಯಾದರು. ಬೇರೆ ಕಲಾವಿದರ ಹಾಗೆ ಇವರ ದಾಂಪತ್ಯ ಜೀವನ ಅರ್ಧಕ್ಕೆ ಮುರಿದು ಬೀಳಲಿಲ್ಲ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ, ಬಹಳ ಸುಂದರವಾದ ದಾಂಪತ್ಯ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಮದುವೆ ನಂತರ ನಮ್ರತಾ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದು, ಹಲವು ಆಫರ್ ಗಳನ್ನು ರಿಜೆಕ್ಟ್ ಮಾಡಿದರು.

1993 ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಆಗಿ ಗೆದ್ದ ನಂತರ, ನಮ್ರತಾ ಅವರು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರು. ಜಬ್ ಪ್ಯಾರ್ ಕಿಸೀ ಹೋತಾ ಹೈ ಸಿನಿಮಾ ಮೂಲಕ ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ನಮ್ರತಾ. ಬಾಲಿವುಡ್‌ ನಲ್ಲಿ ಸುಮಾರು 20 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಲಯಾಳಂ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಬಿ.ಗೋಪಾಲ್ ಅವರು ನಿರ್ದೇಶನ ಮಾಡಿದ ವಂಶಿ ಸಿನಿಮಾ ಮೂಲಕ ನಮ್ರತಾ ಟಾಲಿವುಡ್‌ ಗೆ ಎಂಟ್ರಿ ಕೊಟ್ಟರು. ಮಹೇಶ್ ಬಾಬು ಅಭಿನಯದ ಈ ಸಿನಿಮಾದಲ್ಲಿ, ಕೃಷ್ಣ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಚಿತ್ರೀಕರಣ ನಡೆಯುವಾಗಲೇ ಮಹೇಶ್ ಮತ್ತು ನಮ್ರತಾ ಸ್ನೇಹಿತರಾದರು. ನಂತರ ಆ ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರು ಮದುವೆಯಾದರು. ಮುಂಬೈನಲ್ಲಿ ಜನಿಸಿದ ನಮ್ರತಾ ಅವರ ಜೀವನ ಕ್ಯಾಶುವಲ್ ಆಗಿತ್ತು.

ಮಹೇಶ್ ಬಾಬು ಅವರಿಗಿಂತ ಮೊದಲು ಇಬ್ಬರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದರು ನಮ್ರತಾ. ಮೊದಲಿಗರು ರೆಸ್ಟೋರೆಂಟ್ ಮಾಲೀಕ ದೀಪಕ್ ಶೆಟ್ಟಿ, ಇವರನ್ನು ನಮ್ರತಾ ಪ್ರೀತಿಸುತ್ತಿದ್ದರು, ಇವರಿಬ್ಬರು ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಆದರೆ ಕಾರಣಾಂತರಗಳಿಂದ ಇಬ್ಬರು ಬೇರೆ ಬೇರೆಯಾದರು. ನಂತರ ನಮ್ರತಾ ಅವರು, ಮಹೇಶ್ ಮುಂಜ್ರೇಕರ್ ಅವರೊಡನೆ ಪ್ರೀತಿಯಲ್ಲಿದ್ದರು, ಆದರೆ ಕೆಲವು ದಿನಗಳ ಡೇಟಿಂಗ್ ಮತ್ತು ಸಿನಿಮಾ ಚಿತ್ರೀಕರಣ ನಡೆಯಿತು. ಇವರ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದ ಹಾಗೆ ಮಹೇಶ್ ಮಂಜ್ರಾಕರ್ ಜೊತೆ ಕ್ಲೋಸ್ ಆದರು. ಇದಾದ ನಂತರ ತೆಲುಗಿನಲ್ಲಿ ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಸಿಕ್ಕಿದ್ದು, ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತಿದ್ದಂತ ಆತನಿಗೆ ಗುಡ್ ಬೈ ಹೇಳಿ ಮಹೇಶ್ ಬಾಬು ಅವರೊಡನೆ ಮದುವೆಯಾದರು ನಟಿ ನಮ್ರತಾ.