Darshan: ಮಕ್ಕಳ ಶಾಲಾ ಫೀಸ್ ನ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತ ಪಡಿಸಿದ ಡಿ ಬಾಸ್ ದರ್ಶನ್, ತನ್ನ ಮಗನಿಗೆ ಹೇಳಿಕೊಡುತ್ತಿರುವ ಬದುಕಿನ ಪಾಠ ಏನು ಗೊತ್ತೇ?

Darshan: ನಟ ದರ್ಶನ್ ಅವರು ಯಾವುದೇ ವಿಷಯ ಇದ್ದರು ನೇರವಾಗಿ ಮಾತನಾಡುವ ಸ್ವಭಾವ ಹೊಂದಿರುವವರು, ಅವರ ಮುಂದಿನ ಸಿನಿಮಾ ಕ್ರಾಂತಿ, ಈ ಸಿನಿಮಾದಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಬಗ್ಗೆ ಮಹತ್ವದ ಮೆಸೇಜ್ ಇದೆ. ಕ್ರಾಂತಿ ಸಿನಿಮಾ ಬಗ್ಗೆ ಮಾತನಾಡುತ್ತಾ ದರ್ಶನ್ ಅವರು ತಾವು ಓದಿದ ಶಾಲೆ, ಹಾಗೂ ತಮ್ಮ ಮಗ ಓದುತ್ತಿರುವ ಶಾಲೆಯ ಬಗ್ಗೆ ಮಾತನಾಡಿದ್ದು, ತಮ್ಮ ಕಾಲದಲ್ಲಿ ವಿದ್ಯಾಭ್ಯಾಸ ಹೇಗಿತ್ತು, ಈಗ ಹೇಗಿದೆ ಎನ್ನುವುದನ್ನು ತಿಳಿಸಿದ್ದಾರೆ. ದರ್ಶನ್ ಅವರು ಓದಿದ್ದು ಮೈಸೂರಿನ ಸಿದ್ಧಾರ್ಥ್ ಲೇಔಟ್ ನಲ್ಲಿರುವ ವೈಶಾಲಿ ಶಾಲೆಯಲ್ಲಿ. ಅದು ಖಾಸಗಿ ಶಾಲೆ ಆಗಿದ್ದರು ಸರ್ಕಾರಿ ಶಾಲೆಯ ಹಾಗೆ ಇತ್ತಂತೆ.

ಅವರ ಸಮಯದಲ್ಲಿ 50 ರೂಪಾಯಿಗೆ ಶಾಲೆಯ ಫೀಸ್ ಮುಗಿಯುತ್ತಿತ್ತು ಎಂದು ತಿಳಿಸಿದ್ದಾರೆ ಡಿಬಾಸ್. ತಾವು ಲಾಸ್ಟ್ ಬೆಂಚ್ ಸ್ಟುಡೆಂಟ್, ತರ್ಲೆ ಅಲ್ಲ ಆದರೆ, ಓದು ತಲೆಗೆ ಹೋಗ್ತಾ ಇರ್ಲಿಲ್ಲ..ಎಂದಿರುವ ದರ್ಶನ್ ಅವರು ತಮ್ಮ ಮಗ ಕೂಡ ತಮ್ಮ ಮಗ ಕೂಡ ತಮ್ಮ ಹಾಗೆಯೇ, ತಮಗಿಂತ ಒಂದು ಬೆಂಚ್ ಮುಂದೆ ಇದ್ದಾನೆ ಅಷ್ಟೇ ಎಂದು ಹೇಳಿದ್ದಾರೆ. ಮಗನ ಸ್ಕೂಲ್ ಗೆ ಲಕ್ಷ ಲಕ್ಷ ಫೀಸ್ ಕಟ್ಟುವ ಬಗ್ಗೆ ಮಾತನಾಡಿದ ಡಿಬಾಸ್, ಮಗನಿಗೆ ಹೇಳಿರುವ ಪಾಠದ ಬಗ್ಗೆ ತಿಳಿಸಿದ್ದಾರೆ, “ಅವನಿಗೆ ನಿನ್ನಿಂದ ಆದಷ್ಟು ಓದು ಅಂತ ಹೇಳಿದ್ದೀನಿ. ಬದುಕಿನ ಪಾಠ ನಾನು ಕಲಿಸುತ್ತೇನೆ ಅಂತ ಹೇಳಿದ್ದೀನಿ. ಯಾರ ಹತ್ತಿರಾನು ಕೈಚಾಚಬಾರದು, ಇನ್ನೊಬ್ಬರಿಗೆ ಕೊಡುವ ಹಾಗೆ ಆಗಬೇಕು. ನಾನು ಹೇಳುವ ಕೆಲಸ ಮಾಡಬೇಕು.ಏನೇ ಬೇಕಿದ್ದರು ನನ್ನ ಕೇಳು ಅಂತ ಹೇಳಿದ್ದೀನಿ. ಇದನ್ನು ಓದಿ..Kannada News: ಬರೋಬ್ಬರಿ 8 ವರ್ಷಗಳಿಂದ ಪ್ರೀತಿ ಮಾಡಿ ಮದುವೆಗೆ ಕೆಲವೇ ದಿನಗಳು ಇರುವಾಗ ನಡೆಯಿತು ಊಹಿಸದ ಘಟನೆ. ಕೊನೆಗೆ ಏನಾಯಿತು ಗೊತ್ತೇ?

ನನ್ನ ಮಗ ಏನಾದರೂ ಬೇಕು ಅಂತ ಕೇಳಿದ್ರೆ, ಅವನ ಕೈಯಲ್ಲಿ ಕೆಲಸ ಮಾಡಿಸುತ್ತೀನಿ, ಕೆಲಸ ಮಾಡಿದರೆ ದುಡ್ಡು ಸಿಗುತ್ತದೆ ಅನ್ನೋದನ್ನ ಅವನು ಅರ್ಥ ಮಾಡಿಕೊಳ್ಳಬೇಕು, ಹಾಗೆ ಬೆಳೆಸುತ್ತಾ ಇದ್ದೀನಿ..” ಎಂದು ತಮ್ಮ ಮಗನಿಗೆ ಕಲಿಸುತ್ತಿರುವ ಪಾಠದ ಬಗ್ಗೆ ಮಾತನಾಡಿದ್ದಾರೆ ನಟ ದರ್ಶನ್. ಇನ್ನು ಮಗನ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ಗೆ ಹೋದಾಗ, ನೀವು ಏನ್ ಮಾಡ್ತಿದ್ದೀರಾ ಅಂತ ಕೇಳಿದ್ರು, ಆರ್ಟಿಸ್ಟ್ ಅಂತ ಹೇಳಿದೆ, ಅದಕ್ಕೆ ಮಗನಿಗೆ ಎಷ್ಟು ಸಮಯ ಕೊಡ್ತೀರ ಅಂತ ಕೇಳಿದ್ರು, ಸಂಜೆ ಆರು ಗಂಟಗೆ ಮನೆಗೆ ಬರ್ತೀನಿ, 2 ಗಂಟೆ ಕೂತು ಮಾತಾಡ್ತೀನಿ ಅಂತ ಅಂದೆ, ಅವರು 6 ಗಂಟೆ ಸಮಯ ಕೊಡಬೇಕು ಅಂತ ಹೇಳಿದ್ರು, ಆಗ ನನಗೂ ಕೋಪ ಬಂದು, ಯಾರಾದರೂ ಮಗುವಿನ ತಂದೆ ಸೈನಿಕರಾಗಿದ್ದರೆ ನೀವು ಅವರನ್ನ ಶಾಲೆಗೆ ಸೇರಿಸಿಕೊಳ್ಳೋದಿಲ್ವಾ ಅಂತ ಕೇಳಿದೆ.. ಎಂದಿದ್ದಾರೆ ಡಿಬಾಸ್. ಇದನ್ನು ಓದಿ..Cricket News: ಪದೇ ಪದೇ ವಿಫಲವಾಗುತ್ತಿರುವ ರಾಹುಲ್, ಪ್ಯಾಂಟ್ ಬದಲಿಗೆ ಭಾರತಕ್ಕೆ ಈತನನ್ನು ಆಯ್ಕೆ ಮಾಡಿದರೆ ಬೆಸ್ಟ್ ಎನ್ನುತ್ತಿರುವ ಫ್ಯಾನ್ಸ್. ಆ ಟಾಪ್ ಆಟಗಾರ ಯಾರು ಗೊತ್ತೇ?