Kannada News: ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರು ನಟ ಪ್ರಭಾಸ್. ಇವರು ಈಗ ತೆಲುಗು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಪ್ರಭಾಸ್ ಅವರಿಗೆ ವಯಸ್ಸು 40 ಆಗಿದ್ದರು ಕೂಡ, ಇನ್ನು ಅವರು ಮದುವೆಯಾಗಿಲ್ಲ. ಪ್ರಭಾಸ್ ಅವರ ಮದುವೆ ಆಗಿದಿರುವುದರ ಬಗ್ಗೆ ಅನೇಕ ಮಾತುಗಳು ಕೇಳಿ ಬರುತ್ತಿದೆ. ಪ್ರಭಾಸ್ ಅವರ ಹೆಸರು ಕೆಲವು ನಟಿಯರ ಜೊತೆಗೂ ಕೇಳಿಬಂದಿದೆ.
ಆದರೆ ಮದುವೆವರೆಗೂ ಹೋಗಿಲ್ಲ ಈ ನಟ, ಪ್ರಭಾಸ್ ಅವರ ಮದುವೆ ಮೇಲೆ ಸಾಕಷ್ಟು ಜನರು ಕಣ್ಣಿಟ್ಟಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು ಎಲ್ಲರೂ ಸಹ ಪ್ರಭಾಸ್ ಅವರ ಮೇಲೆ ಕಣ್ಣಿಟ್ಟಿದ್ದಾರೆ. ಇದರ ನಡುವೆಯೇ ಈಗ ಬಾಲಿವುಡ್ ನ ಖ್ಯಾತ ನಟಿ ಪ್ರಭಾಸ್ ಅವರನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಸಧ್ಯಕ್ಕೆ ಭೇಡಿಯಾ ಸಿನಿಮಾ ಪ್ರೊಮೋಷನ್ ನಲ್ಲಿರುವ ಕೃತಿ ಅವರಿಗೆ ಸಂದರ್ಶನ ಒಂದರಲ್ಲಿ ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್ ಮತ್ತು ಪ್ರಭಾಸ್ ಈ ಮೂವರಲ್ಲಿ ಯಾರನ್ನು ಡೇಟ್ ಮಾಡುತ್ತೀರಿ, ಯಾರನ್ನು ಮದುವೆಯಾಗುತ್ತೀರಿ, ಯಾರ ಜೊತೆಗೆ ಫ್ಲರ್ಟ್ ಮಾಡುತ್ತೀರಿ ಎಂದು ಕೇಳಲಾಯಿತು. ಇದನ್ನು ಓದಿ.. Cricket News: ಬಿಸಿಸಿಐ ಒಪ್ಪಿದರೂ ಕೂಡ ಸೂರ್ಯ ನನ್ನ ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡಿಸಲು ಆಗಲ್ಲ ಎಂದ ಮ್ಯಾಕ್ಸ್ ವೆಲ್. ಯಾಕಂತೆ ಗೊತ್ತೇ?
ಅದಕ್ಕೆ ಉತ್ತರ ಕೊಟ್ಟ ಕೃತಿ ಅವರು, ಕಾರ್ತಿಕ್ ಆರ್ಯನ್ ಜೊತೆಗೆ ಫ್ಲರ್ಟ್ ಮಾಡುತ್ತೇನೆ, ಪ್ರಭಾಸ್ ಜೊತೆಗೆ ಮದುವೆಯಾಯುತ್ತೇನೆ, ಟೈಗರ್ ಶ್ರಾಫ್ ಜೊತೆಗೆ ಡೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದೀಗ ಕೃತಿ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಭಾಸ್ ಮತ್ತು ಕೃತಿ ಜೊತೆಯಾಗಿ ಆದಿಪುರುಷ್ ಸಿನಿಮಾ ಮಾಡಿದ್ದಾರೆ, ಈ ಸಿನಿಮಾ ಸಮಯದಿಂದಲೂ ಇವರಿಬ್ಬರು ಆತ್ಮೀಯವಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆ ಮಾತು ಈಗ ನಿಜವಾಗಿರುವ ಕಾಣುತ್ತಿದೆ, ಪ್ರಭಾಸ್ ಅವರು ಈ ಮದುವೆಗೆ ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಕೊನೆಗೂ ಮೊದಲ ಬಾರಿಗೆ ಮದುವೆ ಮುರಿದು ಬಿದ್ದ ಬಗ್ಗೆ ಸ್ಪಷ್ಟನೆ ಕೊಟ್ಟ ವೈಷ್ಣವಿ. ಹೇಳಿದ್ದೇನು ಗೊತ್ತೇ?? ಕಾರಣ ಏನು ಗೊತ್ತೇ?