Kannada News: ಇಷ್ಟು ದಿವ ಕಾಂತಾರ ಜೊತೆ ನಿಂತಿದ್ದ ದೈವಾರಾಧಕರು ಉಲ್ಟಾ ಹೊಡೆದು ಶಾಕ್: ಕಾಂತಾರ ವಿರುದ್ಧ ಮುಗಿಬಿದ್ದದ್ದು ಯಾಕೆ ಗೊತ್ತೇ?

Kannada News: ಕಾಂತಾರ ಸಿನಿಮಾದ ಪ್ರಮುಖ ಅಂಶವೇ ದೈವಾರಾಧನೆ, ತುಳುನಾಡಿನ ಈ ಸಂಸ್ಕೃತಿಯನ್ನು ಜನರು ಮೆಚ್ಚಿ ಕೊಂಡಾಡಿದ್ದಾರೆ. ಇಂದು ಕಾಂತಾರ ಸಿನಿಮಾ 400 ಕೋಟಿಗೆ ಸಮೀಪದಲ್ಲಿ ಹಣಗಳಿಕೆ ಮಾಡುತ್ತಿದೆ. ಹೀಗಿರುವಾಗ, ಕಾಂತಾರ (Kantara) ಸಿನಿಮಾ ಬಗ್ಗೆ ಈಗ ಒಂದು ಆರೋಪ ಕೇಳಿಬಂದಿದೆ. ಇತ್ತೀಚಿಗೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಕೊರಗಜ್ಜ (Koragajja) ಮತ್ತು ಬೇರೆ ದೈವಗಳ ಬಗ್ಗೆ ಆಚರಣೆಗಳನ್ನು ವ್ಯವಹಾರಕ್ಕಾಗಿ ಕೆಲವರು ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ಮೋಸ ಮಾಡುತ್ತಿದ್ದಾರೆ ಎಂದು
ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರು ದೈವಾರಾಧನಾ ಸಮಿತಿ, ಬೆಳ್ತಂಗಡಿಯಲ್ಲಿ ಸಮಿತಿಯವರು ತಿಳಿಸಿದ್ದಾರೆ.

ಆದಿ ಸ್ಥಾನದಲ್ಲಿ ಮಾತ್ರ ಕೊರಗಜ್ಜನ ಪೂಜೆ ನಡೆಯಬೇಕು, ಬೇರೆ ಎಲ್ಲೂ ನಡೆಯಬಾರದು ಎಂದು ಸಮಿತಿಯವರು ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಜನರು ದೈವದ ಹೆಸರು ಹೇಳಿ, ಸುಳ್ಳು ವೇಷ ಧರಿಸಿ ಧರಿಸಿ ಹಣ ಮಾಡುತ್ತಿದ್ದಾರೆ, ಇದೆಲ್ಲವೂ ಶುರು ಆಗೋದಕ್ಕೆ ಕಾಂತಾರ ಸಿನಿಮಾನೇ ಕಾರಣ. ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಣ ಗಳಿಸಿದೆ, ಆದರೆ ದೈವಾರಾಧನೆಯಲ್ಲಿ ಲೋಪವಾದಾಗ ಯಾರು ಏನನ್ನು ಹೇಳಲಿಲ್ಲ. ಕಾಂತಾರ ಸಿನಿಮಾದಲ್ಲಿ ತಪ್ಪುಗಳು ನಡೆದಿದೆ ಎಂದು ಹೇಳಿದ್ದಾರೆ. ಇದು ಗಂಭೀರ ಆರೋಪ ಎಂದಿದ್ದಾರೆ ಸಮಿತಿಯವರು.

ಮೈಸೂರು ಮತ್ತು ಬೆಂಗಳೂರಿನ ಕೆಲವರು ಕೂಡ ಕೊರಗಜ್ಜನ ಆದಿ ಸ್ಥಾನಕ್ಕೆ ಹೋಗಿ, ಪ್ರಾರ್ಥನೆ ಮಾಡಿದ್ದಾರೆ. ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರು ದೈವಾರಾಧನಾ ಸಮಿತಿ, ಬೆಳ್ತಂಗಡಿ ಹಿಂದೂ ಸಂರಕ್ಷಣಾ ಸಮಿತಿಯ ಮಂಗಳೂರಿನ ಕಾರ್ಯಕರ್ತರು ಇದಕ್ಕೆ ಬಂದಿದ್ದರು. ಸೂರಜ್ ಕೆ ಬಳ್ಳಾಲ್, ಪ್ರಭಾಕರ ಓಡಿಲ್ನಾಳ, ನಿಮಿಷ್ ರಾಜ್ ಮೈಸೂರು, ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರಿನ ಭರತ್ ಬಳ್ಳಾಲ್ ಬಾಗ್.. ಹಿಂದೂ ಸಂರಕ್ಷಣಾ ಸಮಿತಿ, ಮಂಗಳೂರಿನ ಇದರ ಕೆ.ಆರ್. ಶೆಟ್ಟಿ ಅಡ್ಯಾರ್ ಪದವು, ಚರಿತ್ ಪೂಜಾರಿ, ರೋಶನ್ ರೊನಾಲ್ಡ್ ಮತ್ತು ಇನ್ನಿತರ ಸಂಘಟನೆಗಳ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.