Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??

Business Idea: ಈಗಿನ ಕಾಲದಲ್ಲಿ ನೈಸರ್ಗಿಕ ಗಿಡಮೂಲಿಕೆ (Herbal Products) ಗಳಿಂದ ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಇವುಗಳನ್ನು ಬಳಸಿ, ನೀವು ಹಲವು ಸೌಂದರ್ಯವರ್ಧಕಗಳು (Cosmetics), ಸುವಾಸನೆಯ ಭರಿತ ಉತ್ಪನ್ನಗಳು (Flavored Products), ದಿನಬಳಕೆಯ ವಸ್ತುಗಳು (Daily Use Products), ವೈದ್ಯಕೀಯ (Medical Necessity), ಕೃಷಿಗಾಗಿ (Agricultural Practices). ಇವುಗಳ ಬಗ್ಗೆ ಆಸಕ್ತಿ ಇದ್ದವರು, ಇದನ್ನು ಬಳಸಿಕೊಂಡು ಬ್ಯುಸಿನೆಸ್ ಆಗಿ ಪರಿವರ್ತಿಸಬಹುದು. ಇದರಿಂದ ಹೆಚ್ಚು ಲಾಭವನ್ನು ಕೂಡ ಪಡೆಯಬಹುದು. ಇವುಗಳ ಬಗ್ಗೆ ಕೆಲವು ಬ್ಯುಸಿನೆಸ್ ಐಡಿಯಾಗಳನ್ನು ತಿಳಿಸುತ್ತೇವೆ ನೋಡಿ..

*ಗಿಡಮೂಲಿಕೆ ಮಾರಾಟ :- ಪ್ರತಿದಿನದ ಅವಶ್ಯಕತೆಗೆ ಗಿಡಮೂಲಿಕೆ ವಸ್ತುಗಳನ್ನು ಬಳಸುತ್ತಾರೆ, ಅವುಗಳನ್ನು ಮನೆಯಲ್ಲಿ ಬಳಸುವುದು ಮಾತ್ರವಲ್ಲದೆ, ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಕೂಡ ಮಾಡಬಹುದು. ಇದರಿಂದ ನೀವು ಗಿಡಮೂಲಿಕೆ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಅವಕಾಶ ಸಹ ಸಿಗುತ್ತದೆ. ಬೇರೆ ಕಂಪನಿಗಳಿಗೂ ಮಾರಾಟ ಮಾಡಬಹುದು. *ಗಿಡಮೂಲಿಕೆ ಸಾರಗಳನ್ನು ತಯಾರಿಸಿ ಹೋಲ್ ಸೇಲ್ ಆಗಿ ಮತ್ತು ರೀಟೇಲ್ ಆಗಿ ಮಾರಾಟ ಮಾಡಬಹುದು.
*ಮುಖ ಮತ್ತು ಕೂದಲನ್ನು ಸುಂದರವಾಗಿ ಇಟ್ಟುಕೊಳ್ಳಲು ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸುವುದು ಒಳ್ಳೆಯದು. ಇದನ್ನು ತಯಾರಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಆನ್ ಲೈನ್ ಮೂಲಕ ಸಹ ಮಾರಾಟ ಮಾಡಬಹುದು.
*ಗಿಡಮೂಲಿಕೆಗಳಲ್ಲಿ ಕ್ಲಿನಿಕಲ್ ಪದವಿ ಇದ್ದರೆ, ಗಿಡಮೂಲಿಕೆಯ ಚಿಕಿತ್ಸೆ ಪಡೆಯಲು ಬಯಸುವವರಿಗೆ ನೀವು ಚಿಕಿತ್ಸೆ ಕೊಡಬಹುದು. ಇದನ್ನು ಓದಿ..Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??

*ಕ್ಲಿನಿಕಲ್ ಪದವಿ ಪಡೆದವರು, ಅದರ ಬಗ್ಗೆ ಕಲಿಯಲು ಆಸಕ್ತಿ ಇರುವವರಿಗೆ ಬೋಧನೆ ಅಥವಾ ಪಾಠ ಕೂಡ ಮಾಡಬಹುದು. ಆನ್ಲೈನ್ ಅಥವಾ ಆಫ್ಲೈನ್ ತರಗತಿಗಳನ್ನು ಸಹ ತೆಗೆದುಕೊಳ್ಳಬಹುದು. ಇದರಿಂದಾಗಿ ಜನರಿಗೂ ಗಿಡಮೂಲಿಕೆಗಳ ಬಗ್ಗೆ ತಿಳುವಳಿಕೆ ಮೂಡುತ್ತದೆ.
*ಆರೋಮಥೆರಪಿ ಕೂಡ ಈಗ ಚಾಲ್ತಿಯಲ್ಲಿದೆ ,ಒಬ್ಬ ವ್ಯಕ್ತಿಯಲ್ಲಿ ಇರುವ ಆರೋಗ್ಯ ಸಮಸ್ಯೆಯನ್ನು, ಈ ರೀತಿಯಾಗಿ ಗುಣಪಡಿಸಬಹುದು. ಗಿಡಮೂಲಿಕೆಗಳಿಂದ ಸಾರಭೂತ ತೈಲ ಬಳಸಿ ಖಾಯಿಲೆಗಳನ್ನು ಗುಣಪಡಿಸಲು, ಈ ರೀತಿಯ ಚಿಕಿತ್ಸೆ ನೀಡಬಹುದು.
*ಗಿಡಮೂಲಿಕೆ ಕ್ಷೇತ್ರದಲ್ಲಿ ಸ್ಟಾರ್ಟಪ್ ಗಳು ಶುರುವಾಗುತ್ತಿದೆ. ಇದಕ್ಕಾಗಿ ಬರಹಗಾರರ ಅವಶ್ಯಕತೆ ಸಹ ಹೆಚ್ಚಿದೆ. ಗಿಡಮೂಲಿಕೆಗಳ ಬಗ್ಗೆ ಸರಿಯಾದ ರೀತಿಯಲ್ಲಿ ಉತ್ತಮವಾಗಿ ತಮ್ಮದೇ ಬ್ಲಾಗ್ ಗಳ ಮೂಲಕ ಬರೆದು ಜನರಿಗೆ ತಿಳಿಸಬಹುದು. ಇದನ್ನು ಓದಿ.. Kitchen Tips: ಮನೆಯ ಸೊಪ್ಪು ಬೇಗನೆ ಹಾಳಾಗಬಾರದು ಎಂದರೆ. ಈ ಚಿಕ್ಕ ಕೆಲಸ ಮಾಡಿ ಸಾಕು. ಹೆಚ್ಚು ಫ್ರೆಶ್ ಆಗಿ ಇರುತ್ತೆ.