Kannada News: ವಯಸ್ಸು ಮೀರಿ 40 ವರ್ಷ ದಾಟಿದ್ದರೂ ಇನ್ನು ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರು ಗೊತ್ತೇ?

Kannada News: ಸಾಮಾನ್ಯವಾಗಿ ಒಂದು ವಯಸ್ಸಿಗೆ ಬಂದ ನಂತರ ಮದುವೆಯಾಗಬೇಕು. ಆದರೆ ಕೆಲವರು ಬೇರೆ ಕಾರಣಗಳಿಂದ ಮದುವೆಯಿಂದ ದೂರ ಉಳಿಯುತ್ತಾರೆ. ಇದೇ ರೀತಿ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೆಲವು ಸ್ಟಾರ್ ಹೀರೋಯಿನ್ ಗಳು ಮದುವೆಯಾಗದೆ ದೂರವಾಗಿದ್ದಾರೆ. 40ರ ನಂತರ ಕೂಡ ಮದುವೆಯಾಗದೆ ಒಂಟಿಯಾಗಿದ್ದಾರೆ. 40 ದಾಟಿದ ಮೇಲು, ಮದುವೆಯಾಗದೆ ಉಳಿದಿರುವ ನಟಿಯರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ತಬು:- ನಿನ್ನೇ ಪೆಲ್ಲಡಟ ಸಿನಿಮಾ ಮೂಲಕ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೂಲಕ ಕ್ರೇಜ್ ಗಳಿಸಿದ ನಟಿ ತಬು ಇನ್ನು ಒಂಟಿಯಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಇವರು ಸ್ಟಾರ್ ನಟಿಯಾಗಿ ಮೆರೆದಿದ್ದಾರೆ. ನಟ ನಾಗಾರ್ಜುನ ಅವರನ್ನು ತಬು ಅವರು ಪ್ರೀತಿಸಿದ್ದರು ಆದರೆ ಮದುವೆ ಆಗಲಿಲ್ಲ. ಹಾಗಾಗಿ ತಬು ಇಲ್ಲಿಯವರೆಗು ಒಂಟಿಯಾಗಿಯೇ ಇದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತದೆ.

ಕೌಸಲ್ಯ: ದಶಕಗಳ ಹಿಂದಿನ ಖ್ಯಾತ ನಟಿ ಕೌಸಲ್ಯ ಅವರು ಕೂಡ ಮದುವೆಯಾಗದೆ ಒಂಟಿಯಾಗಿಯೇ ಉಳಿದಿದ್ದಾರೆ. ನಟ ಶ್ರೀಕಾಂತ್ ಅಭಿನಯದ ಪಂಚದಾರ ಚಿಲಕ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಕೌಸಲ್ಯ ಅವರು ಆ ನಂತರ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಹಲವು ಕನ್ನಡ ಸಿನಿಮಾಗಳಲ್ಲಿ ಸಹ ಇವರು ಹೀರೋಯಿನ್ ಆಗಿ ನಟಿಸಿದ್ದಾರೆ. ಸದ್ಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಕೌಸಲ್ಯ ಕೂಡ ಮದುವೆಯಾಗದೆ ಉಳಿದಿದ್ದಾರೆ.

ಶೋಭನ :- 80 ಮತ್ತು 90ರ ದಶಕದ ಖ್ಯಾತ ನಟಿ ಶೋಭನಾ ಇವ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬ್ಯುಸಿಯಾಗಿದ್ದಾರೆ. ನಟಿ ಶೋಭನ ಅವರು ಮಲಯಾಳಂ ಮತ್ತು ತಮಿಳಿನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದವರು. ನಟಿ ಶೋಭನಾ 2017ರಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಆದರೆ ತಾನು ಸಿಂಗಲ್ ಆಗಿಯೇ ಇರುತ್ತೇನೆ ಎಂದು ಸ್ಪಷ್ಟನೆ ಮಾಡಿದ್ದಾರೆ.

ನಗ್ಮಾ :- ನಟಿ ನಗ್ಮಾ ಹಲವು ಸೆಲೆಬ್ರಿಟಿಗಳ ಜೊತೆ ಲವ್ ರಿಲೇಶನ್ಷಿಪ್ ನಲ್ಲಿದ್ದರು ಎಂದು ವಿಚಾರ ಕೇಳಿಬಂದಿತ್ತು. ಆದರೆ ನಗ್ಮಾ ಕೊನೆಗೂ ಒಂಟಿಯಾಗಿದ್ದರು. ನಟಿ ನಗ್ಮಾ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. 90 ದಶಕದಲ್ಲಿ ನಗ್ಮಾ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ ಎನ್ನಿಸಿಕೊಂಡಿದ್ದರು.

ಅಮಿಷಾ ಪಟೇಲ್ :- ತೆಲುಗು ಮತ್ತು ಬಾಲಿವುಡ್ ನಲ್ಲಿ ಸಾಕಷ್ಟು ಕ್ರೇಜ್ ಗಳಿಸಿ ಸ್ಟಾರ್ ನಟಿಯಾಗಿದ್ದವರು ಅಮಿಷಾ ಪಟೇಲ್. ಅಮಿಶಾ ಪಟೇಲ್ ಅವರು ಕೂಡ ವಯಸ್ಸು 40 ದಾಟಿದ್ದರು ಮದುವೆಯಿಂದ ದೂರವಾಗಿದ್ದಾರೆ. ಬಾಲಿವುಡ್ ನಟಿ ಬೆಡಗಿ ಸುಶ್ಮಿತಾ ಸೇನ್ ಕೂಡ ಮದುವೆಯಾಗದೆ ಹಾಗೆ ಇದ್ದಾರೆ. ಆದರೆ ಸುಶ್ಮಿತಾ ಸೇನ್ ಅವರು ತಮಗಿಂತ 17 ವರ್ಷ ಚಿಕ್ಕವರಾದ ರ ಎಂಬ ಜೊತೆ ರಿಲೇಶನ್ಷಿಪ್ ನಲ್ಲಿದ್ದಾರೆ.

ಸಿತಾರ :- ನಟಿ ಸಿತಾರಾ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಫೇಮಸ್ ಆಗಿರುವ ನಟಿ. 90ರ ದಶಕದ ಖ್ಯಾತ ನಟಿಯಾಗಿದ್ದರು. ಈ ನಟಿ ಕೂಡ ಮದುವೆಯಿಂದ ದೂರ ಉಳಿದಿದ್ದಾರೆ. ತಂದೆ ಮತ್ತು ತಾಯಿಯನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಸಿತಾರ ಅವರು ಇನ್ನು ಮದುವೆಯಾಗದೆ ಉಳಿದಿದ್ದಾರೆ.