Kannada News: ಗಟ್ಟಿಮೇಳ ಸೀರಿಯಲ್ ನಿಂದ ಸುಹಾಸಿನಿ ಔಟ್.. ಸುಹಾಸಿನಿ ಜಾಗಕ್ಕೆ ಫೇಮಸ್ ನಟಿ ಎಂಟ್ರಿ. ಯಾರು ಗೊತ್ತೇ?

Kannada News: ಜೀಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಟಾಪ್ ಧಾರಾವಾಹಿಗಳಲ್ಲಿ ಒಂದು ಗಟ್ಟಿಮೇಳ (Gattimela). ಈ ಧಾರಾವಾಹಿ ಜನಪ್ರಿಯತೆ ಮತ್ತು ಟಿ.ಆರ್.ಪಿ ಎರಡರಲ್ಲೂ ಟಾಪ್ ಸ್ಥಾನದಲ್ಲಿದೆ.ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಮತ್ತು ವೇದಾಂತ್ ಪಾತ್ರ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಬೇರೆ ಪಾತ್ರಗಳಾದ ಆರತಿ, ಅಂಜಲಿ, ಆದ್ಯ ಪಾತ್ರಗಳನ್ನು ಕೂಡ ಕರ್ನಾಟಕದ ಜನತೆ ಬಹಳ ಇಷ್ಟಪಟ್ಟಿದ್ದಾರೆ. ಕ್ಯೂಟ್ ಆದ ಪಾತ್ರಗಳು ಮಾತ್ರವಲ್ಲ, ವಿಲ್ಲನ್ ಪಾತ್ರ ಕೂಡ ವೀಕ್ಷಕರಿಗೆ ಇಷ್ಟವಾಗಿತ್ತು.

ಮನೆಯಲ್ಲಿ ವೇದಾಂತ್ ಗೆ ಆತ್ಮೀಯವಾಗಿದ್ದು, ಅವನ ವಿರುದ್ಧವೇ ಪಿತೂರಿಗಳನ್ನು ಮಾಡುತ್ತಿರುವ ಸುಹಾಸಿನಿ ಪಾತ್ರಕ್ಕೆ ಜನರು ಹಿಡಿ ಶಾಪ ಹಾಕಿದರು ಕೂಡ, ಆ ಪಾತ್ರದಲ್ಲಿ ನಟಿಸುವ ಕಲಾವಿದೆಯ ಅಭಿನಯ ಅಚ್ಚುಕಟ್ಟಾಗಿ ಬರುತ್ತಿದೆ ಎಂದೇ ಎಲ್ಲರೂ ಹೇಳುತ್ತಿದ್ದರು. ಗಟ್ಟಿಮೇಳ ಧಾರಾವಾಹಿಯಲ್ಲಿ ಪಾತ್ರ ಕೆಲವು ಸಾರಿ ಬದಲಾದ ವಿಷಯ ಗೊತ್ತೇ ಇದೆ. ಇದೀಗ ಮತ್ತೊಂದು ಸಾರಿ ಸುಹಾಸಿನಿ ಪಾತ್ರ ಬದಲಾಗುತ್ತಿದ್ದು, ನಟಿ ಅರ್ಚನ (Archana) ಅವರು ಗಟ್ಟಿಮೇಳ ಧಾರವಾಹಿ ಇಂದ ಹೊರ ನಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗಿದ್ದರೆ ಸುಹಾಸಿನಿ ಪಾತ್ರಕ್ಕೆ ಬರುತ್ತಿರುವ ಬೇರೆ ನಟಿ ಯಾರು ಗೊತ್ತಾ? ಇದನ್ನು ಓದಿ.. Lakshana: ಲಕ್ಷಣ ದಲ್ಲಿ ಭಾರ್ಗವಿಗೆ ಅಣ್ಣನ ಮೇಲೆಯೇ ಕೋಪ ಯಾಕೆ ಗೊತ್ತೇ?? ದೊಡ್ಡ ಟ್ವಿಸ್ಟ್. ಯಾಕೆ ಗೊತ್ತೇ??

ಖಡಕ್ ವಿಲ್ಲನ್ ಸುಹಾಸಿನಿ ಪಾತ್ರಕ್ಕೆ ಬರುತ್ತಿರುವ ಹೊಸ ನಟಿ ಮತ್ಯಾರು ಅಲ್ಲ, ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಸಾಗರಿ ಪಾತ್ರದ ಮೂಲಕ ಗಮನ ಸೆಳೆದಿದ್ದ ಸಿಂಧು ಕಲ್ಯಾಣ್ (Sindhu Kalyan) ಅವರು. ಇವರು ಕೂಡ ಹೆಚ್ಚು ವಿಲ್ಲನ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು, ಇದೀಗ ಗಟ್ಟಿಮೇಳ ಧಾರವಾಹಿಗೆ ಎಂಟ್ರಿ ಕೊಡಲಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಅರ್ಚನಾ ಅವರೇ ಈ ಪಾತ್ರದಲ್ಲಿ ಮುಂದುವರೆಯಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಿಂಧು ಅವರು ಈ ಪಾತ್ರದಲ್ಲಿ ಹೇಗೆ ನಟಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಸರಿಗಮಪ ದಿಯಾ ಹೆಗ್ಡೆ ಅಕ್ಕ ಯಾರು ಗೊತ್ತಾ ಅವರು ಕೂಡ ಬಾರಿ ಫೇಮಸ್: ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.