Money Saving Tips: ಹೊಸ ವರ್ಷದಿಂದ ಆದರೂ ದುಡ್ಡು ಉಳಿಸಿ, ಡಬಲ್ ಆಗಬೇಕು ಎಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.

Money Saving Tips: ಹೊಸ ವರ್ಷ ಶುರುವಾಗಲು ಕೆಲವೇ ದಿನ ಉಳಿದಿದೆ. ಈ ಸಮಯದಲ್ಲಿ ನಿಮಗೆ ಕೆಲವು ಉತ್ತಮ ಹೂಡಿಕೆ ಯೋಜನೆಗಳ ಬಗ್ಗೆ ಹೇಳಲಿದ್ದೇವೆ, ಇದರಿಂದ ಒಳ್ಳೆಯ ರಿಟರ್ನ್ಸ್ ಪಡೆಯಬಹುದು. ಉತ್ತಮ ಬಡ್ಡಿ ಪಡೆಯುವ ಹೂಡಿಕೆ ಯೋಜನೆಗಳ ಬಗ್ಗೆ ತಿಳಿಸುತ್ತೇವೆ. ಈಗ ಹೂಡಿಕೆ ಮಾಡುವ ಮೂಲಕ ಮುಂದೆ ನಿಮ್ಮ ಮಕ್ಕಳ ಜೀವನವನ್ನು ಸುರಕ್ಷಿತವಾಗಿಸಬಹುದು. ನಿವೃತ್ತಿ ಪಡೆದ ನಂತರ ಆರ್ಥಿಕವಾಗಿ ಸ್ವತಂತ್ರ್ಯವಾಗಿ ಜೀವನ ನಡೆಸಬೇಕು ಎಂದುಕೊಂಡಿದ್ದರೆ, ಈ ಹೂಡಿಕೆ ಯೋಜನೆಗಳು ನಿಮಗೆ ಆರ್ಥಿಕ ಸ್ವಾತಂತ್ರ್ಯ ನೀಡುತ್ತದೆ. ಅವುಗಳಬ ಬಗ್ಗೆ ಈಗ ತಿಳಿಸುತ್ತೇವೆ..

ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ :- ಈ ಯೋಜನೆಯಲ್ಲಿ ನೀಬು 100 ರೂಪಾಯಿಯಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಶುರು ಮಾಡಬಹುದು. 18 ವರ್ಷ ಮೇಲ್ಪಟ್ಟ ಯಾರಾದರೂ ಸರಿ ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ಹೂಡಿಕೆಯ ಹಣವನ್ನು ಪ್ರತಿ ಮೂರನೇ ತಿಂಗಳಿಗೊಮ್ಮೆ ಖಾತೆಗೆ ಸೇರಿಸಲಾಗುತ್ತದೆ. ಚಕ್ರಬಡ್ಡಿಯ ಲಾಭವು ಈ ಯೋಜನೆಯಲ್ಲಿ ಲಭ್ಯವಿದೆ.
ಮ್ಯೂಚುಯಲ್ ಫಂಡ್ :- ದೀರ್ಘದ ಸಮಯವನ್ನು ಗಮನದಲ್ಲಿ ಇಟ್ಟುಕೊಂಡು ಭವಿಷ್ಯವನ್ನು ಸುರಕ್ಷಿತವಾಗಿರಬೇಕು ಎಂದು ಬಯಸಿದರೆ. ಮ್ಯೂಚುವಲ್ ಫಂಡ್‌ ಗಳಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮಗೆ ಅತ್ಯುತ್ತಮ ಆದಾಯ ಸಿಗುತ್ತದೆ. ದೀರ್ಘಾವಧಿ ಹೂಡಿಕೆಗೆ ಮ್ಯೂಚುವಲ್ ಫಂಡ್‌ ಗಳು ಉತ್ತಮ ಆಯ್ಕೆ ಆಗಿದೆ. ಹಾಗಿದ್ದರೂ ಕೂಡ, ಮ್ಯೂಚುವಲ್ ಫಂಡ್ ಗಳಿಗೆ ಶೇರ್ ಮಾರ್ಕೆಟ್ ನಲ್ಲಿ ಸ್ವಲ್ಪ ಅಪಾಯ ಇದೆ. ಇದರಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು ತಜ್ಞರ ಸಲಹೆ ಪಡೆಯಿರಿ. ಇದನ್ನು ಓದಿ..Technology: ಚಿಲ್ಲರೆ ಜುಜುಬಿ ಹಣಕ್ಕೆ ಬಿಡುಗಡೆಯಾದ ವಾಷಿಂಗ್ ಮಷೀನ್: ಕಡಿಮೆ ಬೆಲೆಗೆ ಇದು ಏನೆಲ್ಲಾ ಮಾಡುತ್ತದೆ ಗೊತ್ತೇ?

ಕಿಸಾನ್ ವಿಕಾಸ್ ಯೋಜನೆ :- ಕೆಲವು ವರ್ಷಗಳು ಹೂಡಿಕೆ ಮಾಡುವ ಮೂಲಕ ಹಣವ ದುಪ್ಪಟ್ಟಾಗಬೇಕು ಎಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಶುರು ಮಾಡಬಹುದು. ಈಗ ನೀವು ನೀವು ಕಿಸಾನ್ ವಿಕಾಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 6.9% ಬಡ್ಡಿ ಪಡೆಯುತ್ತೀರಿ. ಈಗ ನೀವು ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣ 123 ತಿಂಗಳುಗಳಲ್ಲಿ ದುಪ್ಪಟ್ಟಾಗುತ್ತದೆ.
LIC ಜೀವನ್ ಆನಂದ್ ಪಾಲಿಸಿ :- ಎಲ್‌.ಐ.ಸಿ ಜೀವನ್ ಆನಂದ್ ಪಾಲಿಸಿಯಲ್ಲಿ ಹೂಡಿಕೆ ಮಾಡುವುದರಿಂದ ಬೋನಸ್‌ ಲಾಭ ಪಡೆಯುತ್ತೀರಿ. ಒಂದು ವೇಳೆ ಪಾಲಿಸಿದಾರರು ನಿಧನರಾದರೆ, 125% ಮರಣದ ಲಾಭ ನೀಡಲಾಗುತ್ತದೆ. LIC ಯ ಈ ಯೋಜನೆಯು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಆಯ್ಕೆ ಆಗಿದೆ. LIC ಜೀವನ್ ಆನಂದ್ ಪಾಲಿಸಿಯ ಕನಿಷ್ಠ ವಿಮಾ ಮೊತ್ತ 1 ಲಕ್ಷ ರೂಪಾಯಿ ಆಗಿದೆ. ಇದಕ್ಕೆ ಯಾವುದೇ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.