Kannada News: ಪ್ರೇಮಿಗಳ ಮಧ್ಯೆ ಬಂದ ವಿಲ್ಲನ್: ಪವಿತ್ರ – ನರೇಶ್ ನಡುವೆ ಅಡ್ಡಬಂದದ್ದು ಯಾರು ಗೊತ್ತೇ?? ಪ್ರೀತಿಸಿದವರು ಮದುವೆಯಾಗದೆ ಉಳಿದುಕೊಳ್ತಾರಾ??

Kannada News: ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ನಟ ನರೇಶ್ (Naresh) ಅವರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 2023ರ ಹೊಸ ವರ್ಷದ ಸಮಯಕ್ಕೆ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿರುವ ನರೇಶ್ ಅವರು, ಹಿಸ ವರ್ಷದ ಆಚರಣೆಯಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸುವುದರ ಜೊತೆಗೆ ಪವಿತ್ರಾ ಲೋಕೇಶ್ ಅವರೊಡನೆ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿ, ಹೊಸ ವರ್ಷದ ಹೊಸ ಆರಂಭ ಎಂದು ಬರೆದುಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು..

ಇವರಿಬ್ಬರ ಮದುವೆ ಮತ್ತು ಲಿವಿನ್ ರಿಲೇಶನ್ಷಿಪ್ ಬಗ್ಗೆ ಸುದ್ದಿಗಳು ಕೆಲವು ತಿಂಗಳುಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಆಗ ಮದುವೆ ಬಗ್ಗೆ ಈ ಜೋಡಿ ಏನು ಹೇಳಿರಲಿಲ್ಲ. ನರೇಶ್ ಅವರ ಮೂರನೇ ಪತ್ನಿ ಈ ವಿಚಾರಕ್ಕೆ ಎಂಟ್ರಿ ಕೊಟ್ಟ ಮೇಲೆ ಮಾಧ್ಯಮದಲ್ಲಿ ದೊಡ್ಡ ಡ್ರಾಮಾ ನಡೆದಿತ್ತು. ರಮ್ಯಾ ರಘುಪತಿ (Ramya Raghupati) ಅವರು ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಇದೀಗ ಇವರಿಬ್ಬರ ಮದುವೆ ಸುದ್ದಿ ಹೊರಬರುತ್ತಿದ್ದ ಹಾಗೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ..ಏನೇ ಆದರೂ ತಾವು ನರೇಶ್ ಅವರಿಗೆ ವಿಚ್ಛೇದನ ಕೊಡುವುದಿಲ್ಲ ಎಂದಿದ್ದಾರೆ. ಇದನ್ನು ಓದಿ..Kannada News: ಜೋಡಿಗಳ ಪ್ರೀತಿಗೆ ಶಾಕ್ ಕೊಟ್ಟ ಮೂರನೇ ಪತ್ನಿ: ನರೇಶ್-ಪವಿತ್ರ ಮದುವೆಗೆ ಟ್ವಿಸ್ಟ್ ಕೊಟ್ಟ ನರೇಶ್ ಮಾಜಿ ಪತ್ನಿ: ಫ್ಯಾನ್ಸ್ ಶಾಕ್. ಏನಾಗಿದೆ ಗೊತ್ತೆ?

ನರೇಶ್ ಪವಿತ್ರಾ ಮದುವೆ ಆಗಲಿರೋದು ನಿಜ, ಆದರೆ ನನಗೆ ಇನ್ನೂ ವಿಚ್ಛೇದನ ಕೊಟ್ಟಿಲ್ಲ.. ನಾನು ಕೊಡೋದು ಇಲ್ಲ. ನನ್ನ ಮಗನಿಗೆ ನಾನು ಪ್ರಾಮಿಸ್ ಮಾಡಿದ್ದೀನಿ, ಅದನ್ನ ಉಳಿಸಿಕೊಳ್ತೀನಿ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ ರಮ್ಯಾ ರಘುಪತಿ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಪ್ರೀತಿ ಮಾಡುತ್ತಿದ್ದಾರೆ, ಮದುವೆ ಬಗ್ಗೆಯೂ ನಿರ್ಧಾರ ಮಾಡಿದ್ದಾರೆ, ಆದರೆ ಈಗ ರಮ್ಯಾ ರಘುಪತಿ ಅವರು ನೀಡಿರುವ ಈ ಹೇಳಿಕೆ ಇಂದ ಲವ್ವರ್ಸ್ ಗಳ ನಡುವೆ ನರೇಶ್ ಅವರ ಮೂರನೇ ಹೆಂಡತಿ ವಿಲ್ಲನ್ ಆಗ್ತಾ ಎನ್ನುವ ಟಾಕ್ ಕೇಳಿಬರುತ್ತಿದೆ. ಪವಿತ್ರಾ ಹಾಗೂ ನರೇಶ್ ಅವರು ಮದುವೆ ಆಗದೆಯೇ ಉಳಿದು ಬಿಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಫುಲ್ ಬಿಲ್ಡ್ ಅಪ್ ಕೊಟ್ಟು ಪ್ರೀತಿ ಮಾಡಿ ಮದುವೆಯಾಗಿದ್ದ ಕೆಲವೇ ವರ್ಷಕ್ಕೆ ದೀಪಿಕಾ-ರಣವೀರ್ ನಡುವೆ ಏನಾಗಿದೆ ಗೊತ್ತೇ?