Kannada News: ಯುವ ನಟಿಯೇ ಬೇಕೇ ಬೇಕು ಎಂದು ಹಿಂದೆ ಬಿದ್ದ ನಿರ್ಮಾಪಕ: ಹೊಸ ನಟಿಯಾದರು ಕೋಟಿ ಖರ್ಚು ಮಾಡಲು ಸಿದ್ದವಾಗಿದ್ದು ಯಾವ ಬೆಡಗಿಗೆ ಗೊತ್ತೆ?

Kannada News: ಟಾಲಿವುಡ್ ನಲ್ಲಿ ಬಹಳ ಹೆಸರು ಮಾಡಿರುವ ಪ್ರೊಡ್ಯುಸರ್ ದಿಲ್ ರಾಜು. ಇವರು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿದ್ದಾರೆ. ದಿಲ್ ರಾಜು ಅವರು ಒಂದು ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದರೆ ಆ ಸಿನಿಮಾ ಖಂಡಿತವಾಗಿ ಹಿಟ್ ಆಗುತ್ತದೆ ಎಂದು ಅರ್ಥ. ಏಕೆಂದರೆ ಇವರು ಆಯ್ಕೆ ಮಾಡುವ ಪ್ರಾಜೆಕ್ಟ್ ಗಳು ಅಷ್ಟು ಚೆನ್ನಾಗಿರುತ್ತದೆ. ಎಂಥಹ ಸಿನಿಮಾ ಜನರಿಗೆ ಇಷ್ಟ ಆಗುತ್ತದೆ ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಯಾವುದಾದರೂ ಡಬ್ಬಿಂಗ್ ಸಿನಿಮಾವನ್ನು ದಿಲ್ ರಾಜು ಅವರು ಡಿಸ್ಟ್ರಿಬ್ಯುಟ್ ಮಾಡುತ್ತಾರೆ ಎಂದರೆ, ಅದು ಕೂಡ ಹಿಟ್ ಆಗಿಯೇ ಆಗುತ್ತದೆ.

ಹಾಗೆಯೇ ಟಾಲಿವುಡ್ ನಲ್ಲಿ ಎಂಥದ್ದೇ ಕಾಂಬೋ ನೋಡಬೇಕು ಎಂದು ಜನರು ಅಂದುಕೊಂಡರು ಸಹ, ಅದನ್ನು ನಿಜ ಆಗುವ ಹಾಗೆ ಮಾಡಲು ಸಾಧ್ಯ ಇರುವುದು ಕೇವಲ ದಿಲ್ ರಾಜು ಅವರಿಂದ ಎಂದು ಹೇಳಲಾಗುತ್ತದೆ. ಟ್ಯಾಲೆಂಟ್ ಇರುವ ಡೈರೆಕ್ಟರ್ ಗಳು, ನಟ ನಟಿಯರು ಇದ್ದರೆ ಅವರನ್ನು ಕೂಡಲೇ ಕಾಂಟ್ಯಾಕ್ಟ್ ಮಾಡಿ, ಡೇಟ್ಸ್ ಲಾಕ್ ಮಾಡಿಕೊಳ್ಳುತ್ತಾರೆ. ಅವರೊಡನೆ ಸೂಪರ್ ಹಿಟ್ ಸಿನಿಮಾ ಮಾಡುತ್ತಾರೆ. ಸಿನಿಮಾಗಳ ವಿಚಾರದಲ್ಲಿ ಇವರ ನಿರ್ಧಾರಗಳು ಫ್ಲಾಪ್ ಆಗಿರುವುದು ಬಹಳ ಕಡಿಮೆ ಹೀಗೆ ಟಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಇದನ್ನು ಓದಿ..Kannada News: ಸಂಚಲ ಸೃಷ್ಟಿಸಿದ ರಾಕುಲ್ ಪ್ರೀತ್ ಸಿಂಗ್: ಗಂಡಸರ ಬಗ್ಗೆ ನಾಲಿಗೆ ಜಾರಿ ಹೇಳಿದ್ದೇನು ಗೊತ್ತೇ?? ಇದು ಅತಿಯಾಗಲಿಲ್ಲವೇ??

ಟ್ಯಾಲೆಂಟ್ ಇರುವ ಕಲಾವಿದರ ಜೊತೆಗೆ ಸಿನಿಮಾ ಮಾಡುವ ದಿಲ್ ರಾಜು ಅವರು ಈಗ ಹೊಸ ನಟಿಯ ಹಿಂದೆ ಬಿದ್ದು, ಅವರೊಡನೆ ದೊಡ್ಡದಾಗಿಯೇ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಆಕೆ ಮತ್ಯಾರು ಅಲ್ಲ, ಲವ್ ಟುಡೇ ಸಿನಿಮಾ ಮೂಲಕ ಸೆನ್ಸೇಷನ್ ಆಗಿರುವ ನಟಿ ಇವಾನ, ಆಕೆಯ ಮೊದಲ ಸಿನಿಮಾ ಇದು, ಇವಾನ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇರುವುದರಿಂದ, ದಿಲ್ ರಾಜು ಅವರು ಅವರೊಡನೆ ಐದು ಸಿನಿಮಾಗೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರಂತೆ. ಸುಮಾರು 10 ಕೋಟಿ ರೂಪಾಯಿ ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡಿದ್ದು, ಯಾವಾಗ ಕೇಳಿದರು ಡೇಟ್ಸ್ ಕೊಡಬೇಕು ಎಂದು ಕಂಡೀಷನ್ ಹಾಕಿದ್ದಾರಂತೆ. ಇದೀಗ ಈ ವಿಷಯ ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಓದಿ..Kannada News: ತುಪ್ಪ ಬೇಕಾ ತುಪ್ಪ ಎಂದು ಹಾಡಿ ಕುಣಿದು, ದೇಶವನ್ನೇ ಗೆದ್ದಿರುವ ರಾಗಿಣಿ ಮದುವೆ ಯಾವಾಗ ಗೊತ್ತೇ? ಅಸಲಿಗೆ ಮದುವೆ ಆಗ್ತಾರಾ??