Kannada News: ಹೆಂಡತಿ ಹೆಸರಿನಲ್ಲಿ ಮನೆ ರಿಜಿಸ್ಟ್ರೇಷನ್ ಮಾಡುವುದರಿಂದ ಏನಾಗುತ್ತದೆ ಗೊತ್ತೇ? ಆಸ್ತಿಯೆಲ್ಲ ಹೆಂಡತಿ ಇಟ್ಟರೆ ಏನೆಲ್ಲಾ ಆಗಬಹುದು ಗೊತ್ತೇ?

Kannada News: ಜನರು ಸಾಮಾನ್ಯವಾಗಿ ತಾವು ಸಂಪಾದನೆ ಮಾಡುವ ಹಣವನ್ನು ಸ್ಥಿರ ಆಸ್ತಿ ಖರೀದಿ ಮಾಡಲು ಉಪಯೋಗಿಸುತ್ತಾರೆ. ಮನೆ ಅಥವಾ ಬೇರೆ ರೀತಿಯ ಆಸ್ತಿಯನ್ನು ಖರೀದಿ ಮಾಡುತ್ತಾರೆ. ಕೆಲವು ಜನರು ತಾವು ಖರೀದಿ ಮಾಡಿದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ಆಸ್ತಿಯನ್ನು ತಮ್ಮ ಪತ್ನಿಯರ ಹೆಸರಿಗೆ ಮಾಡಿಸುತ್ತಾರೆ. ಈ ರೀತಿ ಆಸ್ತಿಯನ್ನು ಹೆಂಡತಿ ಹೆಸರಿಗೆ ಮಾಡುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಪಾಲು ನಿರ್ಧಾರ ಮಾಡಿ :- ಮನೆ ಕೊಂಡುಕೊಳ್ಳುವ ಮೊದಲು ಯಾರ ಪಾಲು ಎಷ್ಟು ಎನ್ನುವುದು ನಿರ್ಧಾರವಾಗಬೇಕು. ಇದರಿಂದಾಗಿ ಮನೆಯ ಮಾಲೀಕರು ಇಬ್ಬರು ಆಗಿರುತ್ತಾರೆ. ಹೀಗೆ ಜಾಯಿಂಟ್ ಆಗಿ ಖರೀದಿ ಮಾಡುವಾಗ, ಯಾರ ಶೇರ್ ಎಷ್ಟು ಎಂದು ನಿಗದಿ ಮಾಡದೆ ಹೋದರೆ, ಇದನ್ನು (50:50) ಎಂದು ನಿರ್ಧಾರ ಮಾಡಲಾಗುತ್ತದೆ. ಈ ಖರೀದಿಯು ತೆರಿಗೆ ಪ್ರಯೋಜನಗಳನ್ನು ಸಹ ಹೊಂದಿದೆ.
ತೆರಿಗೆ ವಿನಾಯಿತಿ :- 1961ರ ಕಾಯ್ದೆ ಅಡಿಯ ಪ್ರಕಾರ, ಸ್ಥಿರ ಆಸ್ತಿ ಖರೀದಿ ಮಾಡುವವರಿಗೆ ತೆರಿಗೆ ವಿನಾಯಿತಿ ಇದೆ. 80ಸಿ ಸೆಕ್ಷನ್ ನ ಪ್ರಕಾರ ಜಂಟಿ ಮಾಲೀಕರಿಗೆ 1.50 ಲಕ್ಷ ರೂಪಾಯಿವರೆಗು ತೆರಿಗೆ ವಿನಾಯಿತಿ ಸಿಗುತ್ತದೆ. ಇದಷ್ಟೇ ಅಲ್ಲದೆ, ಸೆಕ್ಷನ್ 24ಅನ್ನು ನೋಡುವುದಾದರೆ, ವಸತಿ ಆಸ್ತಿ ಆದಾಯದಿಂದ ಮನೆಯ ಸಾಲದ ಬಡ್ಡಿ ಮೇಲೆ 2ಲಕ್ಷ ರೂಪಾಯಿವರೆಗು ಅರ್ಜಿ ಸಲ್ಲಿಸಬಹುದು. ಇದನ್ನು ಓದಿ..Film News: ಹಿರಿಯ ನಟ ವಿಶ್ವನಾಥ್ ಕೊನೆಯುಸಿರೆಳೆದ ಕೆಲವೇ ದಿನಗಳಲ್ಲಿ ಕುಟುಂಬಕ್ಕೆ ಮತ್ತೊಂದು ಶಾಕ್. ಕಣ್ಣೀರಿನಲ್ಲಿ ಚಿತ್ರರಂಗ

ಬಡ್ಡಿ ದರ :- ಕೆಲವು ಬ್ಯಾಂಕ್ ಗಳಲ್ಲಿ ಲೋನ್ ಪಡೆಯುವಾಗ, ಆಸ್ತಿ ಹೆಣ್ಣಿನ ಹೆಸರಿನಲ್ಲಿದ್ದರೆ ಬಡ್ಡಿ ಕಡಿಮೆ ಬೀಳುತ್ತದೆ, ಇದರಿಂದ EMI ಕಡಿಮೆ ಆಗುತ್ತದೆ. ಕೂಲಿ ಕಾರ್ಮಿಕರು ಇದು ಒಳ್ಳೆಯ ವಿಚಾರ, ಹೆಂಡತಿಯ ಹೆಸರಿನಲ್ಲಿ ಆಸ್ತಿ ಖರೀದಿ ಮಾಡುವುದರಿಂದ ಈ ಪ್ರಯೋಜನ ಕೂಡ ಇದೆ.
ಸಾಲದ ಅರ್ಹತೆ ಹೆಚ್ಚಾಗುತ್ತದೆ :- ಒಬ್ಬರ ಸಂಬಳದ ಮೇಲೆ ಸಾಲ ತೆಗೆದುಕೊಂಡರೆ ಸಿಗುವ ಮೊತ್ತಕ್ಕಿಂತ, ಇಬ್ಬರ ಸಂಬಳವನ್ನು ಪರಿಗಣಿಸಿ ಸಾಲ ತೆಗೆದುಕೊಳ್ಳುವುದಾದರೆ ಅದರಿಂದ ಇನ್ನು ಹೆಚ್ಚಿನ ಮೊತ್ತವನ್ನು ಸಾಲವಾಗಿ ಪಡೆಯಬಹುದು. ಇಬ್ಬರು ಕೆಲಸ ಮಾಡುತ್ತಿದ್ದು, ಮನೆಯು ಜಂಟಿಯಾಗಿ ತೆಗೆದುಕೊಂಡಿದ್ದರೆ, ಸಾಲ ಹೆಚ್ಚಾಗಿ ಪಡೆಯಬಹುದು.

ಮುದ್ರಾಂಕ ಶುಲ್ಕ :- ನೀವು ಸ್ಥಿರಾಸ್ತಿಗಳನ್ನು ಖರೀದಿ ಮಾಡಿದರೆ, ಸರ್ಕಾರಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ. ಈ ಶುಲ್ಕದಲ್ಲಿ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ವಿನಾಯಿತಿ ಸಿಗುತ್ತದೆ. ಒಂದು ವೇಳೆ ಮಹಿಳೆ ಸ್ವಂತವಾಗಿ ಖರೀದಿ ಮಾಡಿದರೆ ಅಥವಾ ಜಂಟಿಯಾಗಿ ಖರೀದಿ ಮಾಡಿದ್ದರೆ, ಮಹಿಳೆಯರಿಗೆ ಇದರಲ್ಲಿ ಮುದ್ರಾಂಕ ಶುಲ್ಕ ಕಡಿಮೆ ಆಗುತ್ತದೆ. ಹೀಗಾಗಿ ಪತ್ನಿಯರ ಹೆಸರಲ್ಲಿ ಆಸ್ತಿ ಖರೀದಿ ಮಾಡುವುದು, ಅಥವಾ ಅವರನ್ನು ಸಹಮಾಲೀಕರನ್ನಾಗಿ ತೆಗೆದುಕೊಂಡಾಗ ಸ್ಟ್ಯಾಂಪ್ ಡ್ಯೂಟಿಗೆ ಕಟ್ಟಬೇಕಾದ ಹಣ ಕಡಿಮೆ ಆಗುತ್ತದೆ.
ಆದರೆ ಪತ್ನಿಯನ್ನು ಸಹಮಾಲೀಕನಾಗಿ ತೆಗೆದುಕೊಳ್ಳುವಾಗ, ನಿಮಗೆ ಬೇರೆಯದೇ ರೀತಿಯಲ್ಲಿ ತೊಂದರೆಗಳು ಆಗಬಹುದು, ದಂಪತಿಗಳ ನಡುವೆ ಬಿರುಕು ಇದ್ದರೆ, ಅದು ತೊಂದರೆಗೆ ಕಾರಣವಾಗುತ್ತದೆ. ಒಂದು ವೇಳೆ ಮಹಿಳೆ ಕೆಲಸ ಮಾಡದೆ, ಆದಾಯ ಸಿಗದೆ ಇರುವವರಾದರೆ, ಅವರ ಹೆಸರಿನಲ್ಲಿ ಇರುವ ಆದಾಯ ಗಂಡ ಆದಾಯದ ಅಡಿಯಲ್ಲಿ ಹೋಗುತ್ತದೆ. ಇದರಿಂದ ಪಾವತಿ ಮಾಡಬೇಕಾದ ತೆರಿಗೆಯಲ್ಲಿ ವಿನಾಯಿತಿ ಬರುವುದಿಲ್ಲ. ಇದನ್ನು ಓದಿ..Chanakya Neeti: ಈ ಮೂರು ಗುಣ ಇರುವ ಹುಡುಗಿ ಸಿಕ್ಕರೆ ಎಲ್ಲೇ ಇದ್ದರೂ ತಾಳಿ ಕಟ್ಟಿಬಿಡಿ, ಅಥವಾ ಹೆಂಡತಿಗೆ ಈ ಗುಣ ಕಳಿಸಿ. ಜೀವನದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ.