Kannada News: ಪುಷ್ಪ 2 ಗೆ ಅಲ್ಲೂ ಅರ್ಜುನ್ ಕೇಳಿದ ಸಂಭಾವನೆ ಕೇಳಿದರೆ, ಸಿನಿಮಾ ಲೋಕನೆ ಶೇಕ್ ಆಗುತ್ತದೆ, ಎಷ್ಟು ಕೋಟಿ ಬೇಕಂತೆ ಗೊತ್ತೇ??

Kannada News: ಟಾಲಿವುಡ್ ನ ಬನ್ನಿ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಅಲ್ಲು ಅರ್ಜುನ್. ಈ ನಟ ಇಂದು ನಮ್ಮ ಟಾಲಿವುಡ್ ಅಲ್ಲದೆ ಎಲ್ಲಾ ಭಾಷೆಯಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನೂ ಈ ನಟನ ಕುಟುಂಬ ಬಣ್ಣದ ರಂಗಕ್ಕೆ ಸಂಬಂಧಿಸಿದವರು ಆಗಿದ್ದರು ಕೊಡ ಈತ ತನ್ನದೇ ಆದ ಪರಿಶ್ರಮದಿಂದ ಇಂದು ಉನ್ನತ ಸ್ಥಾನಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ತಪ್ಪಾಗಲಾರದು. ಈ ನಟ ಬಣ್ಣದ ಲೋಕಕ್ಕೆ ಕಾಲಿಟ್ಟು ದಶಕಗಳು ಉರುಳಿದ್ದರೂ ಕೂಡ ಈತನ ಮೇಲೆ ಇರುವ ಕ್ರೇಜ್ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ.ಅದರಲ್ಲೂ ಇವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆದ ಪುಷ್ಪ ದಿ ರೈಸ್ ಬಂದ ಆ ನಂತರದ ಇವರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಇವರ ಪುಷ್ಪ ಭಾಗ ಒಂದು ಕಳೆದ ವರ್ಷ ಬಿಡುಗಡೆ ಪಡೆದು ಎಲ್ಲಾ ಭಾಷೆಯಲ್ಲು ಕೂಡ ದೊಡ್ಡ ಮಟ್ಟದ ಸುದ್ದಿಯಾಗಿತ್ತು.ಇದೀಗ ಪುಷ್ಪ 2 ಚಿತ್ರದ ನಿರೀಕ್ಷೆಯಲ್ಲಿ ಇದ್ದವೆ.

ಇತ್ತೀಚೆಗಷ್ಟೇ ಪುಷ್ಪ 2 ಸಿನಿಮಾ ಮುಹೂರ್ತ ನೆರವೇರಿದೆ.ಇನ್ನೂ ಎಲ್ಲವು ಅಂದುಕೊಂಡಂತೆ ಈ ಚಿತ್ರದ ಕೆಲಸಗಳು ನೆರವೇರಿದೆ ಈ ವರ್ಷದ ಅಂತ್ಯದಲ್ಲಿ ಈ ಚಿತ್ರ ಸೆಟ್ಟೇರಲಿದೆ.ಇದೀಗ ಇದರ ಬೆನ್ನಲ್ಲೇ ಅಲ್ಲು ಅರ್ಜನ್ ಅವರ ಮುಂದಿನ ಚಿತ್ರದ ಬಗ್ಗೆ ಕೂಡ ಸುದ್ದಿಯಾಗಿದೆ.ಹೌದು ಅಲ್ಲು ಅರ್ಜುನ್ ಅವರು ಪುಷ್ಪ 2 ಮುಗಿದ ನಂತರ ಈಗಾಗಲೇ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಒಳ್ಳೆಯ ಹೆಸರು ಮಾಡಿರುವ ನಿರ್ದೇಶಕನ ಬಳಿ ಕೆಲ್ಸ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಯಾವ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನೂ ಈ ವರ್ಷದ ಅಂತ್ಯದವರೆಗೂ ಪುಷ್ಪ 2ನಲ್ಲಿ ಬ್ಯುಸಿ ಇರುವ ಅಲ್ಲು ಅರ್ಜುನ್ ತಮ್ಮ ಮುಂದಿನ ಚಿತ್ರಕ್ಕಾಗಿ ನಾವು 2024ರ ಅಂತ್ಯದ ವರೆಗೂ ಕಾಯಬೇಕಿದೆ.ಇನ್ನೂ ಈ ವಿಚಾರಗಳ ಬೇನ್ನಲ್ಲೆ ಅಲ್ಲು ಅರ್ಜುನ್ ತಮ್ಮ ಸಂಭಾವನೆಯ ವಿಚಾರದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದಾರೆ. ಇದನ್ನು ಓದಿ..Film News: ಕೊನೆಗೂ ಸಿಕ್ತು ವಿಡಿಯೋ: ನಟಿ ಹನಿ ರೋಜ್ ನಡೆದು ಬರುತ್ತಿದ್ದರೇ ಬಾಲಯ್ಯ ಪ್ರತಿಕ್ರಿಯೆ ಹೇಗಿದೆ ಗೊತ್ತೇ? ನಟಿಗೆ ಮನಸೋತರೇ? ಏನಾಗಿದೆ ಗೊತ್ತೇ??

ಮೊದಲೆಲ್ಲಾ ಅಲ್ಲು ಅರ್ಜುನ್ ತಮ್ಮ ಸಿನಿಮಾಗಳಿಗೆ 15 ರಿಂದ 20ಕೋಟಿಗಳ ವರೆಗೂ ಸಂಭವನೆಯಾಗಿ ಪಡೆದುಕೊಳ್ಳುತ್ತಿದ್ದರು.ಇನ್ನೂ ಅವರ ಸಿನಿಮಾಗಳು ಕೂಡ 80ಕೋಟಿಯ ವೆಚ್ಚದಲ್ಲಿ ತಯಾರಾಗುತ್ತಿತ್ತು. ಆದರೆ ಪುಷ್ಪ 1 ಸಿನಿಮಾ ಅಲ್ಲು ಅರ್ಜುನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು. ತನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಈ ನಟ ಭರ್ಜರಿ ಜಯ ಪಡೆದುಕೊಂಡರು ಎಂದ್ರೆ ತಪ್ಪಾಗಲಾರದು. ಪುಷ್ಪ 1 ಗಾಗಿ ಬರೋಬ್ಬರಿ 40ಕೋಟಿ ಸಂಭಾವನೆ ಪಡೆದುಕೊಂಡರು. ಇದೀಗ ಪುಷ್ಪ 2ಗೆ ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೌದು ಪುಷ್ಪ 1 ಗಾಗಿ ಅಲ್ಲು ಅರ್ಜುನ್ 40ಕೋಟಿ ಪಡೆದುಕೊಂಡಿದ್ದರು ಆದರೆ ಪುಷ್ಪ 2 ಗೆಂದು ಬರೋಬ್ಬರಿ 150ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಬಾರಿ ಮೋತ್ತದ ಸಂಭಾವನೆ ಪಡೆದು ಟಾಲಿವುಡ್ ನ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರನ್ನೇ ಹಿಂದಕ್ಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೂಡ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಇದನ್ನು ಓದಿ..Kannada News: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸುಮಲತಾ: ಅಂಬಿ ಅಭಿಮಾನಿಗಳಿಗೆ ಬಾರಿ ನಿರಾಸೆ. ಏನಾಗಿದೆ ಗೊತ್ತೇ?