Kannada News: ನಾಳೆ ಮದುವೆ ಎನ್ನುವ ಹಾಗೆ ಹುಡುಗಿಯ ಮನಸಿನಲ್ಲಿ ಬರುವ ಆಲೋಚನೆಗಳು ಏನು ಗೊತ್ತೇ? ಪ್ರತಿ ಪುರುಷನಿಗೂ ಇವೆಲ್ಲ ಗೊತ್ತಿರಲೇಬೇಕು. ಏನೇನು ಗೊತ್ತೇ?

Kannada News: ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ಮತ್ತು ವಿಶೇಷವಾದ ಘಟ್ಟ. ಮದುವೆಯಲ್ಲಿ ಕೆಲವರು ಲವ್ ಮ್ಯಾರೇಜ್ ಮಾಡಿಕೊಂಡರೆ, ಕೆಲವರು ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ. ಒಂದು ಮದುವೆ ನಡೆದರೆ ಅದರಿಂದ ಹುಡುಗನ ಜೀವನಕ್ಕಿಂತ ಹೆಚ್ಚಾಗಿ ಹುಡುಗಿಯ ಜೀವನದಲ್ಲಿ ಹೆಚ್ಚು ಬದಲಾವಣೆ ಆಗುತ್ತದೆ. ಆಕೆ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಗಂಡನ ಮನೆಗೆ ಬರಬೇಕು, ಹೊಸ ಜನರ ಜೊತೆಗೆ ಹೊಂದಿಕೊಳ್ಳಬೇಕು. ಹೀಗೆ ಹೆಣ್ಣಿನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುವಾಗ, ನಾಳೆ ಮದುವೆ ಎನ್ನುವ ಹಾಗೆ ಆಕೆಯ ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಏನೇನು ಗೊತ್ತಾ? ತಿಳಿಸುತ್ತೇವೆ ನೋಡಿ..

ಮದುವೆ ಹಿಂದಿನ ದಿನ ಹುಡುಗಿಗೆ ಗೊಂದಲ ಕಳವಳ ಹೆಚ್ಚಾಗಿರುತ್ತದೆ. ಈ ಮದುವೆ ಸರಿಯಾದ ಸಮಯಕ್ಕೆ ಸರಿಯಾಗಿ ನಡೆಯುತ್ತಿದೆಯೇ ಅಥವಾ ದುಡುಕಿ ಆತುರದ ನಿರ್ಧಾರ ತೆಗೆದುಕೊಂಡು ಬಿಟ್ಟೆನಾ, ಮದುವೆಗೆ ಅರ್ಜೆಂಟ್ ಆಗಿ ನಡೆಯುತ್ತಿದೆಯಾ ಎಂದು ಗೊಂದಲಕ್ಕೆ ಒಳಗಾಗಿರುತ್ತಾರೆ. ಹಾಗೆಯೇ ಹುಡುಗಿಯರ ಮನಸ್ಸಿನಲ್ಲಿ ಸಾಕಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಆ ಆಸೆಗಳನ್ನೆಲ್ಲಾ ತನ್ನನ್ನು ಮದುವೆ ಆಗುವ ಹುಡುಗ ನೆರವೇರಿಸುತ್ತಾನಾ ಎನ್ನುವ ಗೊಂದಲ ಕೂಡ ಹುಡುಗಿಯ ಇರುತ್ತದೆ.. ಇದನ್ನು ಓದಿ..Kannada News: ನಟಿ ಬಟ್ಟೆ ಬಿಚ್ಚಿ ನಟನೆ ಮಾಡಿದ ಸಿನಿಮಾ ನೋಡಿ ಆಕೆಯ ಮಗ ಏನು ಮಾಡಿದ್ದನಂತೆ ಗೊತ್ತೇ? ನಟಿ ಡಿಂಗ್ ಡಾಂಗ್ ಸೀನ್ ನಲ್ಲಿ ನಟನೆ ಮಾಡಿದ ಬಳಿಕ ಏನಾಗಿದೆ ಗೊತ್ತೇ?

ಇದೇ ಕಾರಣಕ್ಕೆ ಹುಡುಗಿಗೆ ಇನ್ನು ಸ್ವಲ್ಪ ದಿನ ಕಾದು ಬಳಿಕ ಮದುವೆ ಅಗಬಹುದಿತ್ತಾ ಅಥವಾ ಈ ಹುಡುಗ ಒಳ್ಳೆಯವನಾ ಎನ್ನುವ ಗೊಂದಲ ಇರುತ್ತದೆ. ಅಷ್ಟೇ ಅಲ್ಲದೆ, ತಂದೆ ತಾಯಿ ಮನೆಯಲ್ಲಿ ಎಲ್ಲರ ಮುದ್ದಿನಲ್ಲಿ ಬೆಳೆದು ಗಂಡನ ಮನೆಯಲ್ಲಿ ಎಲ್ಲರೂ ಹೇಗಿರುತ್ತಾರೆ ಎನ್ನುವ ಆತಂಕ ಕೂಡ ಇರುತ್ತದೆ. ಬಾಲ್ಯದಿಂದಲೂ ಅತ್ತೆ ಮನೆ ಎಂದರೆ, ಹೀಗಿರುತ್ತದೆ ಹಾಗಿರುತ್ತದೆ ಎಂದು ನೆಗಟಿವ್ ಅಂಶಗಳನ್ನೇ ಹೆಚ್ಚು ಕೇಳಿರುವುದರಿಂದ, ಗಂಡನ ಮನೆಗೆ ಹೋದ ನಂತರ ತನ್ನ ಮಾತುಗಳನ್ನು ಅಲ್ಲಿ ಕೇಳುತ್ತಾರಾ?

ಅತ್ತೆ ತನ್ನ ಜೊತೆಗೆ ಚೆನ್ನಾಗಿರುತ್ತಾರಾ ಎನ್ನುವ ಯೋಚನೆ ಕೂಡ ಇರುತ್ತದೆ. ಮದುವೆ ಹಿಂದಿನ ದಿನ ಹುಡುಗಿಯಲ್ಲಿ ಮೂಡುವ ಪ್ರಮುಖ ಯೋಚನೆ ಗಂಡನ ಬಗ್ಗೆ. ಪ್ರೇಮವಿವಾಹ ಅಥವಾ ಅರೇಂಜ್ಡ್ ಮ್ಯಾರೇಜ್ ಹೇಗೆ ಇದ್ದರು, ಮದುವೆ ನಂತರ ಗಂಡ ತನ್ನ ಜೊತೆ ಹೇಗಿರುತ್ತಾನೆ ಎನ್ನುವ ಭಯ ಇದ್ದೇ ಇರುತ್ತದೆ. ಏಕೆಂದರೆ ಬಾಯ್ ಫ್ರೆಂಡ್ ಆಗಿರುವುದು ಬೇರೆ ಗಂಡನಾಗಿ ಇರುವುದು ಬೇರೆ. ಗಂಡನಾಗಿ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಾನಾ ಎನ್ನುವ ಪ್ರಶ್ನೆ ಸಹ ಇರುತ್ತದೆ. ಇದನ್ನು ಓದಿ..Kannada News: ಏನಾಗುತ್ತಿದೆ ಯುವ ಜನತೆಯಲ್ಲಿ: ಮತ್ತೊಂದು ಕಹಿ ದಾರಿ ಆಯ್ಕೆ ಮಾಡಿಕೊಂಡ ಯುವ ವಿದ್ಯಾರ್ಥಿನಿ. ತಪ್ಪು ತಿಳಿದುಕೊಳ್ಳುವ ಮುನ್ನವೇ ಏನಾಗಿದೆ ಹೋಗಿದೆ ಗೊತ್ತೇ??

ಮದುವೆ ನಂತರ ಗಂಡನ ಜೊತೆಗೆ ಹೇಗೆ ಚೆನ್ನಾಗಿರುವುದು ಎಂದು ಯೋಚನೆ ಮಾಡುತ್ತಾರೆ. ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ಸಮಾನ್ಯವಾಗಿ ಮದುವೆಯ ಖರ್ಚನ್ನು ಹೆಣ್ಣಿನ ಮನೆಯವರು ನೋಡಿಕೊಳ್ಳುತ್ತಾರೆ. ಹಾಗೆ, ಹುಡುಗಿಯ ತಂದೆ ಎಲ್ಲಾ ಖರ್ಚುಗಳನ್ನು ತನ್ನ ತಲೆಯ ಮೇಲೆ ಹಾಕಿಕೊಂಡು ಮದುವೆ ಮಾಡುವಾಗ, ತಾನು ಈ ಮನೆಗೆ ತನ್ನ ತಂದೆಗೆ ಭಾರವಾದೆನಾ, ತಂದೆಗೆ ತನ್ನಿಂದ ಕಷ್ಟ ಆಗ್ತಿದ್ಯಾ ಎಂದು ಕೂಡ ಯೋಚನೆ ಮಾಡುತ್ತಾರೆ.

ತಂದೆಗೆ ತಾನು ಈ ರೀತಿಯಾಗಿ ಭಾರವಾಗಿದ್ದೇನಾ, ತಂದೆ ತಾಯಿಗೆ ಕಷ್ಟ ಕೊಡುತ್ತಿದ್ದೇನಾ ಎಂದು, ಮದುವೆ ಹಿಂದಿನ ದಿನ ಹೀಗೆ ತವರು ಮನೆ ಬಗ್ಗೆ ಯೋಚನೆ ಮಾಡುತ್ತಾರೆ. ಹೀಗೆ ಮದುವೆಯಾಗುವ ಹಿಂದಿನ ದಿನ ಹುಡುಗಿಯರಿಗೆ ನಾನಾ ಬಗೆಯ ಆಲೋಚನೆ ಶುರುವಾಗುತ್ತದೆ. ಮದುವೆ ನಂತರ ಹೆಣ್ಣಿಗೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಹೆಣ್ಣಿನ ಮನಸ್ಸಿನಲ್ಲಿ ಮೂಡುವ ಈ ಆಲೋಚನೆಗಳ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಇದನ್ನು ಓದಿ..Kannada Story: ಹೆಂಡತಿಯರು ಬೇರೆ ಪುರುಷರ ಮೇಲೆ ಆಸೆ ಬೆಳೆಸಿಕೊಳ್ಳಲು ಮೂಲ ಕಾರಣವೇನು ಗೊತ್ತೇ? ಸಮೀಕ್ಷೆಯಲ್ಲಿ ಹೆಂಗಸರೇ ಹೇಳಿದ ಕಾರಣ ಕೇಳಿದರೆ, ನಿರ್ಧಾರ ಸರಿ ಅಂತೀರಾ.