Film News: ತನ್ನ ಜೊತೆ ನಟಿಯಾಗಿ ನಟಿಸಿದ್ದ ನಟಿಯನ್ನೇ ಬ್ಲಾಕ್ ಮಾಡಿದ ಅಲ್ಲೂ ಅರ್ಜುನ್: ಆಕೆಯ ಪರಿಸ್ಥಿತಿ ನೋಡಿ ಅಲ್ಲುಗೆ ಏನಾಯ್ತು?? ನಟಿಗೆ ಇಂತಹ ಪರಿಸ್ಥಿತಿ ಬಂದಿದೆ ಗೊತ್ತೇ?

Film News: ಚಿತ್ರರಂಗದಲ್ಲಿ ಕಲಾವಿದರಿಗೆ ಸಿನಿಮಾ ಚೆನ್ನಾಗಿ ಆದಾಗ ಮಾತ್ರ ಒಳ್ಳೆಯ ಅವಕಾಶಗಳು ಸಿಗುತ್ತದೆ, ಎಲ್ಲರೂ ಗೌರವಿಸುತ್ತಾರೆ, ಆದರೆ ಸಿನಿಮಾ ಫ್ಲಾಪ್ ಆದರೆ, ಅದೃಷ್ಟ ಕೈಕೊಟ್ಟರೆ ಎಲ್ಲರೂ ದೂರ ಸರಿಯುತ್ತಾರೆ ಎನ್ನುವುದು ಬಹಳ ಹಿಂದಿನಿಂದ ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಉದಾಹರಣೆ ಎನ್ನುವ ಹಾಗೆ ಒಂದು ಘಟನೆ ನಡೆದಿದೆ. ತೆಲುಗಿನ ಸ್ಟಾರ್ ಹೀರೋ ಅಲ್ಲು ಅರ್ಜುನ್ ಅವರು ತಮ್ಮ ಜೊತೆಗೆ ಹೀರೋಯಿ. ಆಗಿ ನಟಿಸಿದ್ದ ಭಾನು ಶ್ರೀ ಮೆಹ್ರಾ ಅವರನ್ನು ಟ್ವಿಟರ್ ನಲ್ಲಿ ಬ್ಲಾಕ್ ಮಾಡಿದ್ದಾರೆ. ವರುಡು ಸಿನಿಮಾದಲ್ಲಿ ಭಾನುಶ್ರೀ ಮೆಹ್ರಾ ಅವರು ನಟಿಸಿದ್ದರು, ಈ ಸಿನಿಮಾದ ಹೀರೋಯಿನ್ ಯಾರು ಎನ್ನುವುದನ್ನು ಸಿನಿಮಾತಂಡ ಬಹಳ ಸೀಕ್ರೆಟ್ ಆಗಿ ಇಟ್ಟಿತ್ತು..

ಸಿನಿಮಾ ಬಿಡುಗಡೆ ಆದಮೇಲೆ ಅಟ್ಟರ್ ಫ್ಲಾಪ್ ಆಗಿತ್ತು, ಹಾಗಾಗಿ ಭಾನುಶ್ರೀ ಮೆಹ್ರಾ ಅವರಿಗೆ ಹೇಳಿಕೊಳ್ಳುವಂಥ ಯಶಸ್ವಿ ಕೆರಿಯರ್ ಸಿಗಲಿಲ್ಲ. ಇತ್ತ ಅಲ್ಲು ಅರ್ಜುನ್ ಆಕೆಯನ್ನು ಟ್ವಿಟರ್ ಬ್ಲಾಕ್ ಮಾಡಿದ್ದು, ಅದರ ಸ್ಕ್ರೀನ್ ಶಾಟ್ ಶೇರ್ ಮಾಡಿ ಟ್ವೀಟ್ ಮಾಡಿದ್ದ ನಟಿ, “ಎಂದಾದರು ನೀವು ನಿರ್ದಯತೆಯಲ್ಲಿ ಸಿಕ್ಕಿಕೊಂಡಿದ್ದೀರಿಯೇ ಎಂದು ಅಂದುಕೊಂಡರೆ, ನಾನು ಅಲ್ಲು ಅರ್ಜುನ್ ಅವರೊಡನೆ ಹೀರೋಯಿನ್ ಆಗಿ ವರುಡು ಸಿನಿಮಾದಲ್ಲಿ ನಟಿಸಿದ್ದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ, ಆದರೂ ನನಗೆ ಕೆಲಸ ಸಿಗಲಿಲ್ಲ. ನನ್ನ ಕಷ್ಟಗಳಲ್ಲಿ ತಮಾಷೆಯನ್ನು ನೋಡುವುದನ್ನು ನಾನು ಕಲಿತಿದ್ದೇನೆ.. ಈಗ ಅಲ್ಲು ಅರ್ಜುನ್ ನನ್ನನ್ನು ಬ್ಲಾಕ್ ಮಾಡಿದ್ದಾರೆ..” ಎಂದು ಟ್ವೀಟ್ ಮಾಡಿದ್ದರು ಭಾನುಶ್ರೀ ಮೆಹ್ರಾ. ಕೆಲವರು ಈ ಟ್ವೀಟ್ ನೋಡಿ ನಿಮ್ಮ ಕೆರಿಯರ್ ಹಾಳಾಗುವುದಕ್ಕೆ ಅಲ್ಲು ಅರ್ಜುನ್ ಕಾರಣವಲ್ಲ ಎನ್ನುವ ಟ್ವೀಟ್ ಸಹ ಮಾಡಿದ್ದರು.

ಈ ಟ್ವೀಟ್ ವೈರಲ್ ಆದ ಕೆಲವೇ ಸಮಯದಲ್ಲಿ ಅಲ್ಲು ಅರ್ಜುನ್ ಅವರು ಭಾನುಶ್ರೀ ಮೆಹ್ರಾ ಅವರನ್ನು ಅನ್ ಬ್ಲಾಕ್ ಮಾಡಿದ್ದು, ಅದರ ಸ್ಕ್ರೀನ್ ಶಾಟ್ ಅನ್ನು ಸಹ ಭಾನುಶ್ರೀ ಅವರು ಶೇರ್ ಮಾಡಿ, “ಗ್ರೇಟ್ ನ್ಯೂಸ್.. ಅಲ್ಲು ಅರ್ಜುನ್ ಅವರು ನನ್ನನ್ನು ಅನ್ ಬ್ಲಾಕ್ ಮಾಡಿದ್ದಾರೆ. ನನ್ನ ಕೆರಿಯರ್ ಹಾಳಾಗುವುದಕ್ಕೆ ಅಲ್ಲು ಅರ್ಜುನ್ ಕಾರಣ ಎನ್ನುವುದು ನನ್ನ ಉದ್ದೇಶ ಆಗಿರಲಿಲ್ಲ ಎಂದು ಸ್ಪಷ್ಟನೆ ಕೊಡುತ್ತೇನೆ..ನಾನು ನನ್ನ ಕಷ್ಟಗಳಲ್ಲಿ ತಮಾಷೆಯನ್ನು ಹುಡುಕುತ್ತಿದ್ದೇನೆ, ಇನ್ನು ಹೆಚ್ಚು ಸಂತೋಷ ನಗು ಇರಲಿದೆ.. ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದಕ್ಕೆ ಥ್ಯಾಂಕ್ ಯು ಅಲ್ಲು ಅರ್ಜುನ್..” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.