RCB IPL 2023: ಆರ್ಸಿಬಿ ಹೀನಾಯ ಸೋಲು ಅನುಭವಿಸಿದ ಮೇಲೆ, ವಿರಾಟ್ ಶಾರುಖ್ ಜೊತೆ ಸೇರಿ ಮಾಡಿದ್ದೇನು ಗೊತ್ತೇ? ಅಭಿಮಾನಿಗಳು ಗುಲ್ ಗರಂ.

RCB IPL 2023: 2023ರ ಐಪಿಎಲ್ (IPL) ಟೂರ್ನಿ ಶುರುವಾಗಿ ಭರ್ಜರಿಯಾಗಿ ನಡೆಯುತ್ತಿದೆ. ನಮ್ಮ ಆರ್ಸಿಬಿ (RCB) ತಂಡವು ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ (Mumbai Indians) ತಂಡದ ವಿರುದ್ಧ ಗೆದ್ದು, ಮೊದಲ ಗೆಲುವಿನ ಮೂಲಕ ಒಳ್ಳೆಯ ಜೋಶ್ ನಲ್ಲಿತ್ತು, ಆದರೆ ಏಪ್ರಿಲ್ 6ರಂದು ನಡೆದ 2ನೇ ಪಂದ್ಯದಲ್ಲಿ ಕೆಕೆಆರ್ (KKR) ತಂಡದ ನಡುವೆ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಈ ಸೋಲು ಅಭಿಮಾನಿಗಳಲ್ಲಿ ಸಹ ಬೇಸರ ಮೂಡಿಸಿತು.

ಆರ್ಸಿಬಿ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಹ ಕಳಪೆ ಪ್ರದರ್ಶನ ನೀಡಿತು. ಡೆತ್ ಓವರ್ ನಲ್ಲಿ ತಂಡದ ಬೌಲಿಂಗ್ ಚೆನ್ನಾಗಿರಲಿಲ್ಲ, ಎದುರಾಳಿ ತಂಡಕ್ಕೆ ಹೆಚ್ಚು ರನ್ಸ್ ಗಳನ್ನು ಬಿಟ್ಟುಕೊಟ್ಟರು, 202 ರನ್ಸ್ ಗಳಿಸಿತು ಆರ್ಸಿಬಿ ತಂಡ. ಈ ಸೋಲಿನ ನಂತರ ಆರ್ಸಿಬಿ ತಂಡವು ಡೆತ್ ಓವರ್ ನಲ್ಲಿ ಬೌಲಿಂಗ್ ಮಾಡುವ ವಿಚಾರದಲ್ಲಿ ಸುಧಾರಣೆ ಕಾಣಬೇಕು ಎಂದು ನೆಟ್ಟಿಗರು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ..Cricket News: ಇನ್ನು ಸೂರ್ಯ ರವರ ಟಚ್ ಮಾಡೋಕೆ ಆಗಲ್ಲ; ಸೂರ್ಯ ಬೆಂಬಲಕ್ಕೆ ನಿಂತ ಟಾಪ್ ಆಟಗಾರ ಯಾರು ಗೊತ್ತೇ?? ಇದೆ ಕೆಲಸ ರಾಹುಲ್ ಗೆ ಮಾಡಲಿಲ್ಲ ಯಾಕೆ??

ಬ್ಯಾಟಿಂಗ್ ಕೂಡ ಚೆನ್ನಾಗಿರಲಿಲ್ಲ, ವಿಕೆಟ್ಸ್ ಗಳನ್ನು ಬಹಳ ಬೇಗ ಕಳೆದುಕೊಂಡ ಆರ್ಸಿಬಿ, ಪಂದ್ಯದಲ್ಲಿ ಸೋತಿತು. ಅದರೆ ಪಂದ್ಯ ಸೋತ ಬಳಿಕ, ನಡೆದ ಅದೊಂದು ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಲ್ಕತ್ತಾದಲ್ಲಿ ನಡೆದ ಈ ಪಂದ್ಯವನ್ನು ನೋಡಲು ಕೆಕೆಆರ್ ತಂಡದ ಓನರ್ ನಟ ಶಾರುಖ್ ಖಾನ್ (Shahrukh Khan) ಅವರು ಸಹ ಬಂದಿದ್ದರು, ಪಂದ್ಯ ಮುಗಿದ ಬಳಿಕ ತಮ್ಮ ತಂಡವನ್ನು ಭೇಟಿ ಮಾಡಿ ಅವರೊಡನೆ ಸಮಯ ಕಳೆದಿದ್ದಾರೆ. ಹಾಗೆಯೇ ಗ್ರೌಂಡ್ ನಲ್ಲಿದ್ದ ಆರ್ಸಿಬಿ ತಂಡವನ್ನು ಕೂಡ ಮಾತನಾಡಿಸಿದ್ದಾರೆ.

ವಿರಾಟ್ ಕೊಹ್ಲಿ (Virat Kohli) ಅವರನ್ನು ಹಗ್ ಮಾಡಿ, ಮಾತನಾಡಿಸಿ, ತಮ್ಮ ಪಠಾಣ್ (Pathaan) ಸಿನಿಮಾದ ಸ್ಟೆಪ್ ಅನ್ನು ಸಹ ಹೇಳಿಕೊಟ್ಟರು ಕಿಂಗ್ ಖಾನ್, ವಿರಾಟ್ ಅವರು ಶಾರುಖ್ ಖಾನ್ ಅವರ ಹಾಗೆಯೇ ಸ್ಟೆಪ್ ಹಾಕಲು ಟ್ರೈ ಮಾಡಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್ಸಿಬಿ ಅಭಿಮಾನಿಗಳು ಈ ವಿಡಿಯೋ ನೋಡಿ ಅಸಮಾಧಾನಗೊಂಡಿದ್ದು, ಇಲ್ಲಿರುವ ಉತ್ಸಾಹವನ್ನು ಪಂದ್ಯದ ಮೇಲೆ ತೋರಿಸಿದ್ದರೆ, ಪಂದ್ಯದಲ್ಲಿ ಗೆಲ್ಲಬಹುದಿತ್ತು ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Cricket News: ರನ್ ಔಟ್ ಆದರೂ ಔಟಿಲ್ಲ ಎಂದು ಬಿಟ್ಟ ಅಂಪೈರ್: ಇದಕ್ಕೆ ಕಾರಣ ಕೇಳಿದರೆ, ನಿಜಕ್ಕೂ ಕ್ರಿಕೆಟ್ ನಿಮಗೆ ಗೊತ್ತೇ ಇಲ್ಲ ಅಂತೀರಾ.

Best News in Kannadaipl 16kannada livekannada newsKannada Trending Newslive newsLive News Kannadalive trending newsNews in Kannadarcb ipl 2023rcb vs kkrrcb vs mishahrukh khantop news kannadavirat kohli