Film News: ರಶ್ಮಿಕ ಬೇಡವೇ ಬೇಡ, ಇವರನ್ನು ವೀಕೆಂಡ್ ವಿಥ್ ರಮೇಶ್ ಗೆ ಕರೆಸಿ, ಜನರು ಪಕ್ಕ ಜಾಸ್ತಿ ನೋಡ್ತಾರೆ. ಯಾರು ಬರಬೇಕು ಗೊತ್ತೇ? ಇವರ ಸಾಧನೆ ಕೇಳಿದರೇ, ನೀವೇ ಬನ್ನಿ ಅಂತೀರಾ.

Film News: ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮಕ್ಕೆ ನಟಿ ರಮ್ಯಾ (Ramya) ಅವರು ಬಂದು ಟ್ರೋಲ್ ಆಗಿದ್ದರು. ಅದಾದ ಬಳಿಕ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಅಭಿಮಾನಿಗಳು ರಶ್ಮಿಕಾ ಅವರನ್ನು ಕರೆಸಿ ಎಂದು ಮನವಿ ಮಾಡಿಕೊಂಡಿದ್ದರು.. ಆದರೆ ನೆಟ್ಟಿಗರು ಮಾತ್ರ, ರಶ್ಮಿಕಾ ಅವರನ್ನು ಮಾತ್ರ ಕರೆಸಬೇಡಿ, ಅವರ ಬದಲಾಗಿ ಕನ್ನಡಕ್ಕಾಗಿ ಸೇವೆ ಮಾಡುತ್ತಿರುವ ಈ ಹುಡುಗಿಯನ್ನು ಕರೆಸಿ ಎಂದು ಹೇಳುತ್ತಿದ್ದಾರೆ. ನೆಟ್ಟಿಗರು ಹೇಳುತ್ತಿರುವ ಆ ಹುಡುಗಿ ಯಾರು? ಆಕೆಯ ಸಾಧನೆ ಎಂಥದ್ದು ಗೊತ್ತಾ? ಇಂದು ಆ ಹುಡುಗಿಯ ಸಾಧನೆ ಬಗ್ಗೆ ತಿಳಿಸುತ್ತೇವೆ ನೋಡಿ..

ನೆಟ್ಟಿಗರು ಹೇಳುತ್ತಿರುವುದು ಮತ್ಯಾರ ಬಗ್ಗೆಯೂ ಅಲ್ಲ, ಈಗಾಗಲೇ 109ಸರ್ಕಾರಿ ಶಾಲೆಗಳಿಗೆ ತಮ್ಮ ತಂಡದ ಜೊತೆಗೆ ಸೇರಿ ಬಣ್ಣ ಬಳಿದು, ಶಾಲೆಗಳು ಮಾತ್ರವಲ್ಲದೆ ಗೋಶಾಲೆಗಳು ಕೆಲವು ದೇವಸ್ಥಾನಗಳಿಗೂ ಬಣ್ಣ ಬಳಿದಿದ್ದಾರೆ. ಈ ಹುಡುಗಿ ಮತ್ಯಾರು ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಅಕ್ಕ ಅನು (Akka Anu) ಎಂದೇ ಖ್ಯಾತಿ ಪಡೆದಿರುವ ಅನು ಅವರು. ಈ ಹುಡುಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿರುವುದನ್ನು ನೋಡಿದರೆ ನೀವು ಶಾಕ್ ಆಗುತ್ತೀರಿ. ಅನು ಅವರು ಮೂಲತಃ ರಾಯಚೂರಿನ (Raichur) ಹುಡುಗಿ, ಅಲ್ಲಿಯೇ ಹುಟ್ಟಿ ಬೆಳೆದು, ಶಾಲೆಯ ಶಿಕ್ಷಣವನ್ನು ಕಲಿತಿದ್ದು ಅಲ್ಲಿಯೇ, ಬೆಂಗಳೂರಿನ (Bangalore) ಮಹಾರಾಣಿ ಕಾಲೇಜಿನಲ್ಲಿ ಡಿಗ್ರಿ ಮುಗಿಸುವ ಸಮಯಕ್ಕೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದ್ದಾಗ, ಅನು ಅವರಿಗೆ ಬೇಸರವಾಗಿ, ಹೋರಾಟದಲ್ಲಿ ಸಹ ಪಾಲ್ಗೊಂಡರು.

ಆದರೆ ಅದ್ಯಾವುದು ಕೆಲಸಕ್ಕೆ ಬರುವುದಿಲ್ಲ ಎಂದು ಅನ್ನಿಸಿದಾಗ, ತಾವೇ ಕೆಲಸ ಶುರು ಮಾಡಿದರು. 2018ರ ವರೆಗು ಸರ್ಕಾರಿ ಶಾಲೆಗಳಿಗೆ ಭೇಟಿನೀಡಿ, ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು, ಅಲ್ಲಿ ಸ್ವಚ್ಛತೆ ಸಮಸ್ಯೆ ಇರುವುದನ್ನು ಅರ್ಥಮಾಡಿಕೊಂಡು, ಅದರಿಂದಲೇ ಶುರು ಮಾಡಬೇಕು ಎಂದು, 60 ಸಾವಿರ ರೂಪಾಯಿ ಸಾಲ ಮಾಡಿ, ಕೂಲಿ ಮಾಡುವವರನ್ನು ಕರೆದುಕೊಂಡು ಹೋಗಿ ಶಾಲೆಗೆ ಬಣ್ಣ ಹಾಕಿಸಿದ್ದಾರೆ. ಮೊದಲ ಶಾಲೆಗೆ ಬಣ್ಣ ಹಾಕಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಹಾಗೆ, ಕೆಲವರು ಅವರ ಜೊತೆಗೆ ತಮ್ಮನ್ನು ಸೇರಿಸಿಕೊಳ್ಳಿ ಎಂದು ಬರುವುದಕ್ಕೆ ಶುರು ಮಾಡಿದರು. ಸಾಲ ಮಾಡಿದ 60 ಸಾವಿರದಲ್ಲಿ 10 ಶಾಲೆಗಳಿಗೆ ಬಣ್ಣ ಬಳಿಸಿದರು. ನಂತರ ಅವರ ತಂಡವು ದೊಡ್ಡದಾಯಿತು. ತಮ್ಮ ಜೊತೆಗೆ ಬಂದರೆ ಹಣ ಸಿಗುವುದಿಲ್ಲ, ಇದು ಸೇವೆ, ಹಾಗಾಗಿ ನಿಮ್ಮ ಮನೆಯಲ್ಲಿ ಪರ್ಮಿಶನ್ ತಗೊಂಡು ಬನ್ನಿ ಎಂದಿದ್ದಾರಂತೆ ಅನು.

ಅನು ಅವರೇ ಅವರ ಮನೆಗೆ ಹೋಗಿ, ಮಾತನ್ನು ಆಡಿದ್ದರಂತೆ.. ಆದರೆ ಈಗ ಅವರ ಮನೆಯವರೇ ದುಡ್ಡು ಕೊಟ್ಟು ಕಳಿಸುವ ಹಾಗೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇದುವರೆಗೂ 10 ಲಕ್ಷ ಸಾಲ ಅನು ಅವರ ಮೇಲಿದೆ, ಸಾಲದವರು ಮನೆ ಹತ್ತಿರ ಬಂದಾಗ, 2 ಲಕ್ಷ ಸಾಲವನ್ನು ಅವರ ಮನೆಯವರೇ ತೀರಿಸಿದ್ದಾರೆ..ಸೋಷಿಯಲ್ ಮೀಡಿಯಾದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ 9 ಲಕ್ಷ, ಫೇಸ್ ಬುಕ್ ನಲ್ಲಿ 5ಲಕ್ಷ ಫಾಲೋವರ್ಸ್ ಇದ್ದರು ಯಾವುದೇ ಆದಾಯ ಅವರಿಗೆ ಇಲ್ಲ. ಈಗ ಅವರದ್ದು 13 ಜನರ ತಂಡ, ಅವರಲ್ಲಿ 10 ಜನ ಯಾವಾಗಲೂ ಕೆಲಸ ಮಾಡುತ್ತಾರೆ, 3 ಜನ ಕೆಲಸ ಇದ್ದಾಗ ಮಾತ್ರ ಬರುತ್ತಾರೆ. ಅನು ಅವರದ್ದು ತುಂಬಾ ಒಳ್ಳೆಯ ತಂಡ ಆಗಿದ್ದು, ಸಮಸ್ಯೆಗಳು ಬಂದು ಅನು ಅವರು ಪ್ರಾಣ ಕಳೆದುಕೊಳ್ಳಬೇಕು ಎಂದುಕೊಂಡಾಗ, ತಂಡವೆ ಅವರಿಗೆ ಬೆಂಬಲವಾಗಿ ನಿಂತಿದೆ. ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಡಿಕೊಂಡು ಹೋಗುತ್ತಿರುವ ಈ ಸಾಧಕಿಯನ್ನು ವೀಕೆಂಡ್ ವಿತ್ ರಮೇಶ್ ಶೋಗೆ ಕರಸಿ ಎನ್ನುತ್ತಿದ್ದಾರೆ ನೆಟ್ಟಿಗರು.

akka anuBest News in Kannadafilm newsFilm News in kannadafilm news kannadakannada filmkannada film newskannada livekannada newsKannada Trending Newslatest film updateslatest updateslive newsLive News Kannadalive trending newsNews in Kannadaramyarashmika mandannatop news kannadatv news kannadaweekend with rameshzee kannada