Hot Star Disney: ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಹಾಟ್ ಸ್ಟಾರ್- ಇನ್ನು ಮುಂದೆ ಉಚಿತವಾಗಿ ಏನೆಲ್ಲಾ ಸಿಗಲಿದೆ ಗೊತ್ತೇ??

Hot Star Disney: ಈ ವರ್ಷ ಐಪಿಎಲ್ ಟೂರ್ನಿಯ ವೀಕ್ಷಣೆಯ ರೈಟ್ಸ್ ಅನ್ನು ಜಿಯೋ ಸಿನಿಮಾ ಸಂಸ್ಥೆ ಪಡೆದು, ಉಚಿತವಾಗಿ ವೀಕ್ಷಣೆಯ ಅವಕಾಶ ನೀಡುವ ಮೂಲಕ ಜನರಿಗೆ ಬಂಪರ್ ನೀಡಿತ್ತು. ಜನರು ಉಚಿತವಾಗಿ ಜಿಯೋ ಸಿನಿಮಾ ಆಪ್ ನಲ್ಲಿ ಐಪಿಎಲ್ ವೀಕ್ಷಿಸಿದ ಕಾರಣ ದೊಡ್ಡ ದಾಖಲೆ ಬರೆದಿತ್ತು. ಸುಮಾರು 13 ಕೋಟಿಗಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು. ಸಿ.ಎಸ್.ಕೆ ವರ್ಸಸ್ ಜಿಟಿ ತಂಡಗಳ ನಡುವೆ ನಡೆದ ಫಿನಾಲೆ ಪಂದ್ಯವನ್ನು 3.2ಕೋಟಿ ಜನ ವೀಕ್ಷಿಸಿ ದಾಖಲೆ ಸೃಷ್ಟಿಯಾಗಿತ್ತು.

ಜಿಯೋ ಸಂಸ್ಥೆಯು ಐಪಿಎಲ್ ಸ್ಟ್ರೀಮಿಂಗ್ ರೈಟ್ಸ್ ಪಡೆದುಕೊಂಡ ನಂತರ ಡಿಸ್ನಿ + ಹಾಟ್ ಸ್ಟಾರ್ ಸಂಸ್ಥೆ 50 ಲಕ್ಷ ಗ್ರಾಹಕರನ್ನು ಕಳೆದುಕೊಂಡಿತು. ಈಗ ಹಾಟ್ ಸ್ಟಾರ್ ಕಂಬ್ಯಾಕ್ ಮಾಡಬೇಕಿದೆ. ಈಗ ಹಾಟ್ ಸ್ಟಾರ್ ಜನರನ್ನು ಆಕರ್ಷಿಸಲು ಹೊಸದೊಂದು ಪ್ಲಾನ್ ಜಾರಿಗೆ ತಂದಿದೆ. ನಮಗೆಲ್ಲ ಗೊತ್ತಿರುವ ಹಾಗೆ ಭಾರತ ತಂಡ ಈಗ ಇಂಗ್ಲೆಂಡ್ ನಲ್ಲಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ತಂಡಗಳ ನಡುವೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್ ನಡೆಯುತ್ತಿದೆ. ಇದನ್ನು ಓದಿ..Costly Headphones: ನಿಮ್ಮ ಮನೆ ಮಠ ಆಸ್ತಿ ಮಾರಿದರೂ ಈ ಹೆಡ್ ಫೋನ್ ಗಳನ್ನೂ ಖರೀದಿ ಮಾಡಲು ಆಗಲ್ಲ. ಅದೆಷ್ಟು ಲಕ್ಷ ಗೊತ್ತೇ? ಈ ಹೆಡ್ ಫೋನ್ ಗಳಲ್ಲಿ ಏನೆಲ್ಲಾ ಇರುತ್ತೆ ಗೊತ್ತೇ??

ಇದಾದ ಬಳಿಕ ಓಡಿಐ ಏಶ್ಯಾಕಪ್ ಹಾಗೂ ಓಡಿಐ ವರ್ಲ್ಡ್ ಕಪ್ ನಡೆಯಲಿದೆ. ಓಡಿಐ ವರ್ಲ್ಡ್ ಕಪ್ ಭಾರತದಲ್ಲೇ ನಡೆಯುತ್ತಿರುವುದು ವಿಶೇಷ. ಈ ಎರಡು ಟೂರ್ನಿಯ ಸ್ಟ್ರೀಮಿಂಗ್ ರೈಟ್ಸ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಂಸ್ಥೆಯು ಪಡೆದುಕೊಂಡಿದ್ದು, ಈ ಪಂದ್ಯಗಳನ್ನು ಹಾಟ್ ಸ್ಟಾರ್ ಆಪ್ ಮೂಲಕ ಮೊಬೈಲ್ ಗಳಲ್ಲಿ ಉಚಿತವಾಗಿ ನೋಡುವ ಅವಕಾಶವನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಂಸ್ಥೆ ಕ್ರಿಕೆಟ್ ಅಭಿಮಾನಿಗಳಿಗೆ ನೀಡಿದೆ.

ಆಕ್ಟೊಬರ್ 5 ರಿಂದ ನವೆಂಬರ್ 19ರವರೆಗೂ ಓಡಿಐ ವರ್ಲ್ಡ್ ಕಪ್ ಪಂದ್ಯಗಳು ನಡೆಯಲಿದೆ, ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 17ರವರೆಗು ಓಡಿಐ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಓಡಿಐ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬಹುದು ಎನ್ನಲಾಗಿದೆ, ಈ ಪಂದ್ಯಗಳನ್ನು ಆಪ್ ಮೂಲಕ ಉಚಿತವಾಗಿ ವೀಕ್ಷಿಸಬಹುದು. ಆದರೆ ಹೆಚ್ಚು ಸಮಯ ಈ ರೀತಿ ಫ್ರೀಯಾಗಿ ಕೊಟ್ಟರೆ ಓಟಿಟಿ ಸಂಸ್ಥೆಗಳು ನಷ್ಟ ಅನುಭವಿಸುತ್ತದೆ ಎನ್ನುತ್ತಿದ್ದಾರೆ ತಜ್ಞರು. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??

Best News in Kannadacricket newscrikcet news in kannadakannada cricketkannada cricket newskannada livekannada newsKannada Trending Newslive newsLive News Kannadalive trending newsNews in Kannadatop news kannada