BCCI: ಪ್ರಯೋಜನಕ್ಕೆ ಬಾರದೆ ಇದ್ದರೂ ನಾಯಕನಾಗಿ ತಂಡದಲ್ಲಿ ಇದ್ದ ರೋಹಿತ್ ಗೆ ಶಾಕ್- ಬಿಸಿಸಿಐ ಮಾಸ್ಟರ್ ಪ್ಲಾನ್ ಏನು ಗೊತ್ತೇ?

BCCI: ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಭಾರತ ಫ್ಯಾನ್ಡ್ ಸೋತ ನಂತರ ಟೀಮ್ ಇಂಡಿಯಾ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ ಐಪಿಎಲ್, ತಂಡದ ಆಟಗಾರರು ಐಪಿಎಲ್ ಪಂದ್ಯಗಳನ್ನಾಡಿ ಸುಸ್ತಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ರೆಸ್ಟ್ ತೆಗೆದುಕೊಳ್ಲದೆ WTC ಫೈನಲ್ಸ್ ಗೆ ಬಂದ ಕಾರಣ ಈ ಸೋಲು ಎನ್ನುತ್ತಿದ್ದಾರೆ ವಿಶ್ಲೇಷಕರು. ಹಾಗೂ ತಂಡದ ಆಯ್ಕೆ ಚೆನ್ನಾಗಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬಂದವು. ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಹೆಚ್ಚು ಟೀಕೆ ವ್ಯಕ್ತವಾಗುತ್ತಿದೆ. ರೋಹಿತ್ ಶರ್ಮಾ ಅವರು ತಂಡವನ್ನು ಆಯ್ಕೆ ಮಾಡುವಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎನ್ನಲಾಗಿದೆ.

ಈ ಸೋಲು ರೋಹಿತ್ ಶರ್ಮಾ ಅವರು ಎಲ್ಲಾ ಕಡೆ ಟೀಕೆಗೆ ಒಳಗಾಗುವ ಹಾಗೆ ಮಾಡಿದೆ. ಈ ಸೋಲು ತಂಡದ ಮೇಲೆ ಪರಿಣಾಮ ಬೀಳಬಹುದು ಎನ್ನಲಾಗಿದೆ. ಇನ್ನುಮುಂದೆ ಟೆಸ್ಟ್ ಟೀಮ್ ನಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಚೇತೇಶ್ವರ ಪೂಜಾರ ಅವರಂಥ ಹಿರಿಯ ಆಟಗಾರರನ್ನು ತಂಡದಿಂದ ಪರ್ಮನೆಂಟ್ ಆಗಿ ಹೊರಗಿಡುವ ಸಾಧ್ಯತೆ ಇದೆ. ಕೆ.ಎಸ್. ಭರತ್ ಅವರನ್ನು ಸಹ ತಂಡದಿಂದ ದೂರ ಇಡಬಹುದು ಎನ್ನಲಾಗುತ್ತಿದೆ.. ಮುಂದಿನ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಸೀರೀಸ್ ಮಲ್ಲಿ ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್ ಅವರಿಗೆ ಅವಕಾಶ ಕೊಡಬಹುದು ಎನ್ನಲಾಗಿದೆ. ಇದನ್ನು ಓದಿ..Team India: ರೋಹಿತ್ ಶರ್ಮ ನಂತರ, ಭಾರತ ಟೆಸ್ಟ್ ತಂಡದ ನಾಯಕ ಯಾರಾಗಬಹುದು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟ್ ನಲ್ಲಿ. ಯಾರ್ಯಾರು ಗೊತ್ತೇ?

ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಪಂದ್ಯವೇ ರೋಹಿತ್ ಶರ್ಮ ಅವರ ಕ್ಯಾಪ್ಟನ್ಡಿಯ ಕೊನೆಯ ಪಂದ್ಯ ಆಗಿರಲಿದೆ. ಈಗ ರೋಹಿತ್ ಅವರಿಗೆ 36 ವರ್ಷ, ಇನ್ನು ಹೆಚ್ಚಿನ ಸಮಯ ಇವರು ಕ್ಯಾಪ್ಟನ್ ಆಗಿ ಉಳಿಯುವುದು ಕಷ್ಟ. ಕ್ಯಾಪ್ಟನ್ ಆಗಿ ಮತ್ತು ಬ್ಯಾಟಿಂಗ್ ಎರಡರಲ್ಲೂ ರೋಹಿರ್ ಶರ್ಮ ವಿಫಲರಾಗಿದ್ದಾರೆ. ಈ ಬಗ್ಗೆ ಶಿವಸುಂದರ್ ದಾಸ್ ನೇತೃತದ ಆಯ್ಕೆ ಸಮಿತಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಕೆರೆಬಿಯನ್ ಸೀರೀಸ್ ಬಳಿಕ ಡಿಸೆಂಬರ್ ನಲ್ಲಿ ಯಾವುದೇ ಟೆಸ್ಟ್ ಪಂದ್ಯಗಳಿಲ್ಲ. ಹಾಗಾಗಿ ಟೆಸ್ಟ್ ಟೀಮ್ ಕ್ಯಾಪ್ಟನ್ಸಿ ಬಗ್ಗೆ ಯೋಚಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಈಗ ಟೆಸ್ಟ್ ಪಂದ್ಯಗಳ ಖ್ಯಾತ ಬೌಲರ್ ರವಿಚಂದ್ರನ್ ಅಶ್ವಿನ್ ಅಥವಾ ಅದ್ಭುತ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಭವಿಷ್ಯದ ಕ್ಯಾಪ್ಟನ್ ಆಗಿ ಪರಿಗಣಿಸಬಹುದು ಎನ್ನಲಾಗಿದೆ..ಇಲ್ಲ ಆದರೆ ಇವರಿಬ್ಬರಿಗೂ ಈಗ 35 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿದೆ, ಹಾಗಾಗಿ ಇವರ ಬದಲು ಶುಬ್ಮನ್ ಗಿಲ್, ಕೆ.ಎಲ್.ರಾಹುಲ್ ಇವರನ್ನು ಕ್ಯಾಪ್ಟನ್ ಆಗಿ ಮಾಡುವ ಸಾಧ್ಯತೆ ಇದೆ. ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ..Business Idea: ರಿಸ್ಕ್ ಇಲ್ಲದೆ ಇರುವ ಹಾಗೆ ಈ ಉದ್ಯಮ ಮಾಡಿ, ತಿಂಗಳಿಗೆ ಕನಿಷ್ಠ 50 ಸಾವಿರ ನಿಮ್ಮ ಜೇಬಿಗೆ ಲಾಭ. ಏನು ಮಾಡಬೇಕು ಗೊತ್ತೇ?

Best News in Kannadacricket newscrikcet news in kannadakannada cricketkannada cricket newskannada livekannada newsKannada Trending Newslive newsLive News Kannadalive trending newsNews in Kannadatop news kannada