Skoda Enyaq: ಸುತ್ತಾಟ ಮಾಡುತ್ತಾ ಕೆಲಸ ಮಾಡಲು ವಿಶೇಷ ಕಾರಿನ ವಿನ್ಯಾಸ- ಸ್ಕೊಡಾ ರವರ ಕಾರಿನಲ್ಲಿನ ವಿಶೇಷತೆ, ಲುಕ್ ನ ಸಂಪೂರ್ಣ ಡೀಟೇಲ್ಸ್.

Skoda Enyaq: ಕೋವಿಡ್ ಸಮಯದಲ್ಲಿ ಹಲವು ಜನರಿಗೆ ಕೆಲಸದ ವಿಷಯದಲ್ಲಿ ತೊಂದರೆಯಾಗಿತ್ತು, ಒಂದಷ್ಟು ಜನರು ವರ್ಕ್ ಫ್ರಮ್ ಹೋಮ್ ಮಾಡಿದರು. ಮನೆಯಿಂದ ಕೆಲಸ ಮಾಡುವುದು ಒಂದು ರೀತಿ ಚಾಲೆಂಜ್ ಹಾಗೂ ಒಂದು ರೀತಿ ಒಳ್ಳೆಯ ಅವಕಾಶ ಕೂಡ ಆಗಿತ್ತು. ಈ ಚಾಲೆಂಜ್ ಅನ್ನು ಥ್ರಿಲ್ ಆಗುವ ಹಾಗೆ ಬದಲಾಯಿಸಬಹುದು ಎಂದು ಹಲವರು ಯೋಚಿಸಿರುವುದಿಲ್ಲ. ಆದರೆ ಮ್ಲಾಡಾ ಬೊಲೆಸ್ಲಾವ್‌ ನಲ್ಲಿರುವ ಸ್ಕೋಡಾ (SKoda) ವೊಕೇಶನಲ್ ಸ್ಕೂಲ್‌ ನ 29 ವಿದ್ಯಾರ್ಥಿಗಳು ಒಂದು ಕಾನ್ಸೆಪ್ಟ್ ಕಾರ್ ಡಿಸೈನ್ ಮಾಡಿದ್ದಾರೆ..

skoda-enyaq-iv-rodiaq-ev explained in kannada

ಇದು ವರ್ಕ್ ಫ್ರಮ್ ಹೋಮ್ ಅನುಭವವನ್ನು ಬದಲಾಯಿಸುತ್ತದೆ. ಈ ಕಾನ್ಸೆಪ್ಟ್ ಕಾರಿನಲ್ಲಿ ನೀವು ಹೊರಗಡೆ ಸುತ್ತಾಡುತ್ತಾ ಕೆಲಸ ಮಾಡಬಹುದು, ಇದು ಮನರಂಜನೆಯಿಂದ ಹಾಗೂ ಉತ್ತೇಜನದಿಂದ ಕೆಲಸ ಮಾಡುವ ಒಂದು ದಾರಿ ಆಗಿದೆ. ಈ ಸ್ಕೋಡ ಕಾನ್ಸೆಪ್ಟ್ ಕಾರ್ ಸ್ಕೋಡಾ ಎನ್ಯಾಕ್ (Skoda Enyaq) ಐವಿ ಎಲೆಕ್ಟ್ರಿಕ್ SUV ಕಾರ್ ಆಗಿರಲಿದೆ. ಈ ಸ್ಕೋಡಾ ಎನ್ಯಾಕ್ (Skoda Enyaq) ಕಾರ್ ವರ್ಕ್ ಸ್ಟೇಶನ್, ಆಫೀಸ್ ಹಾಗೂ ಕ್ಯಾಂಪಿಂಗ್ ಕಾರ್ ಆಗಿ ಕೆಲಸ ಮಾಡುತ್ತದೆ. ಇದನ್ನು ಓದಿ..TVS updates: ಮಾರುಕಟ್ಟೆಯಲ್ಲಿ ಜಾಸ್ತಿ ಮಾರಾಟವಾದ ಟಿವಿಎಸ್ ವಾಹನಗಳು- ಅದರಲ್ಲಿಯೂ ಇದಕ್ಕೆ ಡಿಮ್ಯಾಂಡ್ ಜಾಸ್ತಿ. ನೋಡಿ ಖರೀದಿ ಮಾಡ್ತೀರಾ.

ಎರಡು ವಿಭಿನ್ನ ಉದ್ದೇಶ ಇಟ್ಟುಕೊಂಡು ಈ ಕಾರ್ ಅನ್ನು ಡಿಸೈನ್ ಮಾಡಲಾಗಿದೆ. ಒಂದು ಮೀವು ಮನೆಯಿಂದ ಕೆಲಸ ಮಾಡುವಾಗಲೂ, ಇದರಲ್ಲಿನ ಸೌಲಭ್ಯದಿಂದ ಆಫೀಸ್ ಕೆಲಸ ಕೂಡ ಮಾಡಬಹುದು. ಈ ಸ್ಕೋಡಾ ಎನ್ಯಾಕ್ (Skoda Enyaq) ಕಾರ್ ನಲ್ಲಿ ಕುಳಿತಿದ್ದರೆ ನೀವು ಕಾರ್ ನಲ್ಲೇ ಇದ್ದೀರಾ ಎಂದು ಅನ್ನಿಸುವುದಿಲ್ಲ, ಇಲ್ಲಿ ನಿಮಗೆ ಆಫೀಸ್ ಟೇಬಲ್ ಹಾಗೂ 27 ಇಂಚ್ ದೊಡ್ಡ ಮಾನಿಟರ್ ಇಡಲಾಗಿದೆ. ಕೆಲಸ ಮಾಡಿ ಸುಸ್ತು ಎನ್ನಿಸಿದರೆ, ರೆಸ್ಟ್ ಮಾಡುವುದಕ್ಕೆ ಬೆಡ್ ಇದೆ.

ಕಾರ್ ಒಳಗೆ ಹೈ ಸ್ಪೀಡ್ ಇಂಟರ್ನೆಟ್ ಇರುವುದರಿಂದ ಆಫೀಸ್ ವರ್ಕ್ ಗೆ ಯಾವುದೇ ತೊಂದರೆ ಆಗುವುದಿಲ್ಲ. ಸ್ಕೋಡಾ ಎನ್ಯಾಕ್ ಕಾರ್ ನ ಛಾವಣಿ ಮೇಲೆ ಟೆಂಟ್ ಒಂದನ್ನು ಇಡಲಾಗಿದ್ದು, ಅದನ್ನು ತೆರೆದರೆ ನಿಮಗೆ ಕ್ಯಾಂಪಿಂಗ್ ಫೀಲ್ ನೀಡುತ್ತದೆ. ಇದರಿಂದಾಗಿ ನಿಮಗೆ ಬಿಸಿಲು ಮತ್ತು ಮಳೆ ಎರಡರಿಂದಲು ರಕ್ಷಣೆ ಸಿಗುತ್ತದೆ. ಕ್ಯಾಬಿನ್ ನಲ್ಲಿ ನಿಮಗೆ ಸನ್ ರೂಫ್ ವ್ಯವಸ್ಥೆ ಕೂಡ ಇದೆ. ಇದನ್ನು ಓದಿ..Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

ಇದಿಷ್ಟೆ ಅಲ್ಲದೆ, Skoda Enyaq ನ ಒಳಗೆ ಒಂದು ಪುಟ್ಟ ಕಿಚನ್ ಕೂಡ ಇದೆ, ಇದರಲ್ಲಿ ನೀವು ಟೀ, ಕಾಫಿ ಮಾಡುವುದರ ಜೊತೆಗೆ ಅಡುಗೆ ಕೂಡ ಮಾಡಿಕೊಳ್ಳಬಹುದು..ಈ ಕಾರ್ ನ ಒಳಗಿರುವ ಅಪ್ಲೈಯನ್ಸ್ ಗಳನ್ನು ಬಳಸಲು ಹೆಚ್ಚು ವಿದ್ಯುತ್ ಅವಶ್ಯಕತೆ ಬೇಕಾಗುತ್ತದೆ, ಹಾಗಾಗಿ ನೀವು ಕಾರ್ ನಲ್ಲಿ ಸೋಲಾರ್ ಪ್ಯಾನಲ್ ಕೂಡ ಹಾಕಿಸಿಕೊಳ್ಳಬಹುದು. ಇದು ಎಲ್ಲಾ ಶುಲ್ಕಗಳನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ವಾಹನದ ಪರ್ಫಾರ್ಮೆನ್ಸ್ ಮೇಲೆ ಪ್ರಭಾವ ಬೀರುವುದಿಲ್ಲ. ಇದನ್ನು ಓದಿ..Harley Davidson X440: ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಹಾರ್ಲೆ ಡೇವಿಡ್ ಸನ್- ಗ್ರಾಹಕರು ಇದರಿಂದ ಆಶಿಸುತ್ತಿರುವುದು, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Best News in Kannadakannada livekannada newsKannada Trending Newslive newsLive News Kannadalive trending newsNews in Kannadaskodaskoda carsskoda enyaktop news kannada